More

    ದಿನಗೂಲಿ ನೌಕರರು ಸಹ ಪ್ರತಿ ಲೀಟರ್​ ಪೆಟ್ರೋಲ್​ಗೂ ತೆರಿಗೆ ಕಟ್ತಾರೆ: ನಟ ಧನುಷ್​ಗೆ ಹೈಕೋರ್ಟ್​ ತರಾಟೆ!

    ಚೆನ್ನೈ: ಆಮದು ಮಾಡಿಕೊಂಡ ರೋಲ್ಸ್​ ರಾಯ್ಸ್​ ಕಾರಿಗೆ ಪ್ರವೇಶ ತೆರಿಗೆ ವಿನಾಯಿತಿ ನೀಡಬೇಕೆಂದು ಕಾಲಿವುಡ್​ ನಟ ಧನುಸ್​​, ಈ ಮುಂಚೆ ಸಲ್ಲಿಸಿದ ಅರ್ಜಿಗೆ ಗುರುವಾರ ಪ್ರತಿಕ್ರಿಯೆ ನೀಡಿರುವ ಮದ್ರಾಸ್​ ಹೈಕೋರ್ಟ್, ನಟ ಧನುಸ್​​ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದೆ.

    ಮುಂದಿನ 48 ಗಂಟೆಯೊಳಗೆ 30.30 ಲಕ್ಷ ರೂ. ಪಾವತಿಸುವಂತೆ ನ್ಯಾಯಮೂರ್ತಿ ಎಸ್​. ಎಂ. ಸುಬ್ರಮಣ್ಯಂ ಅವರು ಧನುಷ್​ಗೆ ಆದೇಶಿಸಿದ್ದಾರೆ. ಧನುಷ್​ರಂತಹ ಸೆಲೆಬ್ರಿಟಿಗಳಿಗಿಂತ ಕಡಿಮೆ ಸಂಪಾದನೆ ಮಾಡುವವರೇ ತೆರಿಗೆ ವಿನಾಯಿತಿ ಬೇಕು ಎಂದು ಒಂದು ದಿನವೂ ನ್ಯಾಯಾಲಯದ ಮೆಟ್ಟಿಲು ಹತ್ತುವುದಿಲ್ಲ ಎಂದು ನ್ಯಾಯಮೂರ್ತಿ ಟೀಕಿಸಿದರು.

    ತೆರಿಗೆದಾರರ ಹಣದಿಂದ ನಿರ್ಮಿಸಲಾದ ರಸ್ತೆಗಳಲ್ಲಿ ನೀವು ಐಷಾರಾಮಿ ಕಾರಗಳನ್ನು ಓಡಿಸುತ್ತೀರಿ. ಹಾಲು ವ್ಯಾಪಾರಿ ಅಥವಾ ದಿನಗೂಲಿ ನೌಕರರು ಸಹ ತಾವು ತೆಗೆದುಕೊಳ್ಳುವ ಪ್ರತಿ ಲೀಟರ್​ ಪೆಟ್ರೋಲ್​ಗೂ ತೆರಿಗೆ ಕಟ್ಟುತ್ತಾರೆ ಎಂದು ಧನುಷ್​ ಅವರನ್ನು ನ್ಯಾಯಮೂರ್ತಿಗಳು ಛೇಡಿಸಿದರು. ​

    ಇದೇ ನ್ಯಾಯಮೂರ್ತಿ ಎಸ್​. ಎಂ. ಸುಬ್ರಮಣ್ಯಂ, ನಟ ವಿಜಯ್​ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆಮದು ಮಾಡಿಕೊಂಡ ರೋಲ್ಸ್​ ರಾಯ್ ಘೋಸ್ಟ್​​ ಕಾರಿನ ಪ್ರವೇಶ ತೆರಿಗೆಯನ್ನು ಕಡಿಮೆ ಮಾಡಿ ಎಂದು ವಿಜಯ್​ ಕೂಡ ಕೊರ್ಟ್​ ಮೆಟ್ಟಿಲೇರಿದ್ದರು.

    2015ರಲ್ಲಿ ಧನುಷ್ 2.15 ಕೋಟಿ ಮೌಲ್ಯದ​ ರೋಲ್ಸ್​ ರಾಯ್ಸ್​ ಘೋಸ್ಟ್​ ಕಾರನ್ನು ಇಂಗ್ಲೆಂಡ್​ನಿಂದ ಆಮದು ಮಾಡಿಕೊಂಡಿದ್ದಾರೆ. ಪ್ರಾದೇಶಿಕ ಸಾರಿಗೆ ಅಧಿಕಾರಿಯು ಕಾರನ್ನು ನೋಂದಾಯಿಸುವ ಮೊದಲು ತೆರಿಗೆ ಇಲಾಖೆಯಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯುವಂತೆ ಧನುಷ್​ಗೆ ಸೂಚಿಸಿದರು. ಎನ್​ಒಸಿಗಾಗಿ ಧನುಷ್​ ತೆರಿಗೆ ಇಲಾಖೆಗೆ ಹೋದಾಗ 60.66 ಲಕ್ಷ ರೂ. ಪ್ರವೇಶ ತೆರಿಗೆ ಕಟ್ಟಲು ಧನುಷ್​ಗೆ ಸೂಚಿಸಲಾಯಿತು. ಬಳಿಕ ಧನುಷ್ ಪ್ರವೇಶ ತೆರಿಗೆಗಾಗಿ ಬೇಡಿಕೆ ಇಡುತ್ತಿದ್ದಾರೆಂದು​ ಇಲಾಖೆ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದರು. ಆ ಸಮಯದಲ್ಲಿ, ನ್ಯಾಯಾಲಯವು 14 ದಿನಗಳ ಒಳಗೆ ಹೇಳಿದ ತೆರಿಗೆ ಮೊತ್ತದ ಮೇಲೆ 50 ಪ್ರತಿಶತವನ್ನು ಪಾವತಿಸಿದರೆ ಮಾತ್ರ ನಟನಿಗೆ ಎನ್‌ಒಸಿ ನೀಡುವಂತೆ ಆರ್‌ಟಿಒಗೆ ಮಧ್ಯಂತರ ಆದೇಶವನ್ನು ಹೊರಡಿಸಿ, ಸೂಚನೆ ನೀಡಿತು.

    ಧನುಷ್ ಅವರ ವಕೀಲರು 2015ರ ಅರ್ಜಿಯನ್ನು ಹಿಂಪಡೆಯಲು ಬಯಸಿದ್ದರಿಂದ ಪ್ರಕರಣವು ಮತ್ತೆ ಮುಂಚೂಣಿಗೆ ಬಂದಿತು ಮತ್ತು ಉಳಿದ ತೆರಿಗೆಯನ್ನು ಪಾವತಿಸಲು ನಟ ಸಿದ್ಧ ಎಂದು ಹೇಳಿದರು. ಗುರುವಾರ ಅರ್ಜಿಯನ್ನು ಹಿಂಪಡೆಯಲು ನ್ಯಾಯಾಲಯವು ಅನುಮತಿಸಲಿಲ್ಲ ಮತ್ತು “ನಿಮ್ಮ ಉದ್ದೇಶಗಳು ನಿಜವಾದರೆ, 2018ರಲ್ಲಿ ಸುಪ್ರೀಂಕೋರ್ಟ್ ಸಮಸ್ಯೆಯನ್ನು ಇತ್ಯರ್ಥಪಡಿಸಿದ ನಂತರವೇ ನೀವು ತೆರಿಗೆಯನ್ನು ಪಾವತಿಸಬೇಕಾಗಿತ್ತು. ಈಗ ಹೈಕೋರ್ಟ್ ಈ ವಿಷಯವನ್ನು ಆದೇಶಗಳಿಗಾಗಿ ಪಟ್ಟಿ ಮಾಡಿದ ನಂತರ ನೀವು ಹಿಂತೆಗೆದುಕೊಳ್ಳಲು ಬಯಸುತ್ತಿದ್ದೀರಿ ಎಂದು ಕೋರ್ಟ್​ ಟೀಕಿಸಿದೆ.

    ನ್ಯಾಯಾಲಯದ ಮೊರೆ ಹೋಗುವುದು ನಿಮ್ಮ ಹಕ್ಕು ಎಂಬುದರಲ್ಲಿ ಸಂದೇಹವಿಲ್ಲ. ಆದರೆ, 2018 ರಲ್ಲಿ ಸುಪ್ರೀಂಕೋರ್ಟ್ ಸಮಸ್ಯೆಯನ್ನು ಇತ್ಯರ್ಥಪಡಿಸಿದ ನಂತರವಾದರೂ ನೀವು ತೆರಿಗೆ ಪಾವತಿಸಿ ಮತ್ತು ಅರ್ಜಿಯನ್ನು ಹಿಂಪಡೆಯಬೇಕಿತ್ತು ಎಂದು ನ್ಯಾಯಾಲಯ ಹೇಳಿದೆ. (ಏಜೆನ್ಸೀಸ್​)

    ಬಿಗ್​ಬಾಸ್​ ಟ್ರೋಫಿ ಗೆಲ್ಲದಿರುವುದೇ ದಿವ್ಯಾ ಉರುಡುಗಗೆ ಅದೃಷ್ಟವಂತೆ: ಫ್ಯಾನ್ಸ್​ ಕೊಟ್ಟ ಅಚ್ಚರಿಯ ಕಾರಣ ಇಲ್ಲಿದೆ..!

    10 ತಾಸಿನ ಫಿನಾಲೆ: ಬಿಗ್​ಬಾಸ್​ ಕನ್ನಡ ಸೀಸನ್​-8ರ ಮುಕ್ತಾಯಕ್ಕೆ ಮೂರೇ ದಿನ ಬಾಕಿ..

    ಮಾನಸಿಕ ಅಸ್ವಸ್ಥನ ರೂಪವನ್ನೇ ಬದಲಿಸಿ ಮಾನವೀಯತೆ ಮೆರೆದ ವಿಜಯನಗರದ ಯುವಕರು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts