More

    ಇಸ್ಲಾಂಗೆ ಮತಾಂತರಗೊಂಡು ಮದ್ವೆ ಆಗದಿದ್ರೆ ಕೊಲ್ಲುವುದಾಗಿ ವಿದ್ಯಾರ್ಥಿನಿಗೆ ಬೆದರಿಕೆ: ಯುವಕನ ಬಂಧನ

    ಭೋಪಾಲ್​: ನರ್ಸಿಂಗ್​ ವಿದ್ಯಾರ್ಥಿನಿಯೊಬ್ಬಳ ಹಿಂದೆ ಬಿದ್ದು, ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ತನ್ನನ್ನು ಮದುವೆ ಆಗದಿದ್ದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಮುಸ್ಲಿಂ ಯುವಕನನ್ನು ಮಧ್ಯಪ್ರದೇಶ ಪೊಲೀಸರು ಬಂಧನ ಮಾಡಿದ್ದಾರೆ. ​

    ಮನು ಮನ್ಸೂರಿ (22) ಬಂಧಿತ ಆರೋಪಿ. ಸೋಮವಾರ 19 ವರ್ಷದ ನರ್ಸಿಂಗ್​ ವಿದ್ಯಾರ್ಥಿನಿಯ ಮುಂದೆ ದಿಢೀರ್​ ಎದುರಾದ ಮನ್ಸೂರಿ, ಆಕೆಗೆ ಹೂವುಗಳನ್ನು ತೋರಿಸಿ, ಮದುವೆ ಆಗುವಂತೆ ದುಂಬಾಲು ಬಿದ್ದಿದ್ದ. ಈ ಘಟನೆ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ. ವಿದ್ಯಾರ್ಥಿನಿ ಮತ್ತು ಮನ್ಸೂರಿ ಒಂದೇ ಗ್ರಾಮದ ನಿವಾಸಿಗಳು.

    ಆರೋಪಿ ಹೇಗೋ ನನ್ನ ಮೊಬೈಲ್​ ನಂಬರ್​ ಪಡೆದುಕೊಂಡಿದ್ದಾನೆ. ವಾಟ್ಸ್​ಆ್ಯಪ್​ ಮೂಲಕ ನನಗೆ ಕಿರುಕುಳ ನೀಡುತ್ತಿದ್ದು, ಮದುವೆ ಮಾಡಿಕೊಳ್ಳಲು ನಿರಾಕರಿಸಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಆತನೊಬ್ಬ ಮುಸ್ಲಿಂ ಯುವಕ. ನಮ್ಮ ಗ್ರಾಮದಿಂದ ಕಾಲೇಜಿನವರೆಗೂ ಪ್ರತಿದಿನ ನನ್ನನ್ನು ಹಿಂಬಾಲಿಸುತ್ತಿದ್ದಾನೆ. ಒಮ್ಮೆ ನನ್ನ ಕೈ ಹಿಡಿದುಕೊಂಡ ಮತ್ತು ನಾನು ಜೋರಾಗಿ ಕೂಗಿಕೊಂಡೆ. ಬಳಿಕ ಓಡಿ ಹೋಗುವ ಮುನ್ನ ನನ್ನ ಮೇಲೆ ಹೂಗಳನ್ನು ಚೆಲ್ಲಿ, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು, ನನ್ನನ್ನು ಮದುವೆ ಆಗದಿದ್ದರೆ, ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ. ನಂತರ ಗನ್​ ಹಿಡಿದು ತೆಗೆಸಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ನನಗೆ ಕಳುಹಿಸಿದ ಎಂದು ಸಂತ್ರಸ್ತೆ ಹೇಳಿದ್ದಾಳೆ. ಹಿಂದು ಸಂಘಟನೆಯೊಂದರ ಸಹಾಯ ಪಡೆದು ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ.

    ಸದ್ಯ ಆರೋಪಿ ಮನ್ಸೂರಿಯನ್ನು ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಆರೋಪ ಸಾಬೀತಾದಲ್ಲಿ ಆತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುತ್ತದೆ. ಈ ವರ್ಷದ ಜನವರಿಯಲ್ಲಿ ಮನ್ಸೂರಿ, ಮತ್ತೊಬ್ಬ ಮಹಿಳೆಗೆ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಅವರಿಗೆ ಜಾಮೀನು ನೀಡಲಾಗಿತ್ತು ಎಂದು ಹೇಳಿದ್ದರೆ. (ಏಜೆನ್ಸೀಸ್​)

    ಲಂಚ ಸಂಗ್ರಹಕ್ಕೆ ಏಜೆಂಟ್​ಗಳ ನೇಮಕ! RTO ಕಚೇರಿ ಮೇಲಿನ ದಾಳಿಯ ವೇಳೆ ಸ್ಫೋಟಕ ಮಾಹಿತಿ ಬಯಲು

    ಪೊಲೀಸರ ರಾತ್ರಿ ಪ್ರಯಾಣಕ್ಕೆ ನಿರ್ಬಂಧ: ರಸ್ತೆ ಅಪಘಾತಗಳಲ್ಲಿ ಸಿಬ್ಬಂದಿ ಸಾವು ಪ್ರಕರಣಗಳ ಹೆಚ್ಚಳ

    ವಿಶೇಷ ನೆರವಿಗಾಗಿ ಕೇಂದ್ರಕ್ಕೆ ಮೊರೆ: ರಾಜ್ಯಕ್ಕೆ ಆಗಮಿಸಿದ ಕೇಂದ್ರ ನೆರೆ ಅಧ್ಯಯನ ತಂಡ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts