More

    ನಮ್ಮನ್ನು ಬದುಕಲು ಬಿಡಿ: ನೆಟ್ಟಿಗರ ಕಾಟ ಸಹಿಸದೇ ನಟಿ, ನಿರ್ಮಾಪಕಿ ಚಾರ್ಮಿ ಕೌರ್​ ತೆಗೆದುಕೊಂಡ ನಿರ್ಧಾರವಿದು…

    ಹೈದರಾಬಾದ್​: ವಿಜಯ್​ ದೇವರಕೊಂಡ ನಟನೆಯ ಪ್ಯಾನ್​ ಇಂಡಿಯಾ ಸಿನಿಮಾ “ಲೈಗರ್​” ಬಾಕ್ಸ್​ಆಫೀಸ್​ನಲ್ಲಿ ನೆಲಕಚ್ಚಿದ್ದು, ಈ ವರ್ಷದ ಅತ್ಯಂತ ಕಳಪೆ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ಈ ಸಿನಿಮಾವನ್ನು ಸ್ಟಾರ್​ ನಿರ್ದೇಶಕ ಪುರಿ ಜಗನ್ನಾಥ್​​ ನಿರ್ದೇಶಿಸಿದ್ದು, ವಿಜಯ್​ ಮತ್ತು ಅನನ್ಯಾ ಪಾಂಡೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಾರ್ಮಿ ಕೌರ್​, ಪುರಿ ಮತ್ತು ಕರಣ್​ ಜೋಹರ್​ ಈ ಸಿನಿಮಾವನ್ನು ಜೊತೆಯಾಗಿ ನಿರ್ಮಾಣ ಮಾಡಿದ್ದಾರೆ.

    ಸಿನಿಮಾ ಬಿಡುಗಡೆಗು ಮುನ್ನ ಚಿತ್ರತಂಡ ದೇಶಾದ್ಯಂತ ಭಾರಿ ದೊಡ್ಡದಾಗಿಯೇ ಪ್ರಚಾರ ಮಾಡಿತ್ತು. ಖಂಡಿತವಾಗಿ ಈ ಸಿನಿಮಾ ಬ್ಲಾಕ್​ಬಸ್ಟರ್​ ಆಗಲಿದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದರು. ಅದರಲ್ಲೂ ವಿಜಯ್​ ಒಂದು ಹೆಜ್ಜೆ ಮುಂದೆ ಹೋಗಿ, 200 ಕೋಟಿ ಗಳಿಕೆ ಮಾಡಿದ ಮೇಲೆ ನಾನು ಸಿನಿಮಾದ ಕಲೆಕ್ಷನ್​ ಲೆಕ್ಕ ಹಾಕುತ್ತೇನೆ ಎಂಬ ಅತಿಯಾದ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದರು. ಇದು ಚಿತ್ರದ ಮೇಲೆ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿತ್ತು.

    ಯಾವಾಗ ಸಿನಿಮಾ ಬಿಡುಗಡೆ ಆಯಿತೋ ಇಡೀ ಚಿತ್ರಣವೇ ಬದಲಾಗಿದೆ. ಸಿನಿಮಾ ನೋಡಿಕೊಂಡು ಆಚೆ ಬಂದವರು ಚಿತ್ರತಂಡವನ್ನು ಟೀಕಿಸುತ್ತಿದ್ದಾರೆ. ಸಿನಿಮಾ ಅಂದುಕೊಂಡಂತಹ ನಿರೀಕ್ಷಿತ ಮಟ್ಟವನ್ನು ತಲುಪಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಟಾರ್​ ನಿರ್ದೇಶಕ ಪುರಿ ಅವರ ಅತ್ಯಂತ ಕಳಪೆ ಕೆಲಸ ಇದು ಎಂದು ವೀಕ್ಷಕರು ಜರಿದಿದ್ದಾರೆ.

    ಸಿನಿಮಾ ನೋಡಿದ ನಂತರ ನೆಟ್ಟಿಗರು, ವಿಜಯ್​, ಕರಣ್​, ಪುರಿ ಮತ್ತು ಚಾರ್ಮಿಯನ್ನು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ. ಟ್ರೋಲಿಗರ ಕಾಟವನ್ನು ಸಹಿಸಲಾರದೇ ಚಾರ್ಮಿ ಕೌರ್​ ಸಾಮಾಜಿಕ ಜಾಲತಾಣದಲ್ಲಿಂದಲೇ ಎಸ್ಕೇಪ್​ ಆಗಿದ್ದಾರೆ.

    ಈ ಕುರಿತು ಟ್ವೀಟ್​ ಮಾಡಿರುವ ಚಾರ್ಮಿ, ಚಿಲ್​ ಗಯ್ಸ್​! ಇದೀಗ ನಾನು ಸಾಮಾಜಿಕ ಜಾಲತಾಣದಿಂದ ವಿರಾಮ ಪಡೆದುಕೊಳ್ಳುತ್ತಿದ್ದೇನೆ. ಪುರಿ ಅವರು ಇನ್ನು ದೊಡ್ಡದಾಗಿ ಮತ್ತು ಉತ್ತಮವಾಗಿ ಖಂಡಿತ ಪುಟಿದೇಳುತ್ತಾರೆ. ಅಲ್ಲಿಯವರೆಗೆ ಬದುಕಿ ಮತ್ತು ಬದುಕಲು ಬಿಡಿ ಎಂದು ಚಾರ್ಮಿ ಟ್ವೀಟ್​ ಮಾಡಿ, ಸಾಮಾಜಿಕ ಜಾಲತಾಣದಿಂದ ಇದೀಗ ವಿರಾಮವನ್ನು ತೆಗೆದುಕೊಂಡಿದ್ದಾರೆ.

    ಚಾರ್ಮಿ, ಪುರಿ ಮತ್ತು ವಿಜಯ್​ ಮತ್ತೊಂದು ಚಿತ್ರದಲ್ಲಿ ಜೊತೆಯಾಗುತ್ತಿದ್ದಾರೆ. ಆ ಚಿತ್ರದ ಹೆಸರು ಜನ ಗಣ ಮನ. ಈ ಚಿತ್ರದ ಮೂಲಕ ಮತ್ತೆ ಗೆಲವಿನ ಲಯಕ್ಕೆ ಮರಳುವ ಆಲೋಚನೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಲೈಗರ್​ ಎಫೆಕ್ಟ್​ನಿಂದ ಈ ಸಿನಿಮಾ ನಿಂತರೂ ಅಚ್ಚರಿಯಿಲ್ಲ ಎಂದು ಕೆಲವು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಮಳೆ ನೀರು ಸೋರದಂತೆ ತಗಡಿನ ಶೀಟ್ ಅಳವಡಿಸುವಾಗ ವಿದ್ಯುತ್​ ತಂತಿ ತಗುಲಿ ಸ್ಥಳದಲ್ಲೇ ಇಬ್ಬರ ಸಾವು

    ಶಾಲೆಯ ಟಾಯ್ಲೆಟ್​ನಲ್ಲಿ ಮಗುವಿಗೆ ಜನ್ಮ ನೀಡಿದ 11ನೇ ತರಗತಿ ವಿದ್ಯಾರ್ಥಿನಿ! SSLC ವಿದ್ಯಾರ್ಥಿ ವಿರುದ್ಧ ದೂರು ದಾಖಲು

    ಸ್ಕೂಟರ್​ ಬೀಳುವಾಗ ಸಹಾಯಕ್ಕೆಂದು ವಿದ್ಯುತ್​ ಕಂಬ ಹಿಡಿದ ಯುವತಿ ಸಾವು: ಬೆಸ್ಕಾಂ, ಬಿಬಿಎಂಪಿ ವಿರುದ್ಧ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts