More

    ಮೊಬೈಲ್​ ಆಸೆಗೆ ಬಿದ್ದ ಬಾಗಲಕೋಟೆ ಯುವಕನಿಗೆ ಮಹಾ ವಂಚನೆ: ನಿಮಗೂ ಈ ರೀತಿ ಆಗಬಹುದು ಎಚ್ಚರ!

    ಬಾಗಲಕೋಟೆ: ಮೊಬೈಲ್ ಕಳಿಸೋದಾಗಿ ಹೇಳಿ ಸೋಂಪಾಪುಡಿ ಹಾಗೂ ಹನುಮಾನ ಲಾಕೆಟ್ ಮತ್ತು ಇಂಗ್ಲಿಷ್ ಪತ್ರಿಕೆ ಪೋಸ್ಟ್ ಮಾಡಿ ಯುವಕನೋರ್ವನಿಗೆ ವಂಚನೆ ‌ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ‌ ತಾಲೂಕಿನ ಜಂಬಗಿ ಕೆಡಿ ಗ್ರಾಮದಲ್ಲಿ ನಡೆದಿದೆ.

    ಕಿರಣ ಪೂಜಾರಿ ಎಂಬ ಯುವಕನಿಗೆ ಎಂಐ ಮೊಬೈಲ್ ಕಂಪನಿ ಹೆಸರಲ್ಲಿ ಕರೆ ಮಾಡಿ ನಿಮಗೆ ಎಂಐ ಕಂಪನಿಯಿಂದ ಒಂದು ಮೊಬೈಲ್ ಆಫರ್ ಬಂದಿದೆ. ಅದನ್ನು ಪೋಸ್ಟ್ ಮೂಲಕ ಕಳಿಸುತ್ತೇವೆ. ನೀವು 1600 ರೂ. ಮಾತ್ರ ಪಾವತಿ ಮಾಡಿ ಮೊಬೈಲ್ ಪಡೆಯಬಹುದು. ಬೇಕಿದ್ದರೆ, ನಿಮಗೆ ಮೊಬೈಲ್ ಕಳಿಸಬಹುದಾ ಎಂದು ಕೇಳಿ ಅಡ್ರೆಸ್ ಪಡೆದಿದ್ದಾರೆ.

    ಇದಾದ ಬಳಿಕ ಕಿರಣ್​ ಅಡ್ರೆಸ್​ಗೆ ಒಂದು ಬಾಕ್ಸ್​ ಪೋಸ್ಟ್ ಮಾಡಿದ್ದಾರೆ. ಪೋಸ್ಟ್​ಮ್ಯಾನ್​ಗೆ ಕಿರಣ 1600 ರೂಪಾಯಿ ನೀಡಿ ಬಾಕ್ಸ್​ ಓಪನ್ ಮಾಡಿದರೆ, ಅದರಲ್ಲಿ ಸೋಂಪಾಪುಡಿ, ಹನುಮಾನ ಲಾಕೆಟ್ ಹಾಗೂ ಒಂದು ಟೈಮ್ಸ್ ಆಫ್​ ಇಂಡಿಯಾ ಪತ್ರಿಕೆ ಕಂಡುಬಂದಿದೆ. ಕರೆ ಮಾಡಿದ್ದ ನಂಬರ್​ಗೆ ಪುನಃ ಕರೆ ಮಾಡಿ ಕೇಳಿದರೆ ಅರ್ಧಕ್ಕೆ ಪೋನ್ ಕಟ್ ಮಾಡಿದ್ದಾರೆ. ನಂತರ ಪೋನ್ ನಾಟ್ ರೀಚೇಬಲ್ ಆಗಿದ್ದು, ಯುವಕ‌ ಮೋಸಕ್ಕೆ ಒಳಗಾಗಿದ್ದಾನೆ. ಸದ್ಯ ಈ ಬಗ್ಗೆ ಯುವಕ ಯಾವುದೇ ದೂರು ನೀಡಿಲ್ಲ. (ದಿಗ್ವಿಜಯ ನ್ಯೂಸ್​)

    ಅಪಘಾತದ ಸಂತ್ರಸ್ತರಿಗೆ ಮೊದಲ 48 ಗಂಟೆಗಳ ಗೋಲ್ಡನ್​ ಅವರ್​ನಲ್ಲಿ ಉಚಿತ ಚಿಕಿತ್ಸೆ: ಸಿಎಂ ಸ್ಟಾಲಿನ್​ ಘೋಷಣೆ

    ಬೆಳಗಾವಿಯಲ್ಲಿ MES ಪುಂಡರ ಪುಂಡಾಟ ಸಮರ್ಥಿಸಿಕೊಂಡ ಸಿಎಂ ಉದ್ಧವ್​ ಠಾಕ್ರೆ: ಪ್ರಧಾನಿ ಮಧ್ಯಪ್ರವೇಶಕ್ಕೆ ಒತ್ತಾಯ

    ಹೆಂಗಸರ ಒಳಉಡುಪನ್ನು ಮಾಸ್ಕ್​ ರೀತಿ ಧರಿಸಿ ವಿಮಾನವೇರಿದ ವ್ಯಕ್ತಿ: ಆತನ ಉತ್ತರ ಕೇಳಿ ಸಿಬ್ಬಂದಿ ಶಾಕ್​!

    ರೈತ ಮಕ್ಕಳ ವಿದ್ಯಾನಿಧಿಗೆ ಪಹಣಿ ತೊಡಕು; ತಂದೆ-ತಾಯಿ ಹೆಸರಲ್ಲಿ ಪಹಣಿ ಇರಬೇಕು ಎಂಬ ನಿಯಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts