More

    ಈತ ತಬ್ಬಿಕೊಂಡಿದ್ದಕ್ಕೆ ಮಹಿಳಾ ಸಹೋದ್ಯೋಗಿಯ ಪಕ್ಕೆಲುಬು ಮುರಿತ: ತಬ್ಬಿಕೊಂಡ ತಪ್ಪಿಗೆ 1.6 ಲಕ್ಷ ರೂ. ದಂಡ!

    ಬೀಜಿಂಗ್​: ಮಹಿಳಾ ಸಹೋದ್ಯೋಗಿಯನ್ನು ಆಲಂಗಿಸಿದ ಪರಿಣಾಮ ಪುರುಷನೊಬ್ಬ ಒಂದೂವರೆ ಲಕ್ಷ ರೂಪಾಯಿ ದಂಡ ಕಟ್ಟಿದ ವಿರಾಳಾತಿ ವಿರಳ ಘಟನೆ ಚೀನಾದಲ್ಲಿ ನಡೆದಿದೆ.

    ಸಂತ್ರಸ್ತ ಮಹಿಳೆ ಚೀನಾದ ಯುಯಾಂಗ್​ ನಗರದಲ್ಲಿರುವ ಕಂಪನಿಯೊಂದರ ಉದ್ಯೋಗಿ. ಆಕೆ ಸಹೋದ್ಯೋಗಿ ಒಬ್ಬರ ಜೊತೆ ಮಾತನಾಡುವಾಗ ಹಿಂಬದಿಯಿಂದ ಬಂದ ಮತ್ತೊರ್ವ ಸಹೋದ್ಯೋಗಿ ಆಕೆಯನ್ನು ತುಂಬಾ ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ. ಆದರೆ, ಆಕೆಗೆ ಬಿಗಿಯಾದ ಆಲಿಂಗನವು ತುಂಬಾ ನೋವುಂಟು ಮಾಡಿದ್ದರಿಂದ ಕಣ್ಣೀರಿಡುತ್ತಾಳೆ.

    ಸಹೋದ್ಯೋಗಿಯ ಬಿಗಿಯಾದ ಆಲಿಂಗನದಿಂದ ಬಿಡಿಸಿಕೊಂಡರೂ ಆಕೆಯ ಎದೆ ನೋವು ಮಾತ್ರ ಕಡಿಮೆ ಆಗುವುದೇ ಇಲ್ಲ. ಬಳಿಕ ಕೆಲಸ ಮುಗಿಸಿಕೊಂಡು ಮಹಿಳೆ ಮನೆಗೆ ಹಿಂತಿರುತ್ತಾಳೆ. ಎದೆ ನೋವು ಕಡಿಮೆಯಾಗದ ಕಾರಣ ಬಿಸಿ ಎಣ್ಣೆಯಿಂದ ಮಸಾಜ್​ ಮಾಡಿಕೊಳ್ಳುತ್ತಾಳೆ. ಆದರೂ ಐದು ದಿನಗಳಾದರೂ ನೋವು ಮಾತ್ರ ಕಡಿಮೆ ಆಗುವುದೇ ಇಲ್ಲ. ಬಳಿಕ ವೈದ್ಯರನ್ನು ಕಾಣುವುದೇ ಸರಿ ಅಂತ ಮಹಿಳೆ ಆಸ್ಪತ್ರೆಗೆ ತೆರಳುತ್ತಾಳೆ. ಆಕೆಯ ಎಕ್ಷ್​ರೇ ತೆಗೆದು ನೋಡುವ ವೈದ್ಯರು, ಬಲಭಾಗದಲ್ಲಿ ಎರಡು ಮತ್ತು ಎಡಭಾಗದಲ್ಲಿ ಎರಡು ಪಕ್ಕೆಲುಬುಗಳು ಮುರಿದಿವೆ ಎಂದು ಹೇಳುತ್ತಾರೆ. ಇದನ್ನು ಕೇಳಿ ಮಹಿಳೆ ಶಾಕ್​ ಆಗುತ್ತಾಳೆ. ಚಿಕಿತ್ಸೆ ಕಾರಣದಿಂದ ಕೆಲಸಕ್ಕೆ ಹೋಗಲು ಆಗದೇ ರಜೆ ತೆಗೆದುಕೊಳ್ಳುತ್ತಾಳೆ.

    ರಜಾ ಅವಧಿಯಲ್ಲಿ ಮಹಿಳೆಗೆ ಯಾವುದೇ ಸಂಬಳ ದೊರೆಯುವುದಿಲ್ಲ. ಇಷ್ಟೇ ಅಲ್ಲದೆ, ಹೆಚ್ಚುವರಿಯಾಗಿ ಆಕೆಗೆ ಆಸ್ಪತ್ರೆಯ ವೆಚ್ಚಗಳು ಸಹ ಬೀಳುತ್ತದೆ. ಇದರಿಂದ ಆಕೆಯ ಅವ್ಯವಸ್ಥೆಗೆ ಕಾರಣವಾದ ಸಹೋದ್ಯೋಗಿಯನ್ನು ಆಸ್ಪತ್ರೆಯ ವೆಚ್ಚ ಭರಿಸುವಂತೆ ಕೇಳುತ್ತಾಳೆ. ಆದರೆ, ಆತ ಆಕೆಯ ಬೇಡಿಕೆಯನ್ನು ತಿರಸ್ಕರಿಸುತ್ತಾನೆ. ಇದಾದ ಬಳಿಕ ಬೇರೆ ದಾರಿಯಿಲ್ಲದೇ ಸಂತ್ರಸ್ತೆ ನ್ಯಾಯಾಲಯದ ಮೆಟ್ಟಿಲೇರುತ್ತಾಳೆ.

    ಈ ಘಟನೆ ಕುರಿತು ನ್ಯಾಯಾಲಯ ತನಿಖೆ ನಡೆಸುತ್ತದೆ. ಪಕ್ಕೆಲುಬುಗಳು ಮುರಿದಿರುವುದರಿಂದ ಆಕೆಗೆ ಯಾವುದೇ ಕೆಲಸ ಮಾಡಿಕೊಳ್ಳಲು ಸಹ ಆಗುವುದಿಲ್ಲ. ಕೊನೆಗೆ ತನಿಖೆಯನ್ನು ಸಹೋದ್ಯೋಗಿಯ ತಪ್ಪು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ 10 ಸಾವಿರ ಯುವಾನ್ (ಚೀನಾ ಕರೆನ್ಸಿ) ನೀಡುವಂತೆ ಆದೇಶಿಸುತ್ತದೆ. ಭಾರತೀಯ ಕರೆನ್ಸಿ ಪ್ರಕಾರ 1.6 ಲಕ್ಷ ರೂಪಾಯಿ. (ಏಜೆನ್ಸೀಸ್​)

    ಕುಣಿಗಲ್​ನಲ್ಲಿ ಅಕ್ರಮವಾಗಿ ಜಲ್ಲಿಕಲ್ಲು ಸಾಗಾಟ: ರಸ್ತೆಬದಿ ನಿಂತು ಹಣ ವಸೂಲಿ ಮಾಡುತ್ತಿದ್ದ ಪೊಲೀಸರಿಗೆ ಆಯ್ತು ತಕ್ಕಶಾಸ್ತಿ

    ಪ್ರೀತಿ ನಿರಾಕರಿಸಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿನಿಗೆ ಗುಂಡಿಕ್ಕಿದ ಯುವಕ: ಸಿಸಿಟಿಯಲ್ಲಿ ಭಯಾನಕ ದೃಶ್ಯ ಸೆರೆ

    ಅಪ್ರಾಪ್ತೆ ಅಪಘಾತ ಪ್ರಕರಣದ ತನಿಖೆ ವೇಳೆ ಬಯಲಾಯ್ತು ನಕಲಿ ನಂಬರ್ ಪ್ಲೇಟ್ ಅವಾಂತರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts