More

    ರಾಜ್ಯದಲ್ಲಿ 6ನೇ ದಿನದ ಭಾರತ್​ ಜೋಡೋ ಯಾತ್ರೆ ಆರಂಭ: ಮೊಳಗಿದ ಗೌಡರ ಗೌಡ ರಾಹುಲ್ ಗೌಡ ಘೋಷಣೆ

    ಮಂಡ್ಯ: ರಾಹುಲ್​ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್​ ನಡೆಸುತ್ತಿರುವ ಭಾರತ್​ ಜೋಡೋ ಪಾದಯಾತ್ರೆ ರಾಜ್ಯದಲ್ಲಿ 6ನೇ ದಿನಕ್ಕೆ ಕಾಲಿಟ್ಟಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕೆ.ಮಲ್ಲೇನಹಳ್ಳಿ ಗೇಟ್‌ನಿಂದ ಆರನೇ ದಿನದ ಪಾದಯಾತ್ರೆ ಆರಂಭಿಸಿದ ರಾಹುಲ್ ಗಾಂಧಿಗೆ ಧೃವನಾರಾಯಣ್, ಚಲುವರಾಯಸ್ವಾಮಿ ಹಾಗೂ ಕೆ.ಬಿ.ಚಂದ್ರಶೇಖರ್ ಸಾಥ್​ ನೀಡಿದರು.

    ಭಾರತ್ ಜೋಡೋ ಯಾತ್ರೆ ನಾಗಮಂಗಲ ಪಟ್ಟಣ ತಲುಪಿದ್ದು, ರಾಹುಲ್ ಗಾಂಧಿ ನೋಡಲು ಸಾಕಷ್ಟು ಜನರ ನೆರೆದಿದ್ದರು. ಈ ವೇಳೆ ಜನರನ್ನು ನೋಡಿದ ರಾಹುಲ್​, ಅವರತ್ತ ಕೈ ಬೀಸಿದರು. ಅಲ್ಲದೆ, ರಸ್ತೆ ಬದಿ ನಿಂತಿದ್ದ ಬಾಲಕಿಯೊಬ್ಬಳು ರಾಹುಲ್​ ಬಳಿ ಬರಲು ಯತ್ನಿಸಿದಾಗ ಆಕೆಯನ್ನು ತಡೆಯಲು ಮುಂದಾದ ಭದ್ರತಾ ಸಿಬ್ಬಂದಿಯನ್ನು ರಾಹುಲ್​ ಹಿಂದಕ್ಕೆ ಕುಳುಹಿಸಿದರು. ಬಳಿಕ ಕೆಲ ದೂರ ಬಾಲಕಿಯ ಕೈ ಹಿಡಿದು ಹೆಜ್ಜೆ ಹಾಕಿದರು. ಅಲ್ಲದೆ, ಪಾದಯಾತ್ರೆಯನ್ನು ನೋಡಲು ರಸ್ತೆ ಬದಿ ನಿಂತಿದ್ದ ಮಹಿಳೆಯನ್ನು ಕರೆದು ಸ್ವಲ್ಪ ದೂರ ಮಹಿಳೆ ಜೊತೆ ಹೆಜ್ಜೆ ಹಾಕುತ್ತಾ ರಾಹುಲ್​ ಮಾತನಾಡಿಸಿದರು. ಈ ವೇಳೆ ರಾಹುಲ್ ಜೊತೆ ಹೆಜ್ಜೆ ಹಾಕಿದ ಯುವತಿಯರು ಸೆಲ್ಪಿ ಕ್ಲಿಕ್ಕಿಸಿಕೊಂಡರು.

    ಗೌಡರ ಗೌಡ ಸ್ವಾಮಿಗೌಡ
    ಭಾರತ್ ಜೋಡೋ ಯಾತ್ರೆಯಲ್ಲಿ ಮಾಜಿ ಸಚಿವ ಚೆಲುವರಾಯಸ್ವಾಮಿಗೆ ಕಾರ್ಯಕರ್ತರು ಜೈಕಾರ ಕೂಗಿದರು. ಗೌಡರ ಗೌಡ ಸ್ವಾಮಿಗೌಡ… ಗೆಲ್ತಾರಪ್ಲ ಗೆಲ್ತಾರೆ ಸ್ವಾಮಿಗೌಡ ಗೆಲ್ತಾರೆ ಎಂದು ಘೋಷಣೆ ಕೂಗಿದರು. ಅಂದಹಾಗೆ ನಾಗಮಂಗಲದಲ್ಲಿ ಚಲುವರಾಯಸ್ವಾಮಿ ಅವರು ಸ್ವಾಮಿಗೌಡ ಎಂದೇ ಪ್ರಸಿದ್ದಿಯಾಗಿದ್ದಾರೆ.

    ಮಗು ಫೋಟೋ ಕ್ಲಿಕ್ಕಿಸಿದ ರಾಹುಲ್
    ಯಾತ್ರೆ ಮಧ್ಯೆ ಮಗುವೊಂದನ್ನು ಎತ್ತಿಕೊಂಡ ರಾಹುಲ್, ಮಗುವಿನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ವ್ಯಕ್ತಿಯೊಬ್ಬರು ತಮ್ಮ ಮಗು ಎತ್ತಿಕೊಂಡು ರಾಹುಲ್ ಜೊತೆ ಸೆಲ್ಫಿಗೆ ಬಂದಿದ್ದರು. ಈ ಸಮಯದಲ್ಲಿ ಮೊದಲು ಸೆಲ್ಫಿಗೆ ಫೋಸ್ ಕೊಟ್ಟ ರಾಹುಲ್​, ಬಳಿಕ ತನ್ನ ಮೊಬೈಲ್​ನಲ್ಲಿ ಮಗುವಿನ ಫೋಟೋ ತೆಗೆದುಕೊಂಡರು.

    ಮೊಳಗಿದ ರಾಹುಲ್​ ಗೌಡ ಘೋಷಣೆ
    ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗೌಡ ಘೋಷಣೆ ಮೊಳಗಿದ್ದು, ವಿಶೇಷವಾಗಿತ್ತು. ರಾಹುಲ್ ಗಾಂಧಿಯನ್ನು ರಾಹುಲ್ ಗೌಡ ಎಂದು ಕೂಗಿದ ಕಾರ್ಯಕರ್ತರು, ಗೌಡರ ಗೌಡ ರಾಹುಲ್ ಗೌಡ ಎಂದು ಘೋಷಣೆ ಘೋಷಣೆ ಕೂಗಿದರು.

    ರಾಹುಲ್​ ಗಾಂಧಿ ಮನವಿಗೆ ಸಿಎಂ ಬೊಮ್ಮಾಯಿ ಸ್ಪಂದನೆ: ಗಾಯಗೊಂಡಿದ್ದ ಆನೆ ಮರಿಗೆ ಸಿಕ್ತು ಸೂಕ್ತ ಚಿಕಿತ್ಸೆ

    ಸದ್ದಿಲ್ಲದೆ ಏರಿದ ಮನೆ ಕಂದಾಯ; ಗ್ರಾಮೀಣರಿಗೆ ಹೊರೆಯಾದ ತೆರಿಗೆ ಸೂತ್ರ, ಪಂಚತಂತ್ರ ಸಾಫ್ಟ್​ವೇರ್​ನಲ್ಲೂ ಅವ್ಯವಸ್ಥೆ

    ಪೆಟ್ರೋಲ್, ಡೀಸೆಲ್ ದರ ಇಳಿಕೆ ಸದ್ಯಕ್ಕಿಲ್ಲ; ಇನ್ನಷ್ಟು ತಿಂಗಳು ಬೆಲೆ ಯಥಾಸ್ಥಿತಿ ಮುಂದುವರಿಕೆ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts