More

    2 ವರ್ಷದ ಮಗನನ್ನೇ ಕೊಲೆ ಮಾಡಿದ ಮಾಜಿ ಪೋರ್ನ್​ ಸ್ಟಾರ್​: ಹತ್ಯೆ ಹಿಂದಿನ ಭಯಾನಕ ಕಾರಣವಿದು!

    ರೋಮ್​: ಹೆತ್ತ ತಾಯಿಯೇ ಎರಡು ವರ್ಷದ ಮಗನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಮಗನ ಮೃತದೇಹವನ್ನು ಲಿಡ್ಲ್ ಸ್ಟೋರ್​ನ ಚೆಕ್ಔಟ್ ಕೌಂಟರ್​ನಲ್ಲಿ ಎಸೆದ ಭಯಾನಕ ಘಟನೆ ಇಟಲಿಯಲ್ಲಿ ನಡೆದಿದೆ.

    ಹಂಗೇರಿಯನ್​ನ ಮಾಜಿ ನೀಲಿ ತಾರೆ ಕ್ಯಾಟಲಿನ್​ ಎಲ್ಜೆಬೆತ್​ ಬ್ರಾಡ್ಯಾಕ್ಸ್​ (44) ಬಂಧಿತ ಆರೋಪಿ. ತನ್ನ 2 ವರ್ಷದ ಮಗ ಅಲೆಕ್ಸ್​ ಯುಹಾಸ್​ನನ್ನು ಕೊಲೆ ಮಾಡಿದ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗಿದೆ.

    ಮಾಜಿ ನೈಟ್​ ಕ್ಲಬ್​ ಡ್ಯಾನ್ಸರ್​ ಕೂಡ ಆಗಿರುವ ಆರೋಪಿ, ಇಟಲಿಯ ಉಂಬ್ರಿಯಾದಲ್ಲಿರುವ ಲಿಡ್ಲ್​ ಸ್ಟೋರ್​ಗೆ ಅಕ್ಟೋಬರ್​ 1ರಂದು ಪ್ರವೇಶ ನೀಡಿದ್ದಾಳೆ. ಬಳಿಕ ಮಗನನ್ನು ಹತ್ಯೆ ಮಾಡಿ ಆತನ ಮೃತದೇಹವನ್ನು ಸ್ಟೋರ್​ ಚೆಕ್​ಔಟ್​ ಕೌಂಟರ್​ನಲ್ಲಿ ಇಟ್ಟು ಅಲ್ಲಿಂದ ಪರಾರಿಯಾಗಿದ್ದಳು. ಮಗುವಿನ ಎದೆ ಮತ್ತು ಕುತ್ತಿಗೆ ಭಾಗದಲ್ಲಿ 9 ಗಾಯದ ಗುರುತುಗಳು ಪತ್ತೆಯಾಗಿವೆ.

    ಆರೋಪಿ ಕ್ಯಾಟಲಿನ್​ ಎಲ್ಜೆಬೆತ್​ ಬ್ರಾಡ್ಯಾಕ್ಸ್​ಳನ್ನು ಇಟಲಿ ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ಟೋಬರ್​ 1 ರಾತ್ರಿಯೇ ಒಂಬತ್ತು ರಂಧ್ರಗಳಿರುವ ಅಲೆಕ್ಸ್‌ನ ರಕ್ತಸಿಕ್ತ ಟಿ-ಶರ್ಟ್ ಮತ್ತು ಬ್ರಾಡಾಕ್ ಜಂಪರ್ ಸೇರಿದಂತೆ ಬಹಳಷ್ಟು ವಸ್ತುಗಳು ಪತ್ತೆಯಾಗಿವೆ.

    2 ವರ್ಷದ ಮಗನನ್ನೇ ಕೊಲೆ ಮಾಡಿದ ಮಾಜಿ ಪೋರ್ನ್​ ಸ್ಟಾರ್​: ಹತ್ಯೆ ಹಿಂದಿನ ಭಯಾನಕ ಕಾರಣವಿದು!

    ಮದುವೆ ಆಗಿ ದೂರಾದ ಮಗುವಿನ ತಂದೆಯ ಮೇಲೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಮಾಡಿದ್ದಾಳೆಂದು ಪೊಲೀಸರು ನಂಬಿದ್ದಾರೆ. ಹಂಗೇರಿಯಲ್ಲಿ ವಾಸಿಸುವ ಅಲೆಕ್ಸ್ ತಂದೆ, ತನ್ನ ಮೃತ ಮಗನ ಫೋಟೋವನ್ನು ವಾಟ್ಸಾಪ್ ಮೂಲಕ ತನ್ನ ಸೆಲ್ ಫೋನ್‌ಗೆ ಕಳುಹಿಸಿದ ನಂತರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಮಾಧ್ಯಮ ವರದಿಗಳ ಪ್ರಕಾರ, ಮಗುವಿನ ತಾಯಿಯೇ ಹುಡುಗನ ಶವದೊಂದಿಗೆ ಸೂಪರ್ ಮಾರ್ಕೆಟ್‌ಗೆ ಹೋಗುವ ಮುನ್ನ ತೆಗೆದ ಫೋಟೋವನ್ನು ಕಳುಹಿಸಿದಳು ಎಂದು ತಿಳಿದುಬಂದಿದೆ.

    ಆರೋಪಿಯನ್ನು ಬಂಧಿಸಿದ ನಂತರ, ಆಕೆಯನ್ನು ಒಳಪಡಿಸಲಾಗಿದೆ. ಆದರೆ, ತನ್ನ ವಿರುದ್ಧದ ಆರೋಪಗಳನ್ನು ಆಕೆ ನಿರಾಕರಿಸಿದ್ದು, ನಾನು ನನ್ನ ಮಗನನ್ನು ಕೊಲ್ಲಲಿಲ್ಲ ಎಂದು ಪದೇ ಪದೇ ಪೊಲೀಸರಿಗೆ ಹೇಳುತ್ತಿದ್ದಾಳೆ. ಸದ್ಯ ಆಕೆಯ ಮೇಲೆ ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. (ಏಜೆನ್ಸೀಸ್​)

    ಶೂಟಿಂಗ್​ ಸೆಟ್​ನಲ್ಲಿ ಗಳಗಳನೇ ಅತ್ತ ಸಮಂತಾ! ಸ್ಯಾಮ್​ ಕಣ್ಣೀರು ನೋಡಿ ಚಿತ್ರತಂಡ ಹೇಳಿದ್ದು ಹೀಗೆ…

    ಡೆತ್​ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಎಫ್​ಡಿಎ ಧರ್ಮಸ್ಥಳದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆ

    ಸಮಂತಾರ ಈ ಫೋಟೋ ಬಳಸಿದವರಿಗೆ ಸಂಕಷ್ಟ: ನಟಿಯ ನಿರ್ಧಾರದಿಂದ ಕೆಲವರಿಗೆ ಸಮಸ್ಯೆ ಖಂಡಿತ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts