More

    ಭೂಕಂಪನಕ್ಕೆ ಅಲುಗಾಡಿದ ಕಟ್ಟಡ, ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಿನಿ ಸುನಾಮಿ! ಇಲ್ಲಿದೆ ಭಯಾನಕ ವಿಡಿಯೋ

    ಮೆಕ್ಸಿಕೋ: ಇಲ್ಲಿನ ಪೆಸಿಫಿಕ್​ ಕರಾವಳಿಯಲ್ಲಿ ಸೋಮವಾರ ಸಂಭವಿಸಿದ ಬೃಹತ್​ ಭೂಕಂಪನದಿಂದಾಗಿ ನಗರದ ಕಟ್ಟಡಗಳು, ರಸ್ತೆಗಳು ಹಾಗೂ ಕಾರುಗಳು ಅಲುಗಾಡಿದ್ದು, ಜನರಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಯಿತು. ಭೂಕಂಪನಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಕಟ್ಟಡದ ಮೇಲಿರುವ ಈಜುಕೊಳವೊಂದರಲ್ಲಿ ಮಿನಿ ಸುನಾಮಿ ಉಂಟಾಗಿರುವ ದೃಶ್ಯ ಎದೆ ಝಲ್​ ಎನಿಸುವಂತಿದೆ.

    ಯುನೈಟೆಡ್​ ಸ್ಟೇಟ್ಸ್​ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 1.05ರ ಸುಮಾರಿಗೆ 7.5 ತೀವ್ರತೆಯ ಪ್ರಬಲ ಭೂಕಂಪನವು ರಿಕ್ಟರ್​ ಮಾಪಕದಲ್ಲಿ ದಾಖಲಾಗಿದೆ. ಭೂಕಂಪವು ಅಕ್ವಿಲಾದಿಂದ ಆಗ್ನೇಯಕ್ಕೆ 37 ಕಿಲೋಮೀಟರ್ ದೂರದಲ್ಲಿ ಕೊಲಿಮಾ ಮತ್ತು ಮೈಕೋವಾಕನ್ ರಾಜ್ಯಗಳ ಬಳಿ ಕೇಂದ್ರೀಕೃತವಾಗಿತ್ತು ಎಂದು ತಿಳಿದುಬಂದಿದೆ.

    ಟ್ವಿಟರ್​ನಲ್ಲಿ ಹರಿದಾಡುತ್ತಿರುವ ಸಾಕಷ್ಟು ವಿಡಿಯೋಗಳು ಭೂಕಂಪದ ತೀವ್ರತೆಗೆ ಸಾಕ್ಷಿಯಾಗಿವೆ. ಕಟ್ಟಡವೊಂದರ ಮೇಲಿರುವ ಈಜುಕೊಳದ ದೃಶ್ಯವನ್ನು ನೆಟ್ಟಿಗರೊಬ್ಬ ಹಂಚಿಕೊಂಡಿದ್ದು, ಸ್ವಮ್ಮಿಂಗ್​ಪೂಲ್​ನಲ್ಲಿ ಮಿನಿ ಸುನಾಮಿ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಭೂಕಂಪನಕ್ಕೆ ಕಟ್ಟಡ ಅಲುಗಾಡಿದ ಪರಿಣಾಮ ಕಟ್ಟಡದ ಮೇಲಿಂದ ನೀರು ಕೆಳಗೆ ಚೆಲ್ಲುತ್ತಿರುವ ದೃಶ್ಯವಿದೆ. ಇನ್ನೊಂದು ವಿಡಿಯೋದಲ್ಲಿ ಹೋಟೆಲ್​ ಒಂದರ ಕೊಠಡಿಯೊಳಗೆ ಫ್ಯಾನ್​ ಅಲುಗಾಡುತ್ತಿರುವ ದೃಶ್ಯವಿದೆ. ಮಗದೊಂದು ವಿಡಿಯೋದಲ್ಲಿ ಭೂಂಕಪನಕ್ಕೆ ಪಾರ್ಕ್​ ಮಾಡಿರುವ ಕಾರುಗಳು ಸಹ ಅಲುಗಾಡುತ್ತಿವೆ.

    ಮೈಕೋವಾಕನ್​​ನ ಸಾರ್ವಜನಿಕ ಭದ್ರತಾ ಇಲಾಖೆಯ ಪ್ರಕಾರ, ಆ ಕ್ಷಣದಲ್ಲಿ ಆಸ್ತಿ ಮತ್ತು ಪ್ರಾಣ ಹಾನಿಯ ಕುರಿತು ಯಾವುದೇ ವರದಿಗಳಾಗಿಲ್ಲ. ಆದರೆ, ಕೆಲವು ಕಟ್ಟಡಗಳು ಬಿರುಕು ಬಿಟ್ಟಿವೆ ಎಂದು ಹೇಳಿದೆ. ಭೂಕಂಪನ ಪರಿಣಾಮ ತೀವ್ರವಾಗಿದ್ದರೂ, ಪೆಸಿಫಿಕ್​ ಕರಾವಳಿಯಲ್ಲಿ ಯಾವುದೇ ಸುನಾಮಿ ಎಚ್ಚರಿಕೆ ಬಂದಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೂ ಸುನಾಮಿ ಅಲೆಗಳ ಸಾಧ್ಯತೆ ಇದೆ ಎಂದು ಯುಎಸ್ ಸುನಾಮಿ ಎಚ್ಚರಿಕೆ ಕೇಂದ್ರ ಎಚ್ಚರಿಸಿದೆ. (ಏಜೆನ್ಸೀಸ್​)

    PHOTOS| ಅಲ್ಬನಿ ಕನ್ನಡ ಸಂಘದಿಂದ ಮನಮೋಹಕ ಪಿಕ್ನಿಕ್: ಕಾನನದ ಮಧ್ಯೆ ಕಳೆದ ಸುಮಧುರ ಕ್ಷಣ ವಿವರಿಸಿದ ಕನ್ನಡಿಗ

    ರ‍್ಯಾಗಿಂಗ್​​ನಿಂದ ರೋಸಿ ಹೋದ ವಿದ್ಯಾರ್ಥಿ: ಪ್ರಾಧ್ಯಾಪಕರ ಎದುರೇ ಇಬ್ಬರ ಮೇಲೆ ಹಲ್ಲೆ, ರಾಯಚೂರಿನಲ್ಲಿ ಘಟನೆ

    ಲವರ್​​​ ಜತೆ ಸ್ಕೂಟಿಯಲ್ಲಿ ಹೋಗ್ತಿದ್ದ ಪತ್ನಿಯನ್ನು ರೆಡ್​ಹ್ಯಾಂಡ್​ ಆಗಿ ಹಿಡಿದ ಪತಿ! ಮುಂದೇನಾಯ್ತು ನೀವೇ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts