More

    ಈ ಬಂಕ್​ನಲ್ಲಿ 3 ದಿನ ಉಚಿತ ಪೆಟ್ರೋಲ್​: ಕಾರಣ ಕೇಳಿದ್ರೆ ಮಾಲೀಕನಿಗೆ ಖಂಡಿತ ಶಹಬ್ಬಾಸ್​ ಅಂತಿರಾ..!

    ಭೋಪಾಲ್​: ದೇಶದಲ್ಲಿ ಇಂಧನ ದರ ರಾಕೆಟ್​ ವೇಗದಲ್ಲಿ ಏರಿಕೆ ಆಗುತ್ತಿದೆ. ದರ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಈಗಾಗಲೇ ಪೆಟ್ರೋಲ್​ ಶತಕ ಬಾರಿಸಿ ಮುನ್ನುಗ್ಗುತ್ತಿದ್ದರೆ, ಡೀಸೆಲ್​ ಕೆಲವೆಡೆ ನೂರರ ಗಡಿ ಮುಟ್ಟಿದೆ. ಇಂಧನ ದರ ಏರಿಕೆ ಪರಿಣಾಮ ಇತರೆ ಸೇವೆಗಳ ಮೇಲೂ ಬಿದ್ದಿರುವುದರಿಂದ ಜನ ಸಾಮಾನ್ಯರಿಗೆ ಇದೇ ಚಿಂತೆ ಆಗಿದೆ.

    ಇದರ ನಡುವೆ ಮಧ್ಯಪ್ರದೇಶದ ವ್ಯಕ್ತಿಯೊಬ್ಬ ಮೂರು ದಿನಗಳ ಕಾಲ ಪೆಟ್ರೋಲ್ ಅನ್ನು ಉಚಿತವಾಗಿ ನೀಡುತ್ತಿದ್ದಾರೆ. ಇಂತಹ ಸಮಯದಲ್ಲಿ ಪೆಟ್ರೋಲ್​ ಅನ್ನು ಉಚಿತವಾಗಿ ನೀಡುತ್ತಿರುವ ಆ ಮಹಾನುಭಾವ ಯಾರಪ್ಪ ಎಂದು ನೋಡುವುದಾದರೆ, ಅವರ ಹೆಸರು ದೀಪಕ್​ ಸೈನಾನಿ. ಇವರು ಬೆತುಲ್​ ಜಿಲ್ಲೆಯವರು. ದೀಪಕ್​ ಅವರ ಸಹೋದರಿ ಅ.9 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ದೀಪಕ್​ ತುಂಬಾ ಖುಷಿಯಾಗಿದ್ದಾರೆ.

    ದೀಪಕ್​ ಅವರು ಪೆಟ್ರೋಲ್​ ಬಂಕ್​ ಮಾಲೀಕರಾಗಿದ್ದು, ಮನೆಗೆ ಹೊಸ ಅತಿಥಿ ಬಂದಿರುವ ಖಷಿಯನ್ನು ವಿನೂತನವಾಗಿ ಹಂಚಿಕೊಳ್ಳಬೇಕೆಂದು ನಿರ್ಧರಿಸಿದ್ದಾರೆ. ಈ ವೇಳೆ ಅವರ ತಲೆಗೆ ತಕ್ಷಣ ಹೊಳೆದಿದ್ದು, ಉಚಿತವಾಗಿ ಪೆಟ್ರೋಲ್​ ನೀಡುವುದು. ಅಕ್ಟೋಬರ್​ 13 ರಿಂದ 15ರವರೆಗೆ ಮೂರು ದಿನಗಳ ಕಾಲ ಈ ಆಫರ್​ ನೀಡಿದ್ದಾರೆ.

    ಬೆಳಗ್ಗೆ 9 ರಿಂದ 11 ಗಂಟೆ ಮತ್ತು ಸಂಜೆ 5 ರಿಂದ 7 ಗಂಟೆಯವರೆಗೆ ಯಾರು ಪೆಟ್ರೋಲ್​ ಖರೀದಿಸುತ್ತಾರೋ ಅವರಿಗೆ ಹೆಚ್ಚುವರಿ ಪೆಟ್ರೋಲ್​ ಅನ್ನು ಉಚಿತವಾಗಿ ನೀಡುವುದಾಗಿ ದೀಪಕ್​ ತಿಳಿಸಿದ್ದಾರೆ. 100 ರೂ. ಪೆಟ್ರೋಲ್​ ಖರೀದಿಸಿದವರಿಗೆ ಶೇ. 5 ರಷ್ಟು ಹೆಚ್ಚುವರಿ ಪೆಟ್ರೋಲ್​ ಮತ್ತು 200 ರಿಂದ 500 ರೂ. ಪೆಟ್ರೋಲ್​ ಖರೀದಿಸಿದವರಿಗೆ 10 ರಷ್ಟು ಪೆಟ್ರೋಲ್​ ಅನ್ನು ಹೆಚ್ಚುವರಿಯಾಗಿ ಉಚಿತವಾಗಿ ನೀಡುತ್ತಿದ್ದಾರೆ.

    ಇಂಧನ ಗಗನಮುಖಿಯಾಗಿರುವ ಸಂದರ್ಭದಲ್ಲಿ ಉಚಿತವಾಗಿ ಇಂಧನ ನೀಡುತ್ತಿರುವುದು ಮಧ್ಯಪ್ರದೇಶದಲ್ಲಿ ಭಾರೀ ಸುದ್ದಿಯಾಗಿದೆ. ಹೆಣ್ಣು ಮಗು ಹುಟ್ಟಿದಾಗ ಶಪಿಸುವ ಜನರ ಮಧ್ಯೆ ದೀಪಕ್​ ಅವರ ಈ ನಿರ್ಧಾರ ಮೆಚ್ಚುಗೆ ಪಾತ್ರವಾಗಿದೆ. ಅನೇಕರು ದೀಪಕ್​ ಅವರನ್ನು ಕೊಂಡಾಡುತ್ತಿದ್ದಾರೆ. ಅಲ್ಲದೆ, ಅವರ ಪೆಟ್ರೋಲ್​ ಬಂಕ್​ ತುಂಬಿ ತುಳುಕುತ್ತಿದೆ. (ಏಜೆನ್ಸೀಸ್​)

    ಸಂಪಾದನೆ ಮಾಡಿದ್ರೆ ಇಂಥಾ ಅಭಿಮಾನಿಗಳನ್ನು ಸಂಪಾದಿಸ ಬೇಕು: ಫ್ಯಾನ್ಸ್​ಗೆ ಕಿಚ್ಚನ ಧನ್ಯವಾದ

    ಕೇರಳದಲ್ಲಿ ಭೀಕರ ಮಳೆಗೆ ಜನ ತತ್ತರ: ಭಾಗಶಃ ಮುಳುಗಿದ ಬಸ್​ನಿಂದ ಹೊರಬರಲು ಪ್ರಯಾಣಿಕರ ಪರದಾಟ

    ಐಪಿಎಲ್ ಪ್ರಶಸ್ತಿ​ ಗೆಲುವಿನ ಬೆನ್ನಲ್ಲೇ ಮತ್ತೊಂದು ಗುಡ್​​ನ್ಯೂಸ್​ ನೀಡಿದ ಧೋನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts