More

    ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಕೇರಳ ಮೂಲದ ಯೋಧ ಸೇರಿ ಐವರು ಹುತಾತ್ಮ

    ಶ್ರೀನಗರ: ಸೋಮವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್​ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆ ವೇಳೆ ಗುಂಡಿನ ಕಾಳಗದಲ್ಲಿ ಕೇರಳ ಮೂಲದ ಓರ್ವ ಯೋಧ ಸೇರಿದಂತೆ ಐವರು ಯೋಧರು ಹುತಾತ್ಮರಾಗಿದ್ದಾರೆ.

    ಹುತಾತ್ಮರಾದ ವೈಸಾಖ್ ಅವರು ಕೊಟ್ಟರಕ್ಕರದಲ್ಲಿರುವ ಒಡನವಟ್ಟಂ ನಿವಾಸಿ. ಉಗ್ರರ ವಿರುದ್ಧ ನಡೆದ ಗುಂಡಿನ ಚಕಮಕಿಯಲ್ಲಿ ಕಿರಿಯ ನಿಯೋಜಿತ ಅಧಿಕಾರಿ (ಜೆಸಿಒ) ಸೇರಿದಂತೆ ಒಟ್ಟು ಐವರು ಹುತಾತ್ಮರಾಗಿದ್ದಾರೆ. ಗಡಿಯಿಂದ ಒಳನುಸುಳಿ ಕಾಶ್ಮೀರ ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಮೇರೆಗೆ ಸುರನ್​ಕೋಟೆಯಲ್ಲಿನ ದೇರಾ ಕಿ ಗಾಲಿ ಬಳಿಯಲ್ಲಿರುವ ಗ್ರಾಮದಲ್ಲಿ ಯೋಧರು ಕಾರ್ಯಚರಣೆ ಕೈಗೊಂಡಿದ್ದರು. ​

    ಉಗ್ರರು ಮತ್ತು ಯೋಧರ ನಡುವೆ ತೀವ್ರ ಗುಂಡಿನ ದಾಳಿ ನಡೆದಿದ್ದರಿಂದ ಜೆಸಿಒ ಸೇರಿದಂತೆ ಐವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಐವರು ಕೂಡ ಕೊನೆಯುಸಿರೆಳೆದಿದ್ದಾರೆಂದು ರಕ್ಷಣಾ ವಕ್ತಾರರು ಮಾಹಿತಿಯನ್ನು ನೀಡಿದ್ದಾರೆ. ಹತ್ತಿರದ ಮಿಲಿಟರಿ ಆಸ್ಪತ್ರೆಯಲ್ಲೇ ಯೋಧರು ಹುತಾತ್ಮರಾಗಿದ್ದಾರೆ.

    ಜಮ್ಮು ಪ್ರದೇಶದ ಅವಳಿ ಜಿಲ್ಲೆಗಳಾದ ರಾಜೌರಿ ಮತ್ತು ಪೂಂಚ್​ನಲ್ಲಿ ಈ ವರ್ಷದ ಜೂನ್​ನಿಂದ ಒಳನುಸುಳುವಿಕೆ ಯತ್ನಗಳು ಹೆಚ್ಚಳವಾಗಿದ್ದು, ಒಂಬತ್ತು ಭಯೋತ್ಪಾದಕರನ್ನು ಪ್ರತ್ಯೇಕ ಎನ್​ಕೌಂಟರ್​ನಲ್ಲಿ ಈವರೆಗೆ ಹತ್ಯೆ ಮಾಡಲಾಗಿದೆ. ಹಿಂದಿನ ಕಾರ್ಯಾಚರಣೆ ವೇಳೆ ಮೂವರು ಯೋಧರು ಹುತಾತ್ಮರಾಗಿದ್ದರು.

    ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲಿ ನಡೆದ ಎನ್​ಕೌಂಟರ್​ ವೇಳೆ ಇಬ್ಬರು ಉಗ್ರರು ಹತರಾಗಿದ್ದು, ಓರ್ವ ಪೊಲೀಸ್ ಗಾಯಗೊಂಡಿದ್ದರು. (ಏಜೆನ್ಸೀಸ್​)

    21ರಿಂದ 1-5ನೇ ತರಗತಿ; ಬಿಸಿಯೂಟದ ಜತೆಗೆ ಪ್ರೖೆಮರಿ ಸ್ಕೂಲ್ ಶುರು..

    ಪಂಚಾಯಿತಿಗೆ ಪವರ್: 29 ಇಲಾಖೆಗಳ ಜವಾಬ್ದಾರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ..

    ಉತ್ತರ ಪ್ರದೇಶ ಚುನಾವಣೆ ಮೇಲೆ ಲಖಿಂಪುರ್​ ಖೇರಿ ಹಿಂಸಾಚಾರ ಪ್ರಕರಣ ಪ್ರಭಾವ ಹೇಗಿರಲಿದೆ? ಬಿಜೆಪಿ ಮಹತ್ವದ ಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts