More

    ಸೆಲೆಬ್ರಿಟಿ IAS ಅಧಿಕಾರಿ ಟೀನಾ ಡಾಬಿ ಹೆಸರಲ್ಲಿ ವಂಚನೆ: ಸರ್ಕಾರಿ ಅಧಿಕಾರಿಗೆ ಮೆಸೇಜ್​ ಕಳುಹಿಸಿ ಸಿಕ್ಕಿಬಿದ್ದ ಯುವಕ

    ಜೈಪುರ: ವಾಟ್ಸ್​ಆ್ಯಪ್​ನಲ್ಲಿ ಸೆಲೆಬ್ರಿಟಿ ಐಎಎಸ್​ ಅಧಿಕಾರಿ ಟೀನಾ ಡಾಬಿ ಅವರ ಫೋಟೋ ಬಳಸಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದ ಯುವಕನೊಬ್ಬನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕ ದಂಗಾರ್ಪುರ್​ ನಿವಾಸಿ ಎಂದು ತಿಳಿದುಬಂದಿದೆ.

    ಟೀನಾ ಡಾಬಿ ಹೆಸರಿನಲ್ಲಿ ರಾಜಸ್ಥಾನದ ಆಡಳಿತ ಸೇವೆಯ ನಗರ ಸುಧಾರಣಾ ಟ್ರಸ್ಟ್ ಕಾರ್ಯದರ್ಶಿ ಸುನಿತಾ ಚೌಧರಿ ಅವರು ತಮ್ಮ ವಾಟ್ಸ್​ಆ್ಯಪ್​ನಲ್ಲಿ ಅಮೇಜಾನ್​ ಗಿಫ್ಟ್ ವೋಚರ್​ ಪಡೆಯುವಂತೆ ಮಸೇಜ್​ ಸ್ವೀಕರಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

    ಆರೋಪಿ ಯುವಕ ವಾಟ್ಸ್​ಆ್ಯಪ್​ನಲ್ಲಿ ತನ್ನ ನಂಬರ್​ ಅನ್ನು ರಿಜಿಸ್ಟರ್​ ಮಾಡಿ ಪ್ರೊಫೈಲ್​ ಪಿಕ್ಚರ್​ಗೆ ಐಎಎಸ್​ ಅಧಿಕಾರಿ ಹಾಗೂ ಜೈಸಲ್ಮೇರ್​ ಜಿಲ್ಲಾಧಿಕಾರಿ ಟೀನಾ ಡಾಬಿ ಅವರ ಫೋಟೋವನ್ನು ಹಾಕಿಕೊಂಡು​ ಜನರಿಗೆ ಸಂದೇಶ ಕಳುಹಿಸುತ್ತಿದ್ದ. ವಿವಿಧ ಮೊತ್ತದ ಅಮೆಜಾನ್ ಉಡುಗೊರೆ ಕಾರ್ಡ್‌ಗಳನ್ನು ಪಡೆಯುವಂತೆ ಕೇಳುತ್ತಿದ್ದ. ಸುಲಲಿತವಾಗಿ ಇಂಗ್ಲಿಷ್​ ಬರವಣಿಗೆ ನೋಡಿ ಅನೇಕರು ನಿಜ ಎಂದು ನಂಬಿದ್ದರು.

    ಸೋಮವಾರ ಸುನಿತಾ ಚೌಧರಿ ಕೂಡ ಮಸೇಜ್​ ಸ್ವೀಕರಿಸಿದ್ದಾರೆ. ಇಂಗ್ಲಿಷ್​ ಬರವಣಿಗೆ ನೋಡಿ ಅವರು ಕೂಡ ಟೀನಾ ಡಾಬಿ ಎಂದು ನಂಬಿದ್ದಾರೆ. ಟೀನಾ ಅವರಿಗೆ ಏನಾದರೂ ಕೆಲಸ ಇರಬಹುದು ಎಂದು ನಾನು ಭಾವಿಸಿದೆ. ಆದಾಗ್ಯೂ, ವಂಚಕನು ಸಂದೇಶಗಳಲ್ಲಿ ನನ್ನಿಂದ ಅಮೆಜಾನ್ ಉಡುಗೊರೆ ವೋಚರ್​ಗಳನ್ನು ಕೇಳಿದ್ದ. ಆದರೆ ನಾನು ಅಮೆಜಾನ್ ಬಳಸುವುದಿಲ್ಲ. ಈ ಬಗ್ಗೆ ಖಚಿತಪಡಿಸಿಕೊಳ್ಳಲು ಟೀನಾಗೆ ಕರೆ ಮಾಡಿದೆ. ಈ ಬಗ್ಗೆ ಕೇಳಿ ಟೀನಾ ಕೂಡ ಶಾಕ್​ ಆದರು. ತನ್ನ ಹೆಸರಿನಲ್ಲಿ ವಂಚಿಸುತ್ತಿರುವುದನ್ನು ಕೇಳಿದ ಟೀನಾ, ಪೊಲೀಸ್​ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿ, ಪರಿಶೀಲಿಸುವಂತೆ ಹೇಳಿದರು ಎಂದು ಸುನಿತಾ ಅವರು ಹೇಳಿದ್ದಾರೆ.

    ಸೈಬರ್​ ತಂಡದ ಸಹಾಯದೊಂದಿಗೆ ಫೋನ್​ ನಂಬರ್​ ಜಾಡು ಹಿಡಿದು ಹೊರಟಾಗ ಮೊಬೈಲ್​ ನಂಬರ್​ನ ಟವರ್​ ಲೊಕೇಶನ್​ ದುಂಗಾರ್ಪುರ್​ನಲ್ಲಿ ಆ್ಯಕ್ಟೀವ್​ ಆಗಿರುವುದು ಪೊಲೀಸರಿಗೆ ತಿಳಿಯುತ್ತದೆ. ಬಳಿಕ ಯುವಕನೊಬ್ಬ ಆ ನಂಬರ್​ ಬಳಸುತ್ತಿರುವುದು ಗೊತ್ತಾಗಿ, ಆತನನ್ನು ತಕ್ಷಣ ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬಂಧಿಸಿದ್ದಾರೆ.

    ಇದೇ ಸಂದರ್ಭದಲ್ಲಿ ಜೈಸಲ್ಮೇರ್​ ಜಿಲ್ಲಾಧಿಕಾರಿ ಟೀನಾ ದಾಬಿ ಅವರು ಅಪರಿಚಿತ ನಂಬರ್‌ಗಳಿಂದ ಬರುವ ಸಂದೇಶಗಳ ಬಗ್ಗೆ ಜಾಗರೂಕರಾಗಿರಿ ಎಂದು ಜನರಿಗೆ ಮನವಿ ಮಾಡಿದ್ದಾರೆ.

    2015ರ ಬ್ಯಾಚ್​ನ ಐಎಎಸ್​ ಪರೀಕ್ಷೆಯಲ್ಲಿ ಟೀನಾ ಡಾಬಿ ಟಾಪರ್ ಆದರೆ, ಕಾಶ್ಮೀರ ಮೂಲದ ಅಥರ್​​ ಖಾನ್​ ಅವರು ಎರಡನೇ ರ್ಯಾಂಕ್​ ಪಡೆದಿದ್ದರು. ತರಬೇತಿ ಸಮಯದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರು 2018ರಲ್ಲಿ ವಿವಾಹವಾಗಿದ್ದರು. ಇಬ್ಬರು ಸಹ ರಾಜಸ್ಥಾನ ಕೇಡರ್​ನ ಅಧಿಕಾರಿಗಳಾಗಿದ್ದು, ಜೈಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮದುವೆಯಾದ ಎರಡು ವರ್ಷಗಳ ಬಳಿಕ ಕಳೆದ ನವೆಂಬರ್​ (2020) ತಿಂಗಳದಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದರು. 2021ರ ಆಗಸ್ಟ್​ ತಿಂಗಳಲ್ಲಿ ದಂಪತಿಯ ಡಿವೋರ್ಸ್​ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿತು. ಇದೀಗ ಇಬ್ಬರು ಮಾಜಿ ದಂಪತಿಗಳಾಗಿದ್ದಾರೆ. ಇದರ ಬೆನ್ನಲ್ಲೇ ಟೀನಾ ಡಾಬಿ ಅವರು ಏಪ್ರಿಲ್​ 22ರಂದು ಎರಡನೇ ವಿವಾಹವಾಗಿದ್ದಾರೆ. ತನಗಿಂತ ಮೂರು ವರ್ಷ ಹಿರಿಯರಾದ ಐಎಎಸ್​ ಅಧಿಕಾರಿ ಪ್ರದೀಪ್​ ಗಾವಂಡೆ ಅವರನ್ನು ಜೈಪುರದಲ್ಲಿ ನಡೆದ ಸರಳ ಮದುವೆ ಸಮಾರಂಭದಲ್ಲಿ ಟೀನಾ ಡಾಬಿ ಕೈಹಿಡಿದರು. ಗಾವಂಡೆ ಸಹ 2013ನೇ ಸಾಲಿನ ರಾಜಸ್ಥಾನ ಕೇಡರ್​ನ ಐಎಎಸ್​ ಅಧಿಕಾರಿಯಾಗಿದ್ದು, ಜೈಪುರದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಟೀನಾ ಡಾಬಿ ಅವರು ಎರಡನೇ ವಿವಾಹವಾದ ಬೆನ್ನಲ್ಲೇ ಅವರ ಮಾಜಿ ಪತಿ ಹಾಗೂ ಐಎಎಸ್​ ಅಧಿಕಾರಿ ಅಥರ್​ ಅಮೀರ್​ ಖಾನ್​ ಕೂಡ ಎರಡನೇ ಮದುವೆಗೆ ಸಿದ್ಧರಾಗಿದ್ದಾರೆ. ತಮ್ಮದೇ ಸಮುದಾಯದ ಡಾ. ಮೆಹ್ರೀನ್​ ಖಾಜಿ ಎಂಬುವರನ್ನು ವರಿಸಲಿದ್ದಾರೆ. (ಏಜೆನ್ಸೀಸ್​)

    ಮಹಿಳೆಯ ಮೇಲೆ ಕೈ ಮಾಡಿದ್ದ ಬಿಜೆಪಿ ನಾಯಕ ಅರೆಸ್ಟ್​: ಪತ್ನಿಗೆ ಫೋನ್​ ಮಾಡಿ ಸಿಕ್ಕಿಬಿದ್ದ ಆರೋಪಿ

    ಟ್ರಾಲಿ ಬ್ಯಾಗ್​ ಎಳ್ಕೊಂಡು ಬರ್ತಿದ್ದವಳ ಮೇಲೆ ಸಂಶಯಗೊಂಡು ಬ್ಯಾಗ್ ಓಪನ್​ ಮಾಡಿಸಿದ ಪೊಲೀಸರಿಗೆ ಕಾದಿತ್ತು ಶಾಕ್​!

    ರಾಜ್ಯ ನಕ್ಷೆಯಿಂದ ಕಲ್ಯಾಣ ಕರ್ನಾಟಕವನ್ನು ಅಳಿಸಲಾಗಿದೆಯೇ: ಪ್ರಿಯಾಂಕ್ ಖರ್ಗೆ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts