ಕೋಲ್ಕತ: ಮನೆಯಲ್ಲಿ ಯಾರಿಗಾದರೂ ಒಂದು ಸರ್ಕಾರಿ ಕೆಲಸ ಸಿಗಲಿ ಅಂತಾ ದೇವರಿಗೆ ಹರಕೆ ಮಾಡಿಕೊಳ್ಳುವವರನ್ನು ನೋಡಿದ್ದೇವೆ. ಸರ್ಕಾರಿ ಕೆಲಸ ಸಿಕ್ಕಿದರಂತೂ ಸಿಹಿ ಹಂಚಿ ಸಂಭ್ರಮಿಸುವುದನ್ನು ಕಂಡಿದ್ದೇವೆ. ಅದರಲ್ಲೂ ತನ್ನ ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕರೆ ಗಂಡನಿಗೆ ಅದಕ್ಕಿಂತ ಖುಷಿಯ ವಿಚಾರ ಬೇರೆ ಇಲ್ಲ. ಆದರೆ, ಇಲ್ಲೊಬ್ಬ ವ್ಯಕ್ತಿ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾನೆ.
ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕಿತು ಅಂತಾ ಪತಿ ಮಹಾಶಯನೊಬ್ಬ ಆಕೆಯ ಕೈ ಕತ್ತರಿಸಿದ್ದಾನೆ. ಈ ಘಟನೆ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತದ ಪೂರ್ವ ಬುರ್ದ್ವಾನ್ನ ಕೆತುಗ್ರಾಮ್ನಲ್ಲಿ ನಡೆದಿದೆ. ಆರೋಪಿ ಶೇರ್ ಮೊಹಮ್ಮದ್ ತನ್ನ ಪತ್ನಿ ರೇಣು ಖತುನ್ ಕೈಯನ್ನು ಕತ್ತರಿಸಿದ್ದಾನೆ.
ರೇಣು ದುರ್ಗಾಪುರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ್ ತರಬೇತಿ ಪಡೆಯುತ್ತಿದ್ದಳು. ಇತ್ತಿಚೆಗಷ್ಟೇ ಆಕೆಗೆ ಸರ್ಕಾರಿ ಕೆಲಸ ಸಿಕ್ಕಿತು. ಆದರೆ, ಪತಿ ಶೇರ್ ಮೊಹಮ್ಮದ್ಗೆ ಸರ್ಕಾರಿ ಕೆಲಸ ದಕ್ಕಿರಲಿಲ್ಲ. ಇದರಿಂದಾಗಿ ಪತ್ನಿಯ ಮೇಲೆಯೇ ಆತನಿಗೆ ಅಸೂಯೆ ಹುಟ್ಟಿಕೊಂಡಿತು. ಅಲ್ಲದೆ, ಸರ್ಕಾರಿ ಕೆಲಸ ಸಿಕ್ಕದ ಮೇಲೆ ಪತ್ನಿ ನನ್ನನ್ನು ಬಿಟ್ಟು ಹೊರಟು ಹೋಗುತ್ತಾಳೆ ಎಂಬ ಭಯವು ಆತನಿಗೆ ಕಾಡುತ್ತಿತ್ತು. ಹೀಗಾಗಿ ಕೆಲಸ ಬಿಡುವಂತೆ ಮೊಹಮ್ಮದ್ ಪತ್ನಿಗೆ ಒತ್ತಾಯಿಸಿದ್ದ.
ಗಂಡನ ಒತ್ತಾಯಕ್ಕೆ ಮಣಿಯದ ರೇಣು, ತಾನು ಸರ್ಕಾರಿ ಕೆಲಸಕ್ಕೆ ಸೇರಿಯೇ ತಿರುತ್ತೇನೆಂಬ ತನ್ನ ನಿರ್ಧಾರಕ್ಕೆ ಅಂಟಿಕೊಂಡಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ನಡೆದ ಜಗಳ ಅತಿರೇಕಕ್ಕೆ ತಿರುಗಿ, ಮೊಹಮ್ಮದ್ ಚಾಕು ತೆಗೆದುಕೊಂಡು ಪತ್ನಿಯ ಕೈ ಕತ್ತರಿಹಿಸಿದ್ದಾರೆ. ತುಂಡಾದ ಅಗೈಯನ್ನು ಮನೆಯಲ್ಲೇ ಬಿಟ್ಟು ತಾನೇ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಂಗೈ ತೆಗೆದುಕೊಂಡು ಹೋದರೆ ಅದನ್ನು ಜೋಡಿಸಿ ಬಿಡುತ್ತಾರೆ ಅಂತಾ ಅದನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾನೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. (ಏಜೆನ್ಸೀಸ್)
ನಾಲ್ಕು ವರ್ಷದ ಹಿಂದೆ ಇದೇ ದಿನ ಪುನೀತ್ ಮಾಡಿದ್ದ ಟ್ವೀಟ್ ವೈರಲ್: ಟ್ವೀಟ್ ನೋಡಿ ಅಭಿಮಾನಿಗಳ ಕಣ್ಣೀರು
ಲೈಂಗಿಕ ಸಂಪರ್ಕ ಸೇರಿದಂತೆ ಅನೇಕ ಪ್ರಶ್ನೆಗೆ ಮುಕ್ತವಾಗಿ ಉತ್ತರಿಸಿದ ತನ್ನನ್ನು ತಾನೇ ಮದ್ವೆ ಆಗುತ್ತಿರೋ ಯುವತಿ!
Lays ಪ್ಯಾಕೆಟ್ನಲ್ಲಿ ತುಂಬಿರೋ ಗಾಳಿ ಹಿಂದಿನ ರಹಸ್ಯ ಬಯಲು: ಪೆಪ್ಸಿಕೋ ಕಂಪನಿಗೆ ಬಿತ್ತು 85 ಸಾವಿರ ರೂ. ದಂಡ!