More

    ಸ್ಟಾರ್​ ನಟ ರವಿತೇಜ ಜತೆ ಲಿಪ್​ಲಾಕ್​: ಬೋಲ್ಡ್​ ಹೇಳಿಕೆ ನೀಡಿದ ನಟಿ ಮೀನಾಕ್ಷಿ ಚೌಧರಿ!

    ಹೈದರಾಬಾದ್​: “ಇಚ್ಛತಾ ವಾಹನಮುಲು ನಿಲುಪರಡು” ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಮೀನಾಕ್ಷಿ ಚೌಧರಿಗೆ ಮೊದಲ ಸಿನಿಮಾ ಕೈ ಹಿಡಿಯಲಿಲ್ಲ. ಆದರೂ ಎರಡನೇ ಸಿನಿಮಾದಲ್ಲಿ ಸೂಪರ್​ ಸ್ಟಾರ್​ ರವಿತೇಜ ಜತೆ ನಟಿಸುವ ಅವಕಾಶ ಸಿಕ್ಕಿದ್ದು, ಮುಂಬರುವ ಖಿಲಾಡಿ ಚಿತ್ರ ಇದೇ ತಿಂಗಳ 11ರಂದು ಬಿಡುಗಡೆಯಾಗಲಿದೆ.

    ಇತ್ತೀಚೆಗಷ್ಟೇ ಖಿಲಾಡಿ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ಅದನ್ನು ನೋಡಿದವರು ನಟಿ ಮೀನಾಕ್ಷಿ ಅವರ ಬೋಲ್ಡ್​ನೆಸ್​ ನೋಡಿ ದಂದಾಗಿದ್ದಾರೆ. ನಟ ರವಿತೇಜ ಜತೆ ಲಿಪ್​ಲಾಕ್​ ದೃಶ್ಯಗಲ್ಲಿ ಮೈಚಳಿ ಬಿಟ್ಟು ನಟಿಸಿದ್ದಾರೆ. ಹೀಗಾಗಿ ಟಾಲಿವುಡ್​ನಲ್ಲಿ ಇದೀಗ ಮೀನಾಕ್ಷಿ ಹೆಸರು ಹಾಟ್​ ಟಾಪಿಕ್​ ಆಗಿದೆ. ಸಿನಿಮಾ ಬಿಡುಗಡೆ ಹತ್ತಿರದಲ್ಲಿದ್ದು, ಸಿನಿಮಾ ತಂಡ ಪ್ರಚಾರದ ಕೆಲಸದಲ್ಲಿ ತೊಡಗಿದೆ. ಇತ್ತೀಚೆಗೆ ಮಾಧ್ಯಮದವರು ಲಿಕ್​ಪಾಕ್​ ಬಗ್ಗೆ ಮೀನಾಕ್ಷಿ ಅವರನ್ನು ಪ್ರಶ್ನೆ ಮಾಡಿದ್ದು, ಅವರು ಕೊಟ್ಟ ಉತ್ತರ ಎಲ್ಲರನ್ನು ದಂಗಬಡಿಸಿದೆ.

    ನಾನು ನನ್ನ ಎರಡನೇ ಸಿನಿಮಾವನ್ನು ರವಿತೇಜ ಅವರೊಂದಿಗೆ ಮಾಡುತ್ತೇನೆಂದು ನಾನು ಭಾವಿಸಿರಲಿಲ್ಲ. ಅವರ ಟೈಮಿಂಗ್​ ಸಾಮಾನ್ಯವಲ್ಲ. ನನಗೆ ತೆಲುಗಿನಲ್ಲಿ ಸರಿಯಾದ ಬೆಂಬಲ ಸಿಗದೇ ಬೇಸರದಲ್ಲಿದ್ದೇ, ಆದರೆ, ಚಿಂತಿಸಬೇಡ ಎಂದು ರವಿತೇಜ ಅವರು ಒಳ್ಳೆಯ ಮಾತುಗಳನ್ನಾಡಿ ಬೆನ್ನು ತಟ್ಟಿದರು ಎಂದು ಹೇಳಿದರು.

    ಸ್ಟೋರಿಗೆ ಅವಶ್ಯಕವಾಗಿರುವುದರಿಂದ ಲಿಪ್​ಲಾಕ್​ ಮಾಡಿದೆ ಎಂದ ಮೀನಾಕ್ಷಿ, ಚಿತ್ರದಲ್ಲಿ ನನ್ನ ಪಾತ್ರ ಎಷ್ಟು ಕಾಲ ಉಳಿಯುತ್ತದೆ ಎಂದು ನನಗೆ ತಿಳಿದಿಲ್ಲ. ಆದರೆ, ನನ್ನ ಪಾತ್ರ ಎಷ್ಟು ಮಹತ್ವ ಎಂಬುದನ್ನು ನಾನು ನೋಡಿದ್ದೇನೆ. ನಿರ್ದೇಶಕ ರಮೇಶ್​ ವರ್ಮಾ ಅವರು ಸ್ಟೋರಿ ಹೇಳಿದಾಗ ಕಿಸ್ಸಿಂಗ್​ ಮತ್ತು ರೊಮ್ಯಾನ್ಸ್​ ದೃಶ್ಯಗಳು ಇರುತ್ತವೆ ಅಂತಾ ಮೊದಲೇ ಹೇಳಿದ್ದರು. ಕಮರ್ಸಿಯಲ್​ ಸಿನಿಮಾಗಳಲ್ಲಿ ಅವು ಸಾಮಾನ್ಯ. ಕಿಸ್ಸಿಂಗ್​ ದೃಶ್ಯಗಳಲ್ಲಿ ಅಭಿನಯಿಸುವುದರಿಂದ ನನಗೇನು ತೊಂದರೆ ಇಲ್ಲ ಎಂದು ಹೇಳಿದ್ದಾರೆ.

    ಇಂತಹ ಬೋಲ್ಡ್​ ಮಾತುಗಳನ್ನಾಡಿರುವ ಮೀನಾಕ್ಷಿ ಅವರಿಂದ ಮುಂದೆಯೂ ಹೆಚ್ಚು ರೋಮ್ಯಾಂಟಿಕ್ ದೃಶ್ಯಗಳಿರುವ ಸಿನಿಮಾಗಳು ಬಂದರೂ ಅಚ್ಚರಿಪಡಬೇಕಿಲ್ಲ. (ಏಜೆನ್ಸೀಸ್​)

    ಮಂಡ್ಯದಲ್ಲಿ ಭೀಕರ ಹತ್ಯೆ ಪ್ರಕರಣ: ತಂಗಿ ಗಂಡನ ಮೇಲಿನ ವ್ಯಾಮೋಹಕ್ಕೆ ನಡುರಾತ್ರಿ ನೆತ್ತರು ಹರಿಸಿದ ಹಂತಕಿ

    ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಮಂಗಳೂರಿನ ವಕೀಲ ರಾಜೇಶ್​ ಭಟ್​ಗೆ ಷರತ್ತುಬದ್ಧ ಜಾಮೀನು

    ಮಂಗ್ಳೂರಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಬಳಸಿ ವೇಶ್ಯಾವಾಟಿಕೆ ದಂಧೆ: ಇನ್ನಷ್ಟು ಆಘಾತಕಾರಿ ಸಂಗತಿ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts