More

    ಹಿಜಾಬ್​ ವಿವಾದದ ಬಗ್ಗೆ ಕಾಮೆಂಟ್​ ಮಾಡಿದ ಅಮೆರಿಕಕ್ಕೆ ಭಾರತ ಕೊಟ್ಟ ತಿರುಗೇಟು ಹೀಗಿದೆ…

    ನವದೆಹಲಿ: ಕರ್ನಾಟಕದ ಹಿಜಾಬ್​ ವಿವಾದ ರಾಷ್ಟ್ರದ ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬಹಳ ಚರ್ಚೆಯಾಗುತ್ತಿದ್ದು, ಹಿಜಾಬ್​ ಬ್ಯಾನ್​ ಮಾಡಿರುವುದು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದ ಅಮೆರಿಕಕ್ಕೆ ಭಾರತ ಪ್ರತಿಕ್ರಿಯೆ ನೀಡಿದ್ದು, ಪ್ರೇರಣೆ ನೀಡುವ ಅಂತಾರಾಷ್ಟ್ರೀಯ ಕಾಮೆಂಟ್​ಗಳನ್ನು ನಾವು ಸ್ವಾಗತಿಸುವುದಿಲ್ಲ ಎಂದಿದೆ.

    ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್​ ಬಾಗ್ಚಿ ಅವರು ಮಾತನಾಡಿದ್ದು, ಭಾರತವನ್ನು ಚೆನ್ನಾಗಿ ತಿಳಿದಿರುವವರು ಇಲ್ಲಿನ ವಾಸ್ತವಗಳ ಅರಿವನ್ನು ಹೊಂದಿರುತ್ತಾರೆ ಎಂದು ಹೇಳಿದರು.

    ಕರ್ನಾಟಕದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿನ ವಸ್ತ್ರಸಂಹಿತೆ ವಿವಾದವೂ ಇದೀಗ ಕರ್ನಾಟಕ ಹೈಕೋರ್ಟ್​ನ ಪರಿವೀಕ್ಷಣೆಯಲ್ಲಿದೆ. ನಮ್ಮ ಸಂವಿಧಾನದ ಚೌಕಟ್ಟು ಮತ್ತು ಕಾರ್ಯವಿಧಾನಗಳು, ಹಾಗೆಯೇ ನಮ್ಮ ಪ್ರಜಾಸತ್ತಾತ್ಮಕ ನೀತಿ ಮತ್ತು ರಾಜಕೀಯವು ಸಮಸ್ಯೆಗಳನ್ನು ಪರಿಗಣಿಸಿ ಮತ್ತು ಪರಿಹರಿಸುವ ಕೆಲಸ ಮಾಡುತ್ತಿದೆ. ಯಾರು ಭಾರತದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುತ್ತಾರೋ ಅವರು ವಾಸ್ತವಗಳನ್ನು ಅರಿತಿರುತ್ತಾರೆ ಎಂದು ಬಾಗ್ಚಿ ಅವರು ಹೇಳಿದ್ದಾರೆ.

    ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್​ ವಿವಾದದ ಬಗ್ಗೆ ಕೆಲವು ರಾಷ್ಟ್ರಗಳು ಕಾಮೆಂಟ್​ ಮಾಡಿರುವುದರ ಕುರಿತ ಪ್ರಶ್ನೆಗೆ ಬಾಗ್ಚಿ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

    ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿರುವ ರಶಾದ್​ ಹುಸೈನ್​ ಅವರು ಕರ್ನಾಟಕದ ಹಿಜಾಬ್​ ವಿವಾದದ ಕುರಿತು ಟ್ವೀಟ್​ ಮಾಡಿದ್ದಾರೆ. ಶಾಲೆಗಳಲ್ಲಿ ಹಿಜಾಬ್​ ನಿಷೇಧಿಸುವುದು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘನೆಯಾಗುತ್ತದೆ. ಧಾರ್ಮಿಕ ಸ್ವಾತಂತ್ರ್ಯವು ಒಬ್ಬರ ಧಾರ್ಮಿಕ ಉಡುಪನ್ನು ಆಯ್ಕೆ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ. ಭಾರತದ ಕರ್ನಾಟಕ ರಾಜ್ಯವು ಧಾರ್ಮಿಕ ಉಡುಪುಗಳ ಅನುಮತಿಯನ್ನು ನಿರ್ಧರಿಸಬಾರದು. ಶಾಲೆಗಳಲ್ಲಿ ಹಿಜಾಬ್ ನಿಷೇಧವು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಮತ್ತು ಮಹಿಳೆಯರು ಮತ್ತು ಹುಡುಗಿಯರನ್ನು ಕಡೆಗಣಿಸಿದಂತಾಗುತ್ತದೆ ಎಂದು ಟೀಕಿಸಿದ್ದಾರೆ.

    ಇನ್ನು ಹೈಕೋರ್ಟ್​ ಏಕ ಸದಸ್ಯ ಪೀಠದಿಂದ ವಿಸ್ತೃತ ಪೀಠಕ್ಕೆ ಹಿಜಾಬ್​ ಪ್ರಕರಣ ವರ್ಗಾವಣೆ ಆಗಿದ್ದು, ಫೆ. 14ಕ್ಕೆ ವಿಚಾರಣೆ ನಡೆಯಲಿದೆ. ಅಲ್ಲಿಯವರೆಗೆ ತಕ್ಷಣ ಶಾಲಾ-ಕಾಲೇಜು ತೆರೆಯುವಂತೆ ಮತ್ತು ಆದೇಶ ಬರುವವರೆಗೂ ಯಾವುದೇ ಧಾರ್ಮಿಕ ಉಡುಪು ಧರಿಸದಂತೆ ಹೈಕೋರ್ಟ್​ ವಿಸ್ತೃತ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.

    ಇದರ ನಡುವೆ ಹೈಕೋರ್ಟ್​ ನೀಡಿರುವ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ. ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ, ತಕ್ಷಣದ ವಿಚಾರಣೆಯನ್ನು ಸುಪ್ರೀಂಕೋರ್ಟ್​ ನಿರಾಕರಿಸಿದೆ.

    ಇಂತಹ ವಿಚಾರಗಳನ್ನು ರಾಷ್ಟ್ರೀಯ ಮಟ್ಟಕ್ಕೆ ಹರಡಬೇಡಿ. ಸೂಕ್ತ ಸಂದರ್ಭದಲ್ಲಿ ಮಾತ್ರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುತ್ತೇವೆ ಎಂದಿರುವ ಸುಪ್ರೀಂಕೋರ್ಟ್​ ತಕ್ಷಣ ಅರ್ಜಿ ವಿಚಾರಣೆಯನ್ನು ನಿರಾಕರಿಸಿದೆ. (ಏಜೆನ್ಸೀಸ್​)

    ಹಿಜಾಬ್ ವಿವಾದ: ಕರ್ನಾಟಕದ ನಡೆಯನ್ನು ಟೀಕಿಸಿದ ಅಮೆರಿಕ ಹೇಳಿದ್ದು ಹೀಗೆ…

    ಬಟ್ಟೆ ಮೇಲಿಂದ ಮುಟ್ಟಿದ್ರೆ ಲೈಂಗಿಕ ದೌರ್ಜನ್ಯವಲ್ಲ: ವಿವಾದಾತ್ಮಕ ತೀರ್ಪು ನೀಡಿದ್ದ ನ್ಯಾಯಮೂರ್ತಿ ರಾಜೀನಾಮೆ

    ಕೋಲಾರದಲ್ಲಿ ಆರತಕ್ಷತೆ ವೇಳೆ ಕುಸಿದುಬಿದ್ದು ವಧುವಿನ ಬ್ರೈನ್​ ಡೆಡ್: ಸಂಕಷ್ಟದಲ್ಲೂ ಮಾನವೀಯತೆ ಮೆರೆದ ಪಾಲಕರು

    6 ವರ್ಷದ ಬಳಿಕ ಟೈರ್​ನಿಂದ ಮೊಸಳೆಗೆ ಬಿಡುಗಡೆ! ಸರ್ಕಾರದಿಂದ ಆಗದ ಕೆಲ್ಸವನ್ನು ಈತನೊಬ್ಬನೇ ಸಾಧಿಸಿದ್ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts