More

    ನಾಲ್ಕು ವರ್ಷದ ಹಿಂದೆ ಇದೇ ದಿನ ಪುನೀತ್​ ಮಾಡಿದ್ದ ಟ್ವೀಟ್​ ವೈರಲ್: ಟ್ವೀಟ್​ ನೋಡಿ ಅಭಿಮಾನಿಗಳ ಕಣ್ಣೀರು

    ಬೆಂಗಳೂರು: ‘ನಗುಮುಖದ ರಾಜಕುಮಾರ’, ಸ್ಯಾಂಡಲ್​ವುಡ್​ನ ‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಬಾರದ ಲೋಕಕ್ಕೆ ಹೋಗಿ 7 ತಿಂಗಳು ಕಳೆದರೂ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ನೋವು ಮಾತ್ರ ಕರಗಿಲ್ಲ. ಅಪ್ಪು ಫೋಟೋವನ್ನು ಅಸಂಖ್ಯಾತ ಜನರು ಮನೆಗಳಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ. ಪುನೀತ್​ ಭೂತಾಯಿಯ ಮಡಿಲು ಸೇರಿದ್ದರೂ ಅಭಿಮಾನಿಗಳಿಗೆ ಅವರ ಮೇಲಿರುವ ಪ್ರೀತಿ ಕಿಂಚಿತ್ತೂ ಕರಗಿಲ್ಲ.

    ನಿನ್ನೆಯಷ್ಟೇ ಹೊಸಪೇಟೆಯಲ್ಲಿ ಪುನೀತ್​ ಅವರ ಪುತ್ಥಳಿ ನಿರ್ಮಾಣವಾಗಿದೆ. ಪ್ರೀತಿಯ ಅಪ್ಪು ಸದಾ ತಮ್ಮ ಕಣ್ಮುಂದೆ ಇರಬೇಕು ಎಂದು ಬಯಸಿರುವ ಹೊಸಪೇಟೆಯ ಅಭಿಮಾನಿಗಳು ಪುನೀತ್‌ ಅವರ ಏಳೂವರೆ ಅಡಿ ಎತ್ತರದ ಪುತ್ಥಳಿಯನ್ನು ನಿರ್ಮಾಣ ಮಾಡಿ, ಅದ್ಧೂರಿ ಕಾರ್ಯಕ್ರಮದ ಮೂಲಕ ಪುತ್ಥಳಿ ಅನಾವರಣಗೊಳಿಸಿದ್ದಾರೆ. ಹೀಗೆ ವಿವಿಧ ರೀತಿಯಲ್ಲಿ ಪುನೀತ್​ ಅವರನ್ನು ಅಭಿಮಾನಿಗಳು ಸ್ಮರಿಸುತ್ತಿದ್ದಾರೆ. ಇದರ ನಡುವೆ 4 ವರ್ಷದ ಹಿಂದೆ ಇದೇ ದಿನ (ಜೂನ್​ 7) ಪುನೀತ್​ ಅವರು ಮಾಡಿದ್ದ ಟ್ವೀಟ್​ ಒಂದು ಮತ್ತೆ ವೈರಲ್​ ಆಗಿದೆ.

    ನಾಲ್ಕು ವರ್ಷದ ಹಿಂದೆ ಅಂದ್ರೆ 2018ರ ಜೂನ್​ 7ರಂದು ಅಪ್ಪು ಒಂದು ಟ್ವೀಟ್​ ಮಾಡಿದ್ದರು. ಟ್ವೀಟ್​ನಲ್ಲಿ ನಾನು ಆರಾಮವಾಗಿ ಇದ್ದಿನಿ, ಡೊಂಟ್ ವರಿ, ನಿಮ್ಮ ಕಾಳಜಿಗೆ ನನ್ನ ಧನ್ಯವಾದಗಳು ಅಂತಾ ಅಪ್ಪು ಟ್ವೀಟ್​ ಮಾಡಿದ್ದರು. ನಾಲ್ಕು ವರ್ಷದ ಹಿಂದೆ ಅಪ್ಪು ಕಾರು ಅಪಘಾತವಾಗಿದ್ದ ಸಂದರ್ಭದಲ್ಲಿ ಅವರ ಅಭಿಮಾನಿಗಳು ಆತಂಕಗೊಂಡಿದ್ದರು. ಇದು ಗೊತ್ತಾಗಿ ಟ್ವೀಟ್​ ಮಾಡುವ ಮೂಲಕ ಅಪ್ಪು ಅಭಿಮಾನಿಗಳನ್ನು ಸಮಾಧಾನ ಪಡಿಸಿದ್ದರು.

    ನಾಲ್ಕು ವರ್ಷದ ಹಿಂದೆ ಇದೇ ದಿನ ಪುನೀತ್​ ಮಾಡಿದ್ದ ಟ್ವೀಟ್​ ವೈರಲ್: ಟ್ವೀಟ್​ ನೋಡಿ ಅಭಿಮಾನಿಗಳ ಕಣ್ಣೀರು

    ಇದೀಗ ಈ ಟ್ವೀಟ್​ ಮತ್ತೆ ವೈರಲ್​ ಆಗಿದ್ದು, ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ. ಇದೇ ಟ್ವೀಟ್​ ಕಳೆದ ಅಕ್ಟೋಬರ್​ 29ರಂದು ಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಭಿಮಾನಿಗಳು ಕಾಮೆಂಟ್​ ಮಾಡಿದ್ದಾರೆ. 2021, ಅಕ್ಟೋಬರ್​ 29ರಂದು ಎಲ್ಲರ ನೆಚ್ಚಿನ ಅಪ್ಪು ಹೃದಯಾಘಾತದಿಂದ ಬಾರದ ಲೋಕಕ್ಕೆ ಪಯಣ ಬೆಳೆಸಿದರು. ಆದರೆ, ಇಂದಿಗೂ ಅಪ್ಪು ತಮ್ಮ ಒಳ್ಳೆಯ ಗುಣಗಳಿಂದಲೇ ಎಲ್ಲರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಆದರೂ ಅಪ್ಪು ಶಾರೀರಿಕವಾಗಿ ನಮ್ಮಲ್ಲಿ ಇಲ್ಲ ಎಂಬ ಕೊರಗು ಅಭಿಮಾನಿಗಳಲ್ಲಿ ಸದಾ ಕಾಡುತ್ತಿದ್ದು, ಸದ್ಯ ವೈರಲ್​ ಆಗಿರುವ ಟ್ವೀಟ್​ ಅ. 29ರಂದು ಬಂದಿದ್ದರೆ ಅದಕ್ಕಿಂತ ದೊಡ್ಡ ಖುಷಿಯ ವಿಚಾರ ಇನ್ನೊಂದು ಇರಲಿಲ್ಲ ಎನ್ನುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    Lays ಪ್ಯಾಕೆಟ್​ನಲ್ಲಿ ತುಂಬಿರೋ ಗಾಳಿ ಹಿಂದಿನ ರಹಸ್ಯ ಬಯಲು: ಪೆಪ್ಸಿಕೋ ಕಂಪನಿಗೆ ಬಿತ್ತು 85 ಸಾವಿರ ರೂ. ದಂಡ!

    ಈ ಬಿಕಿನಿ ಅವತಾರ ನೋಡಿ ಸಮಂತಾ ಮತ್ತೆ ಟ್ರೋಲ್​ ಆಗುವುದು ಖಂಡಿತ ಅಂತಿದ್ದಾರೆ ಫ್ಯಾನ್ಸ್​..!

    ಮಚ್ಚಿನಿಂದ ಕೊಚ್ಚಿ ಮುಳಬಾಗಲು ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷನ ಬರ್ಬರ ಹತ್ಯೆ: ಬೆಚ್ಚಿಬಿದ್ದ ಕೋಲಾರದ ಜನತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts