More

    ಪಾಲಕರ ವಿರೋಧದ ಮಧ್ಯೆಯೂ ಪ್ರೀತಿಸಿ ಮದ್ವೆಯಾದ ಮರುದಿನವೇ ಗಂಡನಿಗೆ ಶಾಕ್​ ಕೊಟ್ಟ ಯುವತಿ!

    ಬೆಂಗಳೂರು: ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಬುಧವಾರ (ಜೂ.1) ಅಪಹರಣ ಪ್ರಕರಣವೊಂದು ದಾಖಲಾಗಿತ್ತು. ಯುವತಿಯ ತಂದೆ 20 ಜನರ ಗ್ಯಾಂಗ್​ನೊಂದಿಗೆ ಬಂದು ವಿರೋಧದ ನಡುವೆಯೂ ಮದುವೆಯಾಗಿದ್ದ ಮಗಳನ್ನು ಅಪಹರಿಸಿದ್ದರು. ಈ ವೇಳೆ ತಡೆಯಲು ಬಂದು ವರ ಹಾಗೂ ಅವರ ಸಂಬಂಧಿಕರ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು. ಇದೀಗ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಅಪಹರಣವಾಗಿದ್ದ ಯುವತಿಯೇ ಇದೀಗ ತನ್ನ ವರಸೆ ಬದಲಿಸಿದ್ದು, ಮದುವೆಯಾದವನ ಮೇಲೆಯೇ ದೂರು ದಾಖಲಿಸಲು ಮುಂದಾಗಿದ್ದಾಳೆ.

    ಮದುವೆಯಾಗಿರುವ ಜಲಜಾ ಇದೀಗ ತಾಳಿಕಟ್ಟಿದ ಗಂಗಾಧರ್ ವಿರುದ್ಧವೇ ನಿಂತಿದ್ದಾಳೆ. ನಾನೇ ನನ್ನ ಸ್ವಇಚ್ಛೆಯಿಂದ ಮೊನ್ನೆ ರಾತ್ರಿ ಮನೆಯಿಂದ ಹೊರ ಬಂದಿದ್ದು, ನನ್ನ ಯಾರು ಅಪಹರಣ ಮಾಡಿಲ್ಲ ಅಂತ ಹೇಳಿ ಯೂಟರ್ನ್ ಹೊಡೆದು ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ತಾನೇ ಪ್ರೀತಿಸಿ ಮದುವೆಯಾದ ಗಂಗಾಧರ್ ಮೇಲೆ ದೂರು ದಾಖಲಿಸಲು ಮುಂದಾಗಿದ್ದಾಳೆ.

    ತನ್ನ ಪೋಷಕರ ಜೊತೆಗೆ ಠಾಣೆ ಹಾಜರಾದ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಜಲಜಾ, ನನ್ನ ತಂದೆಯನ್ನು ಕೊಲ್ಲುವುದಾಗಿ ಬೆದರಿಸಿ, ನನ್ನನ್ನ ಬಲವಂತದ ಮದುವೆಯಾದರು. ಆತನಿಗೆ ಬೇರೆ ಇನ್ಯಾರದ್ದೋ ಜೊತೆ ಅಫೇರ್ ಇದೆ ಎಂಬುದು ಮದುವೆ ಆದ ಮೇಲೆ ಗೊತ್ತಾಯಿತು. ಅದಕ್ಕೆ‌ ನಾನು ನಮ್ಮಪ್ಪನ ಸ್ನೇಹಿತರಿಗೆ ವಿಷಯ ಮುಟ್ಟಿಸಿದ್ದೆ, ಮೊನ್ನೆ ರಾತ್ರಿ ಅಪ್ಪ, ಮನೆ ಹತ್ತಿರ ಬಂದಿದ್ದರು. ನಾನು ಅಪ್ಪನ ಜೊತೆ ಬಂದೆ. ನನ್ನ ಯಾರು ಅಪಹರಣ ಮಾಡಿಲ್ಲ ಎಂದು ಹೇಳಿದ್ದಾಳೆ.

    ಯುವತಿ ನೋಡುದ್ರೆ ನಮ್ಮಪ್ಪ ಬಂದು ಕರ್ಕೊಂಡು ಹೋದ್ರು ಅಂತಾಳೆ, ಆದರೆ ಈಕೆ ತಂದೆ ದೇವರಾಜು ನಾನು ಆಸ್ಪತ್ರೆ ಬೆಡ್ ಬಿಟ್ಟು ಆಚೇನೆ ಹೋಗಿಲ್ಲ ಅಂತಾ ನಿನ್ನೆ ಹೇಳಿದ್ದಾರೆ. ಇವತ್ತು ನೋಡಿದ್ರೆ ಆಸ್ಪತ್ರೆ ಹತ್ರ ವಾಕಿಂಗ್​ ಮಾಡುವ ಟೈಂನಲ್ಲಿ ಸ್ನೇಹಿತರು ಕರೆ ಮಾಡಿ, ನಿನ್ನ ಮಗಳು ಸಿಕ್ಕಿದ್ದಾಳೆ ಅಂತಾ ಹೇಳಿದರು. ಅದಕ್ಕೆ ನಾನು ಅಂಧ್ರಹಳ್ಳಿ ಗೇಟ್‌ಗೆ ಹೋಗಿದ್ದೆ. ನಾನು ಕಾರಲ್ಲೇ ಕೂತಿದ್ದೆ. ಅವರ ಮನೆ ಹತ್ರ ಹೋಗಿರಲಿಲ್ಲ ಅಂತಾ ದ್ವಂದ್ವ ಹೇಳಿಕೆ ನೀಡುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

    ಜಲಜಾ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಗಂಗಾಧರ್, ಜಲಜಾ ಮಾಡುತ್ತಿರುವ ಆರೋಪಗಳೆಲ್ಲ ಸತ್ಯಕ್ಕೆ ದೂರವಾದದ್ದು. ಆಕೆ ನನ್ನೆದುರು ಬಂದು, ನೀನು ಇಷ್ಟ ಇಲ್ಲ ಅಂದ್ರೆ ಎಲ್ಲೋ ಸುಖವಾಗಿ ಇರಲಿ ಅಂತ ಸುಮ್ಮನಾಗ್ತೀನಿ. ಆದ್ರೆ, ಆಕೆ ಬಂದು ನನ್ನ ಮುಂದೆ ಮಾತಾಡಬೇಕು.‌ ಅದು ಬಿಟ್ಟು ಸುಖಾ ಸುಮ್ಮನೆ ಆರೋಪ ಮಾಡಬಾರದು. ಇದೆಲ್ಲ ಅವಳ ಸ್ವಂತ ಹೇಳಿಕೆಗಳಲ್ಲ. ಅವರ ಕುಟುಂಬಸ್ಥರು ಬಲವಂತದಿಂದ ಹೇಳಿಸುತ್ತಿದ್ದಾರೆ ಎಂದು ಕಣ್ಣೀರು ಸುರಿಸಿದರು. ಗಂಗಾಧರ್​ ಅವರ ಅಕ್ಕ ಸಾಕಮ್ಮ ಕೂಡ ಅದೇ ಮಾತನ್ನ ಹೇಳಿದರು.

    ಸದ್ಯ ಮದುವೆ ಆಗಿ 6 ದಿನಗಳಲ್ಲಿ ಅಂದು ಕೊಂಡಂತೆ ಎಲ್ಲಾ ಸರಿ ಇದ್ದಿದ್ರೆ. ಇಂದು ಹನಿಮೂನ್‌ನಲ್ಲಿ ಇರಬೇಕಾದ ಜೋಡಿ ಸದ್ಯ ಪೊಲೀಸ್ ಠಾಣೆಗಳಿಗೆ ತಿರುಗಾಡೋ ಹಾಗಿದೆ. ಆರೋಪ-ಪ್ರತ್ಯಾರೋಪಗಳನ್ನು ನೋಡಿದ್ರೆ ಯಾರದ್ದು ಸರಿ, ಯಾರದ್ದು ತಪ್ಪು ಅನ್ನೋದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಈ ಪ್ರಕರಣ ಒಂದು ಸುಖಾಂತ್ಯ ಕಾಣಬೇಕಿದೆ. (ದಿಗ್ವಿಜಯ ನ್ಯೂಸ್​)

    ತಂದೂರಿ ಚಿಕನ್ ಸೇವಿಸಿದ ದ್ವಿತೀಯ ಪಿಯು ವಿದ್ಯಾರ್ಥಿ ಸಾವು

    ಕಾಂಗ್ರೆಸ್​ ವಿರುದ್ಧ ಸಿಡಿದೆದ್ದ ಮುಖ್ಯಮಂತ್ರಿ ಚಂದ್ರು! ರಾಜೀನಾಮೆಗೆ ಕಾರಣ ಬಿಚ್ಚಿಡುತ್ತಲೇ ಪರ್ಯಾಯ ವ್ಯವಸ್ಥೆ ಬಗ್ಗೆ ಪ್ರಸ್ತಾಪ

    ಕೆ.ಎಲ್​. ರಾಹುಲ್​ ಒಳಉಡುಪು ಜಾಹೀರಾತು ನೋಡಿ ನಟಿ ಕಸ್ತೂರಿ ಮಾಡಿದ ಹಾಟ್​ ಕಾಮೆಂಟ್​ ವೈರಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts