ಮತ್ತೆ ರೆಪೋ ದರ ಏರಿಸಿದ RBI: ಬ್ಯಾಂಕ್​ ಸಾಲಗಾರರಿಗೆ ಇಎಂಐ ಮತ್ತಷ್ಟು ಹೊರೆ

ನವದೆಹಲಿ: ಬ್ಯಾಂಕ್​ ಸಾಲಗಾರರಿಗೆ ಮತ್ತೆ ಬಡ್ಡಿ ಏರಿಕೆ ಬರೆ ಎದುರಾಗಿದೆ. 50 ಮೂಲ ಅಂಶಗಳ ಏರಿಕೆಯೊಂದಿಗೆ ರೆಪೋ ದರ ಶೇ 4.90 ರಷ್ಟಾಗಿದ್ದು, ಇಎಂಐ ಮತ್ತಷ್ಟು ದುಬಾರಿಯಾಗಲಿದೆ. ಆರ್​ಬಿಐನ ಹಣಕಾಸು ನೀತಿ ಸಮಿತಿಯ ಮೂರು ದಿನಗಳ ಸಭೆಯ ಬಳಿಕ ರೆಪೋ ದರ ಏರಿಕೆ ನಿರ್ಧಾರವನ್ನು ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್ ಬುಧವಾರ​ ಪ್ರಕಟಿಸಿದ್ದಾರೆ. ಕಳೆದ ತಿಂಗಳು 40 ಮೂಲಾಂಶಗಳೊಂದಿಗೆ ರೆಪೋ ದರ 4.4 ರಷ್ಟಿತ್ತು. ಇದೀಗ 50 ಮೂಲಾಂಶಗಳ ಏರಿಕೆಯೊಂದಿಗೆ ರೆಪೋ ದರ 4.90 ರಷ್ಟಾಗಿದೆ. ಏರುತ್ತಿರುವ … Continue reading ಮತ್ತೆ ರೆಪೋ ದರ ಏರಿಸಿದ RBI: ಬ್ಯಾಂಕ್​ ಸಾಲಗಾರರಿಗೆ ಇಎಂಐ ಮತ್ತಷ್ಟು ಹೊರೆ