More

    ಮುಸ್ಲಿಂ ಕುಟುಂಬದಿಂದ ಹಿಂದು ಯುವಕನ ಹತ್ಯೆ: ಕಣ್ಣೆದುರೇ ಗಂಡನನ್ನು ಕಳ್ಕೊಂಡ ಸುಲ್ತಾನಾಳ ನೋವಿನ ಮಾತಿದು

    ಹೈದರಾಬಾದ್​: ತಾನು ಇಷ್ಟಪಟ್ಟ ಅನ್ಯಧರ್ಮದ ಯುವತಿಯ ಜತೆ ಮದುವೆಯಾಗಿದ್ದಕ್ಕೆ ಯುವಕನೊಬ್ಬ ನಡುರಸ್ತೆಯಲ್ಲಿ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದ್ದು, ಇಡೀ ದೇಶವೇ ಈ ಘಟನೆಯನ್ನು ಖಂಡಿಸಿದೆ. ಆರೋಪಿಗೆ ತಕ್ಕ ಶಿಕ್ಷೆಯಾಗಬೇಕೆಂದು ಜನರು ಆಗ್ರಹಿಸಿದ್ದಾರೆ.

    ಮುಸ್ಲಿಂ ಯುವತಿ ಜತೆ ಮದುವೆಯಾದ ರಂಗಾರೆಡ್ಡಿ ಜಿಲ್ಲೆಯ ಮಾರ್ಪಳ್ಳಿ ಗ್ರಾಮದ ವಿಲ್ಲುಪುರಂ ನಾಗರಾಜ್ ಭೀಕರ ಹತ್ಯೆಯಾಗಿದ್ದು, ಮದುವೆಯಾದ ಬೆನ್ನಲ್ಲೇ ಮಾರ್ಪಳ್ಳಿ ಸಮೀಪದ ಘನಾಪುರ ಗ್ರಾಮದ ಸೈಯದ್ ಅಶ್ರೀನ್ ಸುಲ್ತಾನಾ ಪತಿಯನ್ನು ಕಳೆದುಕೊಂಡು ಕಣ್ಣೀರು ಸುರಿಸುತ್ತಿದ್ದಾಳೆ.

    ಅನ್ಯಧರ್ಮೀಯ ವಿವಾಹವಾದ ಬಿ. ನಾಗರಾಜು ಮತ್ತು ಸೈಯದ್​ ಅಶ್ರಿನ್​ ಸುಲ್ತಾನಾಗೆ ಮುಂದೆ ಎದುರಾಗುವ ಅಪಾಯದ ಬಗ್ಗೆ ಚೆನ್ನಾಗಿಯೇ ತಿಳಿದಿತ್ತು. ನಾಲ್ಕು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ಸಮಯದಲ್ಲೇ ನಾಗರಾಜ್​ಗೆ ಬೆದರಿಕೆಗಳು ಬರುತ್ತಿತ್ತು. ಪ್ರೀತಿ ಪಾತ್ರದವರೇ ಸುಲ್ತಾನಾಗೂ ಬೆದರಿಕೆ ಹಾಕುತ್ತಿದ್ದರು. ಆದರೆ, ಅದ್ಯಾವುದಕ್ಕೂ ಹೆದರದ ಪ್ರೇಮಿಗಳು ಕುಟುಂಬಸ್ಥರ ವಿರೋಧದ ಮಧ್ಯೆ ಓಡಿಹೋಗಿ ಮದುವೆಯಾಗಿ ಕಣ್ಣುತಪ್ಪಿಸಿ ಸಂಸಾರ ನಡೆಸುತ್ತಿದ್ದರು. ಎಷ್ಟು ದಿನ ಅಂತಾ ಕದ್ದು ಮುಚ್ಚಿ ಇರಲು ಸಾಧ್ಯ. ಕೊನೆಗೆ ಸುಲ್ತಾನಳ ಕುಟುಂಬಕ್ಕೆ ತಿಳಿದು ಆಕೆ ಅಣ್ಣ ಮತ್ತು ಸ್ನೇಹಿತ ಮಾರಕಾಯುಧಗಳಿಂದ ನಾಗರಾಜ್​ನ ಮೇಲೆ ದಾಳಿ ನಡೆಸಿ ಬರ್ಬರವಾಗಿ ಕೊಂದು ಹಾಕಿದ್ದಾರೆ.

    ಪತಿಯನ್ನು ಕಳೆದುಕೊಂಡ ಬೆನ್ನಲ್ಲೇ ದುಃಖ ಸಾಗರದಲ್ಲಿ ಮುಳುಗಿರುವ ಸುಲ್ತಾನ ತನ್ನ ತವರಿನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಮ್ಮದು ಸಾಂಪ್ರದಾಯಿಕ ಮುಸ್ಲಿಂ ಕುಟುಂಬ. ಧರ್ಮದ ಆಚರಣೆಗೆ ಕಟ್ಟುಬಿದ್ದ ಕುಟುಂಬವಾಗಿತ್ತು. ಹಿಂದು ದಲಿತನಾಗಿರುವ ನಾಗರಾಜ್​ ಜತೆಗಿನ ನನ್ನ ಪ್ರೀತಿಗೆ ತುಂಬಾ ವಿರೋಧ ವ್ಯಕ್ತಪಡಿಸುತ್ತಿದ್ದರು. ಮದುವೆಗೂ ಮುನ್ನ ನನ್ನ ಸಹೋದರ ನನ್ನನ್ನು ಕೊಲೆ ಮಾಡಲು ಯತ್ನಿಸಿದ. ಎರಡು ಬಾರಿ ನನ್ನನ್ನು ನೇಣಿಗೆ ಪ್ರಯತ್ನಿಸಿದ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಇಬ್ಬರು ಒಬ್ಬರನೊಬ್ಬರು ಬಿಟ್ಟಿರಲಾಗದೇ ಕೆಲವು ದಿನಗಳ ನಂತರ ನಾನು ಮತ್ತು ನಾಗರಾಜು ಹೈದರಾಬಾದ್‌ಗೆ ಓಡಿಹೋದೆವು ಮತ್ತು ಆರ್ಯ ಸಮಾಜ ಮಂದಿರದಲ್ಲಿ ವಿವಾಹವಾದೆವು. ಆದರೂ ಕೂಡ ನಮ್ಮ ಜೀವನ ಕತ್ತಿಯ ಮೇಲಿನ ನಡಿಗೆಯಾಗಿತ್ತು. ಕ್ಷಣ ಕ್ಷಣಕ್ಕೂ ಭಯ ಆವರಿಸಿತ್ತು. ನೀನು ಅವನನ್ನ ಮದುವೆಯಾದರೆ ನಿನ್ನ ಅಣ್ಣ ಸಾಯಿಸದೇ ಬಿಡುವುದಿಲ್ಲ ಎಂದು ನನ್ನ ತಾಯಿ ಎಚ್ಚರಿಕೆ ನೀಡಿದ್ದರು ಎಂದು ಸುಲ್ತಾನ ತಿಳಿಸಿದರು.

    ನಾಗರಾಜ್​ ಮತ್ತು ಸುಲ್ತಾನಾ ತಮ್ಮ ಹೊಸ ಜೀವನದಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದರು. ಇಬ್ಬರು ತಂತಮ್ಮ ಸಿಮ್ ಕಾರ್ಡ್‌ಗಳನ್ನು ಬೀಸಾಡಿದ್ದರು. ಹೀಗಾಗಿ ಕೆಲವು ದಿನಗಳವರೆಗೆ ಇಬ್ಬರು ಟ್ರ್ಯಾಕ್ ಮಾಡಲು ಆಗಿರಲಿಲ್ಲ. ಅಲ್ಲದೆ, ಜೀವ ಬೆದರಿಕೆಯ ಕುರಿತು ಪೊಲೀಸ್ ಅಧೀಕ್ಷಕರ ಕಚೇರಿಗೆ ತಿಳಿಸಿ, ರಕ್ಷಣೆ ಕೋರಿದ್ದರು. ಆದರೆ, ಸುಲ್ತಾನಾ ಅವರ ಸಹೋದರ ಸೈಯದ್ ಮೊಬಿನ್ ಅಹಮದ್ ನಾಗರಾಜು ಮೇಲೆ ಅಂತರ್ಧರ್ಮೀಯ ವಿವಾಹವಾದಾಗಿನಿಂದ ತೀವ್ರ ದ್ವೇಷವನ್ನು ಬೆಳೆಸಿಕೊಂಡಿದ್ದರು. ತನ್ನ ಸಹಚರ, ಮೊಹಮ್ಮದ್ ಮಸೂದ್ ಅಹಮದ್ ಜತೆಗೆ ಸೇರಿ ಸಹೋದರಿಯನ್ನು ಹುಡುಕಿ ನಾಗರಾಜುನನ್ನು ಕೊಲ್ಲಲು ಸಂಚು ರೂಪಿಸಿದ್ದನು.

    ಒಂದು ತಿಂಗಳ ಹಿಂದೆ ಆರೋಪಿ ನಾಗರಾಜು ಪತ್ತೆಗೆ ಯತ್ನಿಸಿದರಾದರೂ ಆತನ ಪತ್ತೆಗೆ ವಿಫಲವಾಗಿತ್ತು. ಆದರೆ, ಕೆಲ ದಿನಗಳ ಹಿಂದೆ ಆರೋಪಿಗಳು ತಮ್ಮ ಸ್ಕೂಟರ್‌ನಲ್ಲಿ ಅವರನ್ನು ಹಿಂಬಾಲಿಸಿದರು ಮತ್ತು ಸರೂರ್​ ನಗರದ ಪಂಜಾಲ ಅನಿಲ್ ಕುಮಾರ್ ಕಾಲೋನಿಯಲ್ಲಿ ನಾಗರಾಜ್​ ಮತ್ತು ಸುಲ್ತಾನಳನ್ನು ಪತ್ತೆ ಮಾಡಿದರು. ನಾಗರಾಜು ಮತ್ತು ಸುಲ್ತಾನಾ ತಮ್ಮ ಸ್ಕೂಟಿಯಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದಾಗ ಮೊಬಿನ್ ಅಹಮದ್ ಮತ್ತು ಮಸೂದ್ ಅಹಮದ್ ಅವರು ಇಬ್ಬರನ್ನು ಅಡ್ಡಗಟ್ಟಿದರು. ತಕ್ಷಣ ಸ್ಥಳದಲ್ಲಿಯೇ ಇಬ್ಬರು ಸೇರಿ ನಾಗರಾಜು ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಬರ್ಬವಾಗಿ ಕೊಲೆ ಮಾಡಿದರು.

    ಈ ವೇಳೆ ಸುಲ್ತಾನಾ ಕರುಣೆ ತೋರಿಸು ಅಂತಾ ತನ್ನ ಸಹೋದರನ ಕಾಲಿಗೆ ಬಿದ್ದು ಬೇಡಿಕೊಂಡರು ಸಾಧ್ಯವಾಗಲಿಲ್ಲ. ಇದಲ್ಲದೆ, ಸಹಾಯಕ್ಕಾಗಿ ಸಾರ್ವಜನಿಕರನ್ನು ಪ್ರಚೋದಿಸಿದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ನಾಗರಾಜು ಮೃತಪಟ್ಟಿರುವುದನ್ನು ದೃಢವಾದ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದರು. ಸದ್ಯ ಈ ಪ್ರಕರಣ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. (ಏಜೆನ್ಸೀಸ್​)

    ಅನ್ಯಧರ್ಮಿಯಳನ್ನು ಪ್ರೀತಿಸಿ ಮದ್ವೆಯಾದದ್ದೇ ತಪ್ಪಾಯ್ತು! ನಡುರಸ್ತೆಯಲ್ಲಿ ಬರ್ಬರವಾಗಿ ಹತ್ಯೆಯಾದ ಯುವಕ

    ನಾನು ನಿರ್ದೇಶಕರ ಜತೆ ಮಲಗಿದ್ದಕ್ಕೆ ಸೋನಾಕ್ಷಿಗೆ ಸಿನಿಮಾ ಅವಕಾಶ ಸಿಕ್ಕಿತ್ತು: ಪೂಜಾ ಮಿಶ್ರಾ ಸ್ಫೋಟಕ ಹೇಳಿಕೆ

    ಕುಣಿಗಲ್​ಗೂ ತಟ್ಟಿದ PSI ಎಕ್ಸಾಂ ಅಕ್ರಮದ ನಂಟು: ರೈತರಾದ ನಾವು 80 ಲಕ್ಷ ಹಣ ಎಲ್ಲಿಂದ ತರೋದು? ಪೇದೆ ತಂದೆ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts