More

    ಕಾಂಗ್ರೆಸ್​ ವಿರುದ್ಧ ಸಿಡಿದೆದ್ದ ಮುಖ್ಯಮಂತ್ರಿ ಚಂದ್ರು! ರಾಜೀನಾಮೆಗೆ ಕಾರಣ ಬಿಚ್ಚಿಡುತ್ತಲೇ ಪರ್ಯಾಯ ವ್ಯವಸ್ಥೆ ಬಗ್ಗೆ ಪ್ರಸ್ತಾಪ

    ಬೆಂಗಳೂರು: ಮೇ 29ರಂದು ಕಾಂಗ್ರೆಸ್​ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸ್ಯಾಂಡಲ್​ವುಡ್​ನ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಇದೀಗ ರಾಜ್ಯ ಕಾಂಗ್ರೆಸ್​ ನಾಯಕರ ವಿರುದ್ಧ ಸಿಡಿದೆದ್ದಿದ್ದಾರೆ.

    ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಹೈಕಮಾಂಡ್​ ಕೂಡ ಗಟ್ಟಿ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲ ಆಗಿದೆ ಅನ್ನಿಸುತ್ತೆ. ರಾಜ್ಯದಲ್ಲಿ ಪ್ರಮುಖರು-ತೀರ್ಮಾನ ತೆಗೆದುಕೊಳ್ಳುವ ಸ್ಥಾನದಲ್ಲಿರುವವರು ತಮಗೆ ಇಷ್ಟ ಬಂದಂತೆ ತೀರ್ಮಾನ ತೆಗೆದುಕೊಳ್ಳುವ ನಡೆ ಇಷ್ಟವಾಗಲಿಲ್ಲ. ಪಕ್ಷ ಅಂದ್ರೆ ಒಂದು ರೀತಿ-ನೀತಿ ಇರುತ್ತೆ. ಪಕ್ಷದ ಉದ್ದೇಶ ಏನು ಎಂಬುದನ್ನು ಮೊದಲು ಅರಿತು ಪಾಲಿಸಬೇಕು. ಜಾತಿ ಗುಂಪು, ರಾಜ್ಯ ನಾಯಕರಿಬ್ಬರಲ್ಲೂ ಹೊಂದಾಣಿಕೆ ಇಲ್ಲ. ನಾನು ಮುಖ್ಯಮಂತ್ರಿ ಆಗ್ಬೇಕಾ? ನೀನು ಮುಖ್ಯಮಂತ್ರಿ ಆಗ್ಬೇಕಾ ಅಂತ ಕಿತ್ತಾಟ ಇದೆ. 2 ಬಾರಿ ಎಂಎಲ್​ಸಿ ಸ್ಥಾನಕ್ಕೆ ನನ್ನ ಹೆಸರು ಅಪ್ರೂವಲ್​ ಆಗಿದ್ದರೂ ಅವಕಾಶ ಸಿಗಲಿಲ್ಲ. ಹಣ-ಜಾತಿಯೇ ಮುಖ್ಯ ಎಂಬಂತಾದರೆ ಹೇಗೆ ಇರೋದು ಎಂದು ಆಕ್ರೋಶ ಹೊರಹಾಕಿದರು. ನಾನು ಸುಮ್ಮನೆ ನೆಲ ಸಾರಿಸಲು ಪಕ್ಷದಲ್ಲಿ ಇರಬೇಕಾ? ಇವರಿಬ್ಬರ ಕಿತ್ತಾಟದಲ್ಲಿ ನಾವು ಚುನಾವಣೆಗೆ ಹೋಗಬೇಕು. ಇದೆಲ್ಲ ಎಲ್ಲಿಗೆ ಹೋಗಿ ನಿಲ್ಲುತ್ತೆ ಎಂದು ಪ್ರಶ್ನಿಸಿದರು.

    ಕಾಂಗ್ರೆಸ್​ ವಿರುದ್ಧ ಆಕ್ರೋಶ ಹೊರ ಹಾಕುತ್ತಲೇ ರಾಜ್ಯ ಸರ್ಕಾರದ ನಡೆಯನ್ನೂ ಮುಖ್ಯಮಂತ್ರಿ ಚಂದ್ರು ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದಲ್ಲೂ ಒಂದಿಲ್ಲೊಂದು ಕಾರಣಕ್ಕೆ ವಿವಾದ, ಹಗರಣ ಸದ್ದು ಮಾಡುತ್ತಲೇ ಇದೆ. ಮಂತ್ರಿಗಳಲ್ಲೇ ಹೊಂದಾಣಿಕೆ ಇಲ್ಲದಿರುವುದು, ಶೇ. 40 ಕಮಿಷನ್​, ವರ್ಗಾವಣೆ ದಂಧೆ, ಮುಖ್ಯಮಂತ್ರಿಗಳು ಸಜ್ಜನರಾದರೂ ಇದೆಲ್ಲವನ್ನೂ ನಿಭಾಯಿಸಿಕೊಳ್ಳಲು ಆಗದೆ ಇರುವುದು, ಆರ್​ಎಸ್​ಎಸ್​ನ ಒತ್ತಡ, ಜಾತಿ ಒತ್ತಡ, ಮುಖಂಡರ ಒತ್ತಡ, ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ಎಲ್ಲಿಗೆ ಬಂದು ನಿಂತಿದೆ? ಆ ಮಂತ್ರಿಗೂ ಬುದ್ಧಿ ಇಲ್ಲ… ಇದೆಲ್ಲವನ್ನೂ ವಿರೋಧಿಸಿ ಕಾಂಗ್ರೆಸ್​ ಪಕ್ಷದವರು ಹೋರಾಟ ರೂಪಿಸಬೇಕಿತ್ತು. ತಪ್ಪುಗಳನ್ನು ಸಮರ್ಥಿಸಿಕೊಂಡು ನಾನು ಭಾಷಣ ಮಾತಾಡಲು ಸಿದ್ಧವಿಲ್ಲ. ರಾಜಕೀಯದಲ್ಲಿ ನಾನೇನು ಸನ್ಯಾಸಿಯಲ್ಲ. ಮೂರು ಪಕ್ಷಗಳ ತಪ್ಪುಗಳನ್ನು ಎತ್ತಿಹಿಡಿಯುವ ಕೆಲಸ ಮಾಡುವೆ. ಈ ಮೂರಕ್ಕೂ ಪರ್ಯಾಯ ವ್ಯವಸ್ಥೆ ಬೇಕಿದೆ ಎಂದು ಜಾಗೃತಿ ಮೂಡಿಸುವೆ ಚಿಂತನೆ ನನ್ನದು. ಜಾತಿ-ಪಕ್ಷ ಮುಖ್ಯವಲ್ಲ, ಉತ್ತಮ ಅಭ್ಯರ್ಥಿ ನೋಡಿ ಮತ ಹಾಕಿ ಎಂದರು.

    ಮೇ 29ರಂದು ಕಾಂಗ್ರೆಸ್​ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಮುಖ್ಯಮಂತ್ರಿ ಚಂದ್ರು ರಾಜೀನಾಮೆ ನೀಡಿದ್ದರು. ‘ದೇಶದಲ್ಲೇ ಸುದೀರ್ಘ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ನಾನು ವ್ಯಾಪಕ ನೆಲೆಯಲ್ಲಿ ಜನಸೇವೆ ಮಾಡುವ ಆಶಯದಿಂದ ಸೇರ್ಪಡೆಗೊಂಡೆ. ಪಕ್ಷಕ್ಕೆ ಸೇರಿದಂದಿನಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ಇದೆ. ಸದ್ಯ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದು, ನನ್ನ ಮೇಲೆ ವಿಶ್ವಾಸವಿಟ್ಟು ಪಕ್ಷದ ಸಾಂಸ್ಕೃತಿಕ ಘಟಕದ ಅಧ್ಯಕ್ಷರನ್ನಾಗಿ ಪ್ರಕಟಿಸಿರುವ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಪ್ರಮೇಯವೇ ಉದ್ಭವಿಸುವುದಿಲ್ಲ’ ಎಂದು ಪತ್ರದಲ್ಲಿ ಬರೆದಿದ್ದರು.

    ಗಂಡನನ್ನು ಬಿಟ್ಟು ಬಾ… ಹಾಸನ ಯುವಕನ ಕಾಟಕ್ಕೆ ಶಿವಮೊಗ್ಗದ ವಿವಾಹಿತೆ ಕಂಗಾಲು!

    ಮನೆ ಮುಂದೆ ಕುಳಿತಿದ್ದ ಅಂಗವಿಕಲ ಯುವತಿ ಮೇಲೆ ಅತ್ಯಾಚಾರವೆಸಗಿ ವಿಕೃತಿ ಮೆರೆದ ಕಾಮುಕರು

    ತುಮಕೂರಲ್ಲಿ ಶಿಕ್ಷಣ ಸಚಿವ ನಾಗೇಶ್​ರ ಮನೆಗೆ ಬೆಂಕಿ ಹಚ್ಚಲು ಯತ್ನ: ತುರ್ತು ಸುದ್ದಿಗೋಷ್ಠಿ ನಡೆಸಿದ ಗೃಹಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts