More

    ತಿಂಗಳ ಬಳಿಕ ಪತ್ತೆಯಾದ ಕಿಮ್​ ಜಾಂಗ್​ ಉನ್​ಗೆ ಏನಾಗಿದೆ? ವೈರಲ್​ ಫೋಟೋ ಹಿಂದೆ ಬಿದ್ದ ಮಾಧ್ಯಮಗಳು!

    ಪ್ಯೊಂಗ್ಯಾಂಗ್: ತಿಂಗಳ ಕಾಲ ನಾಪತ್ತೆ ನಂತರ ಕಳೆದ ವಾರವಷ್ಟೇ ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್​ ಜಾಂಗ್​ ಉನ್ ಸಾರ್ವಜನಿಕರ ಎದುರು ಪ್ರತ್ಯಕ್ಷರಾಗಿದ್ದಾರೆ. ಇದರ ನಡುವೆ ಕಿಮ್​ಗೆ ಸಂಬಂಧಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ಆರೋಗ್ಯದ ಮೇಲೆ ಸಂದೇಹ ಹುಟ್ಟಿಸುವಂತಿದೆ.

    ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋದಲ್ಲಿ ಕಿಮ್​ ತುಂಬಾ ಬಡವಾಗಿದ್ದಾರೆ. ತುಂಬಾ ದಪ್ಪಗಿದ್ದ ಕಿಮ್​, ಸದ್ಯದ ಫೋಟೋದಲ್ಲಿ ತುಂಬಾ ತೆಳ್ಳಗೆ ಕಾಣುತ್ತಿದ್ದಾರೆ. ಇದೇ ಸಂಗತಿ ಕಿಮ್​ ಆರೋಗ್ಯ ಕುರಿತು ಊಹಾಪೋಹಾಗಳು ಹರಿದಾಡಲು ಕಾರಣವಾಗಿದೆ.

    ಕಿಮ್​ ಅವರ ತೂಕ ಇಳಿಕೆಯು ಅವರ ಹದಗೆಡುತ್ತಿರುವ ಆರೋಗ್ಯದ ಸೂಚನೆ ಇರಬಹುದೆಂಬ ಮಾತುಗಳು ಉತ್ತರ ಕೊರಿಯಾದ್ಯಂತ ಕೇಳಿಬರುತ್ತಿವೆ. ಕಿಮ್​ ಬಡಕಲಾಗಿರುವ ಫೋಟೋವನ್ನು ಕಳೆದ ವೀಕೆಂಡ್​ನಲ್ಲಿ ಕೆಸಿಎನ್​ಎ ಪ್ರಕಟಿಸಿದ್ದು, ಆಡಳಿತಾರೂಢ ಪಕ್ಷದ ಸಭೆಗೆ ಸಂಬಂಧಿಸಿದ ಫೋಟೋ ಇದಾಗಿದೆ. ಸುಮಾರು 1 ತಿಂಗಳ ಕಾಲ ಕಣ್ಮರೆಯಾಗಿದ್ದ ಕಿಮ್​ ಇದೀಗ ದೇಹದ ಬದಲಾವಣೆಯೊಂದಿಗೆ ಪ್ರತ್ಯಕ್ಷರಾಗಿದ್ದಾರೆ.

    ತಿಂಗಳ ಬಳಿಕ ಪತ್ತೆಯಾದ ಕಿಮ್​ ಜಾಂಗ್​ ಉನ್​ಗೆ ಏನಾಗಿದೆ? ವೈರಲ್​ ಫೋಟೋ ಹಿಂದೆ ಬಿದ್ದ ಮಾಧ್ಯಮಗಳು!

    ದಕ್ಷಿಣ ಕೊರಿಯಾ ರಾಜಧಾನಿ ಸಿಯೋಲ್​ ಮೂಲದ ಡೈಲಿ ಎನ್​ಕೆ ನ್ಯೂಸ್​, ಕಿಮ್​ ಅವರ ಇತ್ತೀಚಿನ ಫೋಟೋ ಕುರಿತು ಸಂಪೂರ್ಣ ವಿಶ್ಲೇಷಣೆ ಮಾಡಿದ್ದು, 2020ರ ನವೆಂಬರ್​-ಡಿಸೆಂಬರ್​ನಿಂದ 2021ರ ಏಪ್ರಿಲ್​-ಜೂನ್​ವರೆಗಿನ ಕಿಮ್​ ಚಿತ್ರಗಳನ್ನು ಪ್ರಸ್ತುತ ಚಿತ್ರದೊಂದಿಗೆ ಹೋಲಿಕೆ ಮಾಡಲಾಗಿದೆ.

    ಕಿಮ್ ಅವರ ಚಿತ್ರವೊಂದರಲ್ಲಿ ಐಡಬ್ಲ್ಯೂಸಿ ಶಾಫ್ಹೌಸೆನ್ ಪೋರ್ಟೊಫಿನೊ ಗಡಿಯಾರವನ್ನು ಧರಿಸಿರುವುದು ಕಂಡುಬಂದಿದೆ. ವೆಬ್‌ಸೈಟ್ ಪ್ರಕಾರ 37 ವರ್ಷದ ಕಿಮ್​, ತನ್ನ ನೆಚ್ಚಿನ ಕೈಗಡಿಯಾರದ ಮೇಲಿನ ಪಟ್ಟಿಯನ್ನು ಬಿಗಿಗೊಳಿಸಿದ್ದಾನೆ ಎಂದು ಹೇಳಿದೆ. ವಾಚ್​ನ ಬೆಲೆ 12,000 ಡಾಲರ್​ ಮೌಲ್ಯ ಎಂದು ವರದಿಯಾಗಿದೆ.

    ನವೆಂಬರ್ 2020 ಮತ್ತು ಈ ವರ್ಷದ ಮಾರ್ಚ್‌ನಲ್ಲಿ ತೆಗೆದ ಒಂದೇ ರೀತಿಯ ಚಿತ್ರಗಳನ್ನು ಹೋಲಿಕೆ ಮಾಡಿ ನೋಡಿದಾಗ ಕಿಮ್​ ಅವರ ಎಡ ಮಣಿಕಟ್ಟು ಗಣನೀಯವಾಗಿ ತೆಳುವಾಗಿದೆ ಎಂದು ಫೋಟೋಗಳು ಸೂಚಿಸುತ್ತಿವೆ. ಆದಾಗ್ಯೂ, ಉತ್ತರ ಕೊರಿಯಾದ ನಾಯಕನ ಆರೋಗ್ಯದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿರುವುದು ಇದೇ ಮೊದಲೇನಲ್ಲ.

    ಕಳೆದ ವರ್ಷ, ಕಿಮ್ ಜೊಂಗ್ ಉನ್ 20 ದಿನಗಳ ಕಾಲ ಬೆಳಕಿನಿಂದ ಹೊರಗುಳಿದಿದ್ದರು. ಈ ಸಮಯದಲ್ಲಿ ಅವರು ತಮ್ಮ ದಿವಂಗತ ಅಜ್ಜ ಮತ್ತು ರಾಜ್ಯ ಸಂಸ್ಥಾಪಕ ಕಿಮ್ ಇಲ್ ಸುಂಗ್ ಅವರ ಜನ್ಮದಿನಾಚರಣೆಯನ್ನು ತಪ್ಪಿಸಿಕೊಂಡರು. ಕಿಮ್ ಅವರ ಕುಟುಂಬಕ್ಕೆ ಹೃದಯ ಸಂಬಂಧಿ ಕಾಯಿಲೆಗಳ ಇತಿಹಾಸವಿದೆ ಎಂದು ತಜ್ಞರು ಮೊದಲೇ ನಿರ್ಣಯಿಸಿದ್ದಾರೆ. (ಏಜೆನ್ಸೀಸ್​)

    ಹಾಡುಹಗಲೇ ಬ್ಯಾಂಕ್ ದರೋಡೆ : 1.19 ಕೋಟಿ ರೂ. ಹಣ ಲೂಟಿ

    5 ರೂಪಾಯಿ ನೋಟು ವಿನಿಮಯ ಮಾಡಿ 30 ಸಾವಿರ ರೂ. ಸಂಪಾದಿಸಿ! ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ

    ಶಿಕ್ಷಕನೊಂದಿಗೆ ಲವ್​ನಲ್ಲಿ ಬಿದ್ದ ಯುವತಿ; ಮೃತಪಟ್ಟಿದ್ದ ಹೆಂಡತಿಯ ಇನ್​ಸ್ಟಾಗ್ರಾಂನಿಂದ ಸಿಗ್ತು ಲವ್​ ಸ್ಟೋರಿಗೆ ಟ್ವಿಸ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts