More

    ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷಕರ ಸೇವೆ ಮಹತ್ವದ್ದು

    ಧಾರವಾಡ: ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷಕರ ಸೇವೆ ಮಹತ್ವದ ಪಾತ್ರ ವಹಿಸುತ್ತದೆ. ನರ್ಸಿಂಗ್ ವಿದ್ಯಾರ್ಥಿಗಳು ಸೇವೆಯ ಮಹತ್ವ ಅರಿತು ಕಾರ್ಯ ನಿರ್ವಹಿಸಬೇಕು ಎಂದು ಹುಬ್ಬಳ್ಳಿ ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಹೇಳಿದರು.
    ನಗರದ ಡಾ. ವೈ.ಎನ್. ಇರಕಲ್ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ನ ಶ್ರೀಯಾ ಕಾಲೇಜಿನ ಮೊದಲ ವರ್ಷದ ಬಿ.ಎಸ್‌ಸಿ ನರ್ಸಿಂಗ್ ಜಿ.ಎನ್.ಎಂ ಎಂ.ಎಸ್‌ಸಿ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ಪ್ರತಿಜ್ಞಾವಿಽ ಸ್ವೀಕಾರ ಹಾಗೂ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ಶ್ರೀಯಾ ಕಾಲೇಜ್ ಸಂಸ್ಥಾಪಕ ಡಾ. ವೈ.ಎನ್. ಇರಕಲ್, ಜಿಲ್ಲಾ ಸರ್ಜನ್ ಡಾ. ಸಂಗಪ್ಪ ಗಾಬಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಡಾ. ಸತೀಶ ಇರಕಲ್ ಅಧ್ಯಕ್ಷತೆ ವಹಿಸಿದ್ದರು.
    ಪ್ರಥಮ ವರ್ಷದ ಬಿ.ಎಸ್‌ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕಿ ರಾಜಶ್ರೀ ಪ್ರತಿಜ್ಞಾವಿಽ ಬೋಽಸಿದರು. ಡಾಕ್ಟರೇಟ್ ಪದವಿ ಪಡೆದ ಶ್ರೀಯಾ ಆಸ್ಪತ್ರೆಯ ವೈದ್ಯರಾದ ಡಾ. ಅಮೃತ ಬಸವ ಹಾಗೂ ಪ್ರಾಚಾರ್ಯೆ ಡಾ. ರೋಢಾ ಜೇಸುರಾಜ ಅವರನ್ನು ಸನ್ಮಾನಿಸಲಾಯಿತು.
    ಶೈಕ್ಷಣಿಕ ನಿರ್ದೇಶಕಿ ಡಾ. ವಾಣಿ ಎಸ್. ಇರಕಲ್, ಪ್ರಾಚಾರ್ಯೆ ಡಾ. ರೋಢಾ ಜೇಸುರಾಜ, ಲೀಲಾವತಿ ಕಳಸಪ್ಪನವರ, ಇತರರಿದ್ದರು. ಪಲ್ಲವಿ ಮತ್ತು ಶೋಭಾ ನಿರೂಪಿಸಿದರು. ಸುಶ್ಮಿತಾ ಸ್ವಾಗತಿಸಿದರು. ಸ್ಪೂರ್ತಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts