More

    ಉಕ್ಕಿ ಹರಿಯುತ್ತಿರುವ ಕಾವೇರಿ ನದಿ: ಐತಿಹಾಸಿಕ ಶ್ರೀರಂಗಪಟ್ಟಣದ ಕೋಟೆ ಕುಸಿಯುವ ಭೀತಿ

    ಮಂಡ್ಯ: ಐತಿಹಾಸಿಕ ಶ್ರೀರಂಗಪಟ್ಟಣದ ಕೋಟೆಗೆ ಜಲ ಕಂಟಕ ಎದುರಾಗಿದೆ. ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಕೋಟೆ ಕುಸಿಯುವ ಭೀತಿ ಶುರುವಾಗಿದೆ.

    ಕಳೆದ ಕೆಲ ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಕೃಷ್ಣರಾಜಸಾಗರ ಒಡಲು ಭರ್ತಿಯಾಗಿದೆ. ಡ್ಯಾಂನಿಂದ ಹೆಚ್ಚು ಪ್ರಮಾಣದಲ್ಲಿ ನೀರು ಹೊರ ಬಿಡಲಾಗಿದ್ದು, ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ನೂರಾರು ವರ್ಷ ಹಳೆಯದಾದ ಕೋಟೆ ವರೆಗೂ ನದಿ ನೀರು ನುಗ್ಗಿದೆ.

    ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲಗೊಳ್ಳುತ್ತಿರುವ ಕೋಟೆ ಇದೀಗ ಕುಸಿಯುವ ಆತಂಕ ಸೃಷ್ಟಿಸಿದೆ. ಗಿಡಗಂಟೆ ಬೆಳೆದು ಈಗಾಗಲೇ ಶ್ರೀರಂಗಪಟ್ಟಣ ಕೋಟೆ ಶಿಥಿಲವಾಸ್ಥೆಯಲ್ಲಿದೆ. ಈಗ ನೀರಿನಿಂದಾಗಿ ಮತ್ತಷ್ಟು ಶಿಥಿಲಗೊಳ್ಳುವ ಆತಂಕವಿದೆ. ಕೋಟೆಗೆ ಹೊಂದಿಕೊಂಡಂತಿರುವ ಥಾಮಸ್ ಇನ್ ಮನ್ ಕಾರಾಗೃಹಕ್ಕೂ ಜಲ ದಿಗ್ಬಂಧನವಾಗಿದೆ.

    ಶ್ರೀರಂಗಪಟ್ಟಣದ ಈಶಾನ್ಯ ದಿಕ್ಕಿನಲ್ಲಿರುವ ಥಾಮಸ್ ಇನ್ ಮನ್ ಕಾರಾಗೃಹದಲ್ಲಿ ಹೈದರಾಲಿ, ಟಿಪ್ಪು ಕಾಲದಲ್ಲಿ ಖೈದಿಗಳನ್ನು ಬಂಧಿಸಿ ಇಡಲಾಗುತ್ತಿತ್ತು. ಮತ್ತೊಂದೆಡೆ ಕೋಟೆಗೆ ಹೊಂದಿಕೊಂಡಂತಿರುವ ಕೋಟೆ ಗಣಪತಿ ದೇಗುಲ ಸಹ ಜಲಾವೃತಗೊಂಡಿದೆ. ದೇವಾಲಯದ ಪಕ್ಕದ ನಾಗರಕಟ್ಟೆ, ಅಶ್ವಥ ಕಟ್ಟೆ, ತುಳಸಿ ಕಟ್ಟೆಗಳು ಮುಳುಗಡೆಯಾಗಿದೆ. ಜಲ ದಿಗ್ಬಂಧನದಿಂದಾಗಿ ದೈನಂದಿನ ಪೂಜಾ ಕೈಂಕರ್ಯಗಳು ಬಂದ್​ ಆಗಿವೆ. (ದಿಗ್ವಿಜಯ ನ್ಯೂಸ್​)

    ಮನೆಯವರು ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದು ಸಾವಿನ ಹಾದಿ ಹಿಡಿದ ಪ್ರೇಮಿಗಳು

    ಹೊಳೆಯುವುದೆಲ್ಲ ಚಿನ್ನವಲ್ಲ! Instagram ರೀಲ್ಸ್ ಸ್ಟಾರ್​ ಬಂಧನದ ಬೆನ್ನಲ್ಲೇ ಪೊಲೀಸರ ಸಂದೇಶ ವೈರಲ್​​

    ರವಿ ಬೋಪಣ್ಣ ಟ್ರೇಲರ್ ಬಿಡುಗಡೆ; ಹೊಸ ದಾಖಲೆ ಬರೆದ 7 ನಿಮಿಷದ ಟ್ರೇಲರ್..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts