More

    ಲವರ್​ ತಾಯಿಗೆ ಕಿಡ್ನಿ ದಾನ ಮಾಡಿದ ಒಂದೇ ತಿಂಗಳಲ್ಲಿ ಪ್ರಿಯಕರನಿಗೆ ಬಿಗ್​ ಶಾಕ್​ ಕೊಟ್ಟ ಪ್ರಿಯತಮೆ!

    ಕ್ಯಾಲಿಫೋರ್ನಿಯಾ: ಎಲ್ಲ ಲವ್​ ಸ್ಟೋರಿಗೂ ಹ್ಯಾಪಿ ಎಂಡಿಂಗ್​ ಎಂಬುದು ಇರುವುದಿಲ್ಲ. ಕೆಲವೊಮ್ಮೆ ಅನಿರೀಕ್ಷಿತ ತಿರುವುಗಳನ್ನು ಪಡೆಯುವ ಪ್ರೀತಿ ಅರ್ಧದಲ್ಲೇ ಅಂತ್ಯವಾಗುತ್ತವೆ. ಸಂಬಂಧಗಳನ್ನು ಉಳಿಸಿಕೊಳ್ಳಲು ಯಾವುದೇ ತ್ಯಾಗ ಮಾಡಲು ಸಿದ್ಧರಿರುವ ಜನಗಳ ನಡುವೆ ಕೆಲವರು ಕಡ್ಡಿ ಮುರಿದಂಗೆ ಸಂಬಂಧಗಳನ್ನು ಮುರಿದುಕೊಳ್ಳುತ್ತಾರೆ. ಅದೇ ರೀತಿಯ ದುರಂತ ಲವ್​ ಸ್ಟೋರಿಗೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.

    ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಗರ್ಲ್​ಫ್ರೆಂಡ್​ ತಾಯಿಗೆ ಪ್ರಿಯಕರ ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದರೆ, ಕೃತಜ್ಞತಾ ಮನೋಭಾವವಿಲ್ಲದ ಪ್ರೇಯಸಿ ಆತನ ಪ್ರೀತಿಯನ್ನು ಕಡಿದುಕೊಂಡ ಘಟನೆ ಮೆಕ್ಸಿಕೋದ ಬಜಾ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

    ಉಜೈಲ್​ ಮಾರ್ಟಿನೆಜ್​ ಎಂಬಾತನೇ ಮೋಸ ಹೋದ ಭಗ್ನ ಪ್ರೇಮಿ. ತನ್ನ ಮನದ ನೋವನ್ನು ಹೇಳಿಕೊಂಡಿರುವ ಮಾರ್ಟಿನೆಜ್​, ನನ್ನ ಪ್ರೇಯಸಿಯ ತಾಯಿಗೆ ಕಿಡ್ನಿ ದಾನ ಮಾಡಿದೆ. ಆದರೆ, ಒಂದೇ ತಿಂಗಳಲ್ಲಿ ನನ್ನ ಪ್ರೀತಿಗೆ ಎಳ್ಳು ನೀರು ಬಿಟ್ಟ ಪ್ರೇಯಸಿ, ಇದೀಗ ಬೇರೊಂದು ಮದುವೆ ಆಗಿದ್ದಾಳೆ ಎಂದು ಹೇಳಿಕೊಂಡಿದ್ದಾನೆ.

    ವೃತ್ತಿಯಲ್ಲಿ ಶಿಕ್ಷಕನಾಗಿರುವ ಮಾರ್ಟಿನೆಜ್ ತನ್ನೆಲ್ಲ ನೋವನ್ನು ಟಿಕ್​ಟಾಕ್​ ವಿಡಿಯೋ ಮೂಲಕ ಹೊರ ಜಗತ್ತಿನ ಮುಂದೆ ತೆರೆದಿಟ್ಟಿದ್ದಾನೆ. ಪ್ರೇಯಸಿಯ ತಾಯಿಯನ್ನು ಬದುಕಿಸಿಕೊಳ್ಳಲು ನಾನು ನನ್ನ ಒಂದು ಕಿಡ್ನಿಯನ್ನು ದಾನ ಮಾಡಿದೆ. ಆಪರೇಷನ್​ ನಡೆದ ಒಂದು ತಿಂಗಳಿಗೆ ನನ್ನನ್ನು ಬಿಟ್ಟು ಬೇರೊಂದು ಮದುವೆ ಆಗಿದ್ದಾಳೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದು, ವಿಡಿಯೋವನ್ನು ಬರೋಬ್ಬರಿ 16 ಮಿಲಿಯನ್​ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.

    ಮಾರ್ಟಿನೆಜ್ ನೋವಿನ ಮಾತಿಗೆ ಅನೇಕ ನೆಟ್ಟಿಗರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ನೀವು ಯೋಚನೆ ಮಾಡಬೇಡಿ. ಓರ್ವ ಒಳ್ಳೆಯ ವ್ಯಕ್ತಿಯನ್ನು ಆಕೆ ಕಳೆದುಕೊಂಡಿದ್ದಾಳೆ. ಏನೇ ಆಗಲಿ ಮುನ್ನಡೆಯಿರಿ, ನಿಮ್ಮನ್ನು ಮೆಚ್ಚಿಕೊಳ್ಳುವ ಮಹಿಳೆ ಸಿಕ್ಕೇ ಸಿಗುತ್ತಾಳೆ ಎಂದು ಭರವಸೆ ತುಂಬಿದ್ದಾರೆ.

    ಲವ್​ ಬ್ರೇಕಪ್​ ಆಗಿದ್ದರೂ ತಮ್ಮ ಮಾಜಿ ಪ್ರೇಯಸಿ ಉತ್ತಮ ಸಂಬಂಧದಲ್ಲಿರುವುದಾಗಿ ಮಾರ್ಟಿನೆಜ್​ ಹೇಳಿಕೊಂಡಿದ್ದಾರೆ. ವಾಸ್ತವವಾಗಿ ನಾನು ಚೆನ್ನಾಗಿದ್ದೇನೆ, ನಾನು ಭಾವನಾತ್ಮಕವಾಗಿ ಚೆನ್ನಾಗಿದ್ದೇನೆ. ನಾನು ಅವಳ ವಿರುದ್ಧವಾಗಿ ಇಲ್ಲ. ನಾವು ಉತ್ತಮ ಸಂಬಂಧ ಹೊಂದಿದ್ದೇವೆ. ನಾವು ಪರಸ್ಪರ ದ್ವೇಷಿಸುವುದಿಲ್ಲ ಎಂದು ಹೇಳಿದ್ದು, ಇತರ ಜನರು ತಮ್ಮ ಸಂಬಂಧಗಳಲ್ಲಿ ಅದೇ ತಪ್ಪನ್ನು ಮಾಡದಂತೆ ಮಾರ್ಟಿನೆಜ್​ ಒತ್ತಾಯಿಸಿದರು.

    ಕೊನೆಯಲ್ಲಿ ಹಾಸ್ಯ ಚಟಾಕಿಯನ್ನು ಹಾರಿಸಿರುವ ಮಾರ್ಟಿನೆಜ್​ ನಾವು ಎರಡು ಕಿಡ್ನಿಯನ್ನು ಹೊಂದಿರುತ್ತೇವೆ. ಆದರೆ, ಈಗಿನಿಂದ ನನ್ನಲ್ಲಿ ಒಂದೇ ಕಿಡ್ನಿ ಉಳಿದಿದ್ದು, ನಾನು ಅದನ್ನು ಅನುಭವಿಸಲು ಸಾಧ್ಯವಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)

    ಮಧ್ಯರಾತ್ರಿ ದಿಢೀರ್​ ದಾಳಿ ಮಾಡಿದ ದುಷ್ಕರ್ಮಿಗಳಿಂದ ಗಂಡನ ಪ್ರಾಣ ಉಳಿಸಿದ ಪತ್ನಿಯ ಸಾಹಸವೇ ರೋಚಕ!

    ಮತ್ತೆ ಒಂದಾಗ್ತಾರಾ ಮಾಜಿ ತಾರಾದಂಪತಿ? ಸಮಂತಾರ ಈ ನಡೆಯಿಂದ ಅಭಿಮಾನಿಗಳಲ್ಲಿ ಚಿಗುರಿದ ಆಸೆ!

    ವಿಆರ್​ಎಲ್​ ಹೆಸರಲ್ಲಿ ವಂಚನೆ: ನಕಲಿ ವೆಬ್​​ಸೈಟ್​ ಸೃಷ್ಟಿಸಿ ಗ್ರಾಹಕರಿಗೆ ಮೋಸ, ಎಫ್​ಐಆರ್​ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts