More

    ಈ ಊರಲ್ಲಿ ಹಾಲು-ಮೊಸರು ಉಚಿತ! ಅಪ್ಪಿತಪ್ಪಿ ಮಾರಾಟ ಮಾಡಿದ್ರೆ ಎದುರಾಗುತ್ತೆ ಭಾರಿ ಗಂಡಾಂತರ

    ಭೋಪಾಲ್​: ಮಧ್ಯಪ್ರದೇಶದ ಈ ಒಂದು ಗ್ರಾಮದಲ್ಲಿ ಯಾರೊಬ್ಬರು ಸಹ ಹಾಲು, ಮೊಸರು ಸೇರಿದಂತೆ ಇತರೆ ಹಾಲಿನ ಉತ್ಪನ್ನಗಳು ಮಾರಾಟ ಮಾಡುವುದಿಲ್ಲ. ಬದಲಾಗಿ ಉಚಿತವಾಗಿ ಬೇರೆಯವರಿಗೆ ವಿತರಣೆ ಮಾಡುತ್ತಾರೆ. ಇದು ಅಚ್ಚರಿ ಎನಿಸಿದರೂ ಇದು ಇಂದಿಗೂ ನಡೆದುಕೊಂಡು ಬರುತ್ತಿರುವುದು ಸತ್ಯ.

    ಅಂದಹಾಗೆ ಆ ಗ್ರಾಮದ ಹೆಸರು ಚುಡಿಯಾನ್​. ಈ ಗ್ರಾಮದ ಪ್ರತಿಯೊಬ್ಬರ ಮನೆಯಲ್ಲೂ 5 ರಿಂದ 10 ಜಾನುವಾರುಗಳಿವೆ ಮತ್ತು ಪ್ರತಿದಿನ ಸುಮಾರು 1000 ಲೀಟರ್​ ಹಾಲು ಉತ್ಪಾದನೆ ಮಾಡುತ್ತಾರೆ.

    ಗ್ರಾಮಸ್ಥರ ಪ್ರಕಾರ ಹಲವು ವರ್ಷಗಳ ಹಿಂದೆ ಓರ್ವ ಸಂತ ಗ್ರಾಮಕ್ಕೆ ಭೇಟಿ ನೀಡಿದ್ದರಂತೆ. ಆ ಸಂತನ ಹೆಸರು ಚಿನಾಧ್ಯ. ಈ ಸಂದರ್ಭದಲ್ಲಿ ಇಡೀ ಗ್ರಾಮ ಕಾಲರ ರೋಗದಿಂದ ಬಳಲುತ್ತಿತ್ತು. ಈ ಅಪಾಯಕಾರಿ ರೋಗದಿಂದ ಹೊರ ಬರಲು ಯಾವುದಾದರೂ ಪರಿಹಾರ ಹುಡುಕುವಂತೆ ಸಂತನ ಬಳಿ ಗ್ರಾಮಸ್ಥರು ಮನವಿ ಮಾಡಿದ್ದರು. ಅದರಂತೆ ಸಂತನು ಒಂದು ಮಾರ್ಗ ಕಂಡುಕೊಂಡು ಕೆಲದಿನಗಳ ನಂತರ ಗ್ರಾಮಸ್ಥರು ಕಾಲರದಿಂದ ಮುಕ್ತವಾದರು. ಇದಾದ ಬಳಿಕ ಸಂತ ಗ್ರಾಮವನ್ನು ತೊರೆಯುವಾಗ ಹಾಲು, ಮೊಸರು ಇತ್ಯಾದಿಗಳನ್ನು ಮಾರಾಟ ಮಾಡುವುದನ್ನು ತಡೆಯಲು ಕೇಳಿಕೊಂಡಿದ್ದರಂತೆ. ಇಂದಿಗೂ ಸಹ ಗ್ರಾಮಸ್ಥರು ಸಂತನ ಸಲಹೆಯನ್ನು ಪಾಲಿಸುತ್ತಾ ಬರುತ್ತಿದ್ದಾರೆ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡದೇ ಉಚಿತವಾಗಿ ವಿತರಿಸುತ್ತಿದ್ದಾರೆ. ಗ್ರಾಮದ ಕೆಲವರು ಹಾಲು ಮಾರಾಟ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ, ಭಾರಿ ನಷ್ಟವನ್ನು ಅನುಭವಿಸಿದ್ದಾರಂತೆ. ಹೀಗಾಗಿ ಯಾರು ಕೂಡ ಹಾಲಿನ ಉತ್ಪನ್ನವನ್ನು ಮಾರಾಟ ಮಾಡುವುದಿಲ್ಲ.

    ಒಮ್ಮೆ ಗ್ರಾಮದ ಕುಟುಂಬವೊಂದು ಹರಿಯಾಣದಿಂದ ಎಮ್ಮೆಗಳನ್ನು ಖರೀದಿಸಿ ತಂದಿದ್ದರು ಮತ್ತು ಹಾಲಿನ ಉತ್ಪನ್ನಗಳ ವ್ಯಾಪಾರ ಆರಂಭಿಸಿದ್ದರು. ಇತರ ಗ್ರಾಮಸ್ಥರು ಸಂತನ ಮಾತನ್ನು ತಪ್ಪದಂತೆ ಕುಟುಂಬಕ್ಕೆ ಕೇಳಿಕೊಂಡರು. ಆದರೂ ಅವರು ತಮ್ಮ ವ್ಯವಹಾರವನ್ನು ಮುಂದುವರೆಸಿದರು. ಆದರೆ, ಕೇವಲ ಒಂದು ವರ್ಷದೊಳಗೆ ಅವರ 9 ಆರೋಗ್ಯಯುತ ಎಮ್ಮೆಗಳು ಸತ್ತು ಹೋದವು. ಇದರಿಂದಾಗಿ ಕುಟುಂಬವು ಭಾರೀ ತೀವ್ರ ನಷ್ಟವನ್ನು ಅನುಭವಿಸಬೇಕಾಯಿತು ಎಂದು ಸಂತನ ವಂಶಸ್ಥರಾದ ಕಿಶನ್ ಮಹಾರಾಜ್ ಎಂಬುವರು ಹೇಳಿದ್ದಾರೆ.

    ಅಂದಹಾಗೆ ಚುಡಿಯಾನ್ ಗ್ರಾಮಸ್ಥರು ಬೆಳಗ್ಗೆ ಬಡವರಿಗೆ ಹಾಲು ಹಂಚುತ್ತಾರೆ ಮತ್ತು ಉಳಿದ ಹಾಲಿನಿಂದ ಹಸುವಿನ ತುಪ್ಪ ತಯಾರಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ.

    ಚೈನಾಧ್ಯ ಸಂತನ ಹೆಸರಿನಲ್ಲಿ ದೇವಸ್ಥಾನ ಸಹ ಇದ್ದು, ಜಾತ್ರೆಯನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಔತಣವನ್ನು ಆಯೋಜಿಸಲಾಗುತ್ತದೆ, ಅಲ್ಲಿ ದೇಶಿ ತುಪ್ಪದಿಂದ ಆಹಾರವನ್ನು ತಯಾರಿಸಲಾಗುತ್ತದೆ. ಗ್ರಾಮಸ್ಥರು ಈ ಆಹಾರವನ್ನು ಸಂತನಿಗೆ ನೈವೇದ್ಯವಾಗಿ ಸೇವಿಸುತ್ತಾರೆ. ಕೆಲವು ನಿರ್ದಿಷ್ಟ ಹಣ್ಣುಗಳನ್ನು ಮಾರಾಟ ಮಾಡದಂತೆ ಸಂತನು ಗ್ರಾಮಸ್ಥರನ್ನು ಕೇಳಿಕೊಂಡಿದ್ದರು ಎಂದು ಹೇಳಲಾಗುತ್ತದೆ. (ಏಜೆನ್ಸೀಸ್​)

    ಆನ್​ಲೈನ್​ನಲ್ಲಿ ಸ್ಮಾರ್ಟ್​ಫೋನ್ ಬುಕ್​ ಮಾಡಿದ ವಿದ್ಯಾರ್ಥಿನಿ ಹಣಕ್ಕಾಗಿ ಹಿಡಿದ ದಾರಿ ನಿಜಕ್ಕೂ ಆಘಾತಕಾರಿ!

    ಅರ್ಚನಾ ನಾಗ್ ಹನಿಟ್ರ್ಯಾಪ್​ ಕೇಸ್​: ಸಾಲದ ಹಣ ವಾಪಸ್​ ಕೇಳಿದ ಉದ್ಯಮಿಗೆ ಈಕೆ ಕೊಟ್ಟಿದ್ದಳು ಬಿಗ್​ ಶಾಕ್!

    ಡಿಕೆಶಿ ಸ್ವಕ್ಷೇತ್ರದಲ್ಲಿ ಮತ್ತೆ ಏಸುಕ್ರಿಸ್ತನ ಜಪ: ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷರಿಂದ ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts