ಬೆಂಗಳೂರು: ಪ್ರತಿನಿತ್ಯ ಕರೊನಾ ಕೇಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ಆಯಾ ಪ್ರಕರಣಗಳಲ್ಲಿ ಹಾಜರಾಗುವ ಅಥವಾ ಹಾಜರಾಗಬೇಕಾದ ಸಾಕ್ಷಿದಾರರ ಪರಿಸ್ಥಿತಿಯನ್ನು ಅವಲೋಕಿಸಿ ವಿಚಾರಣೆ ನಡೆಸಬೇಕೆ ಅಥವಾ ಮುಂದೂಡಬೇಕೆ ಎನ್ನುವ ಬಗ್ಗೆ ವಿಚಾರಣಾಧಿಕಾರಿಗಳು ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯಾದ್ಯಂತ ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದು, ಲೋಕಾಯುಕ್ತ ಸಂಸ್ಥೆಗೆ ವಿಚಾರಣೆಗಾಗಿ ಬರುವ ಆಪಾಧಿತ ಅಧಿಕಾರಿಗಳು, ಸಾಕ್ಷಿದಾರರು ಹಾಗೂ ದೂರುದಾರರ ಮೂಲಕ ಕೋವಿಡ್ ಹರಡುವ ಸಾಧ್ಯತೆಯಿರುತ್ತದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಪ್ರಕರಣಗಳಲ್ಲಿ ವಿಚಾರಣೆ ಮುಂದೂಡುವುದು ಸೂಕ್ತವೆಂದು ವಕೀಲರು ನೀಡಿದ ಮನವಿಯ ಆಧಾರದಲ್ಲಿ ವಿಚಾರಣಾಧಿಕಾರಿಗಳು ಈ ಬಗ್ಗೆ ಪರಿಗಣಿಸಬಹುದು ಎಂದು ಎಲ್ಲ ವಿಚಾರಣಾಧಿಕಾರಿಗಳಿಗೆ ತಿಳಿಸಲಾಗಿದೆ.
ಈ ಹಿನ್ನಲೆಯಲ್ಲಿ ಆಯಾ ಪ್ರಕರಣಗಳಲ್ಲಿ ಹಾಜರಾಗುವ ಅಥವಾ ಹಾಜರಾಗಬೇಕಾದ ಸಾಕ್ಷಿದಾರರ ಪರಿಸ್ಥಿತಿಯನ್ನು ಅವಲೋಕಿಸಿ ವಿಚಾರಣೆ ನಡೆಸಬೇಕೆ ಅಥವಾ ಮುಂದೂಡಬೇಕೆ ಎನ್ನುವ ಬಗ್ಗೆ ವಿಚಾರಣಾಧಿಕಾರಿಗಳು ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ. ಮುಂದಿನ ತಿಂಗಳಿನಿಂದ ಕೋವಿಡ್ ಪರಿಸ್ಥಿತಿಯನ್ನು ಕಾಲಕಾಲಕ್ಕೆ ಅವಲೋಕಿಸಿಕೊಂಡು ಯಥಾ ರೀತಿ ವಿಚಾರಣಾ ಕಾರ್ಯಗಳು ಮುಂದುವರೆಯಲಿವೆ ಎಂದು ಲೋಕಾಯುಕ್ತ ಸಂಸ್ಥೆ ತಿಳಿಸಿದೆ.
32 ಮಂದಿಗೆ ಕೋವಿಡ್:
ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ 466 ಅಧಿಕಾರಿಗಳು ಹಾಗೂ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಜ.18 ಮತ್ತು 19ರಂದು ಒಟ್ಟು 365 ಸಿಬ್ಬಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ಪೈಕಿ ಒಟ್ಟು 32 ನೌಕರರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕೋವಿಡ್ ಸೊಂಕಿಗೆ ಒಳಪಟ್ಟವರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.
ಪತ್ನಿಯನ್ನು ಕೊಂದು ಠಾಣೆಗೆ ತೆರಳಿದ ಪತಿ ಶರಣಾಗುವ ಮುನ್ನ ಪೊಲೀಸರ ಮುಂದೆ ಹೇಳಿದ್ದಿಷ್ಟು…
ಜಲ ವಿವಾದ.. ಸರ್ವಪಕ್ಷಗಳ ಸಭೆಗೆ ತೀರ್ಮಾನ: ಕೈ ಕಟ್ಟಿ ಹಾಕುವ ತಂತ್ರ ಹೆಣೆದ ಬೊಮ್ಮಾಯಿ; ಮಾಸಾಂತ್ಯಕ್ಕೆ ಮತ್ತೊಂದು ಸಭೆ