More

    ಬಿಗ್​ಬಾಸ್​ ಮನೆಯಿಂದ ಹೊರಬಂದಿರುವ ನಂದಿನಿ 5 ವಾರದಲ್ಲಿ ಗಳಿಸಿದ ಹಣ ಇಷ್ಟೊಂದಾ?

    ಬೆಂಗಳೂರು: ಇನ್ನು ಕೆಲವೇ ದಿನಗಳಲ್ಲಿ ಬಿಗ್​ಬಾಸ್​ ಕನ್ನಡ ಒಟಿಟಿಯ ಮೊದಲನೇ ಆವೃತ್ತಿಗೆ ತೆರೆ ಬೀಳಲಿದ್ದು, ಟಿವಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ಕನ್ನಡದ 9ನೇ ಸೀಸನ್​ಗೆ ಸಿದ್ಧತೆ ನಡೆಯುತ್ತಿದೆ. ಇದು ಫಿನಾಲೆ ವಾರವಾಗಿದ್ದು, ಯಾವ ಸ್ಪರ್ಧಿ ಗೆಲುವು ಸಾಧಿಸಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.

    ಬಿಗ್​ಬಾಸ್​ ಒಟಿಟಿಯಿಂದ ಕಳೆದ ವಾರ ನಂದಿನಿ ಜಿ ಎಲಿಮಿನೇಟ್​ ಆಗಿ ಹೊರಬಂದಿದ್ದಾರೆ. ನಂದಿನಿ ಅವರ ಎಲಿಮಿನೇಷನ್​ ಸಹಸ್ಪರ್ಧಿಗಳಿಗೂ ಮತ್ತು ವೀಕ್ಷಕರಿಗೂ ತುಂಬಾ ಅನಿರೀಕ್ಷಿತವಾಗಿದೆ. ಏಕೆಂದರೆ, ನಂದಿನಿ ಅವರು ಪ್ರಬಲ ಪ್ರತಿಸ್ಫರ್ಧಿಯಾಗಿದ್ದರು. ಜಸ್ವಂತ್​ ಮತ್ತು ನಂದಿನಿ ಒಟ್ಟಿಗೆ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಇಬ್ಬರು ಪ್ರೇಮಿಗಳಾಗಿದ್ದು, ಮನೆಯೊಳಗೂ ತಮ್ಮ ಪ್ರೀತಿಯನ್ನು ಮುಂದುವರಿಸಿದ್ದರು. ಇಬ್ಬರ ಲವ್​ ಸ್ಟೋರಿ ವೀಕ್ಷಕರಿಗೆ ಇಷ್ಟವು ಆಗಿತ್ತು. ಆದರೆ, ನಂದಿನಿಯ ಅತಿಯಾದ ವರ್ತನೆ ವೀಕ್ಷಕರಿಗೆ ಕಿರಿಕಿರಿ ಉಂಟುಮಾಡಿತ್ತು, ಜಸ್ವಂತ್​ ಮೇಲೆ ತುಂಬಾ ಕಣ್ಣಿಟ್ಟಿದ್ದ ನಂದಿನಿ, ಆತ ತನಗೆ ಮಾತ್ರ ಸ್ವಂತ ಎನ್ನುವಂತೆ ವರ್ತಿಸುತ್ತಿದ್ದರು. ಹೀಗಾಗಿ ನಂದಿನಿ ಎಲಿಮಿನೇಟ್​ ಆಗಲಿ ಎಂದು ಒಂದು ವರ್ಗದ ವೀಕ್ಷಕರು ಬಯಸಿದ್ದರು.

    ಅದೇನೇ ಇರಲಿ ಸದ್ಯ ನಂದಿನಿ ಹೊರಬಂದಿದ್ದಾರೆ. ಇದೀಗ ಜಸ್ವಂತ್​, ದೊಡ್ಮನೆಯಲ್ಲಿ ನಂದಿನಿ ಇಲ್ಲದ ದಿನಗಳ ಕಳೆಯುತ್ತಿದ್ದಾರೆ. ಈಗಲಾದರೂ ಆಟದ ಕಡೆ ಗಮನಹರಿಸಿ, ಉತ್ತಮವಾಗಿ ಆಡಲಿ ಎಂದು ವೀಕ್ಷಕರು ಬಯಸಿದ್ದಾರೆ. ಸಿಕ್ಕ ಸಮಯದಲ್ಲಿ ನಂದಿನಿಯೂ ಸಹ ಒಳ್ಳೆಯ ಸ್ಪರ್ಧೆಯನ್ನು ನೀಡಿದ್ದಾರೆ.

    ಇದೀಗ ನಂದಿನಿ ಹೊರಬಂದ ಬಳಿಕ ಅವರು ಬಿಗ್​ಬಾಸ್​ ಮನೆಯಲ್ಲಿ ಗಳಿಸಿದ ಹಣದ ಬಗ್ಗೆ ವೀಕ್ಷಕರು ಪ್ರಶ್ನಿಸುತ್ತಿದ್ದಾರೆ. ಎಷ್ಟು ಗಳಿಸಿರಬಹುದು ಎಂಬುದನ್ನು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಮೂಲಗಳ ಪ್ರಕಾರ ಪ್ರತಿ ವಾರಕ್ಕೆ ನಂದಿನಿ ಅವರಗೆ 5 ಲಕ್ಷ ರೂಪಾಯಿ ಸಂಭಾವನೆ ಸಿಗುತ್ತಿತ್ತು ಎನ್ನಲಾಗಿದೆ. ನಂದಿನಿ ಒಟ್ಟು 5 ವಾರಗಳ ಕಾಲ ಮನೆಯಲ್ಲಿದ್ದರು. ವಾರಕ್ಕೆ 5 ಲಕ್ಷ ಅಂದರೂ ಐದು ವಾರಕ್ಕೆ 25 ಲಕ್ಷ ರೂ. ಹಣ ನಂದಿನಿಗೆ ಸಿಕ್ಕಿದೆ ಎಂದು ಹೇಳಲಾಗಿದೆ. ಆದರೆ, ಇದು ಎಷ್ಟು ಖಚಿತವೋ ಅವರೇ ಹೇಳಬೇಕಾಗಿದೆ. ಆದರೆ, ಬಿಗ್​ಬಾಸ್ ಮೂಲಗಳ ಪ್ರಕಾರ 25 ಲಕ್ಷ ರೂ. ಸಿಕ್ಕಿದೆ ಎನ್ನಲಾಗುತ್ತಿದೆ.

    ಅಂದಹಾಗೆ ನಂದಿನಿ, ಹಿಂದಿ ರಿಯಾಲಿಟಿ ಶೋ, ರೋಡೀಸ್: ಜರ್ನಿ ಇನ್ ಸೌತ್ ಆಫ್ರಿಕಾ 2022 ರ ವಿಜೇತೆ. ಇದರ ಜೊತೆಗೆ, ನಂದಿನಿ ವೃತ್ತಿಪರ ನೃತ್ಯಗಾರ್ತಿ, ಫುಟ್‌ಬಾಲ್ ಆಟಗಾರ್ತಿ, ಅಥ್ಲೀಟ್ ಮತ್ತು ಫಿಟ್‌ನೆಸ್ ತರಬೇತುದಾರರಾಗಿದ್ದಾರೆ. (ಏಜೆನ್ಸೀಸ್​)

    ವಿರಾಮದ ವೇಳೆ ಜವರಾಯನ ಅಟ್ಟಹಾಸ: ಮಂಗಳೂರು ಮೂಲದ ಮಲಯಾಳಿ ವೈದ್ಯೆ ಪುಣೆಯಲ್ಲಿ ದುರ್ಮರಣ

    ಬೈಕ್​ ಮೇಲೆ ಕುಳಿತು ಪ್ರಯಾಣ ಮಾಡಿದ ಗೂಳಿ! ನೀವು ಇದುವರೆಗೂ ನೋಡಿರದ ವಿಡಿಯೋ ಇದು…

    ಚಲಿಸುತ್ತಿದ್ದ ಬೈಕ್​​​ ಮುಂದೆ ದಿಢೀರ್​ ಜಿಗಿದ ಬೀದಿ ನಾಯಿ: ಅಪಘಾತದಲ್ಲಿ ಯುವಕ ದುರಂತ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts