More

    ಕೋಯಿಕ್ಕೋಡ್ ಏರ್​ಪೋರ್ಟ್​ ದುರಂತ: ಎಎಐಬಿ ವರದಿಯಲ್ಲಿ ಬಯಲಾಯ್ತು ವಿಮಾನ ಪತನದ ಕಾರಣ!

    ಕೋಯಿಕ್ಕೋಡ್​: ಕಳೆದ ವರ್ಷದ ಆಗಸ್ಟ್​ ತಿಂಗಳಲ್ಲಿ ಕೋಯಿಕ್ಕೋಡ್​ ವಿಮಾನ ನಿಲ್ದಾಣದಲ್ಲಿ ನಡೆದಿದ್ದ ವಿಮಾನ ಪತನದಲ್ಲಿ 21 ಮಂದಿ ದಾರುಣವಾಗಿ ಮೃತಪಟ್ಟಿದ್ದರು. ಈ ಘಟನೆಯ ಕುರಿತು ಇದೀಗ ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ತನಿಖಾ ವರದಿಯನ್ನು ಬಿಡುಗಡೆ ಮಾಡಿದ್ದು, ಪೈಲಟ್​ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿದ್ದು, ಈ ವ್ಯವಸ್ಥಿತ ದೋಷವನ್ನು ತಳ್ಳಿಹಾಕಲಾಗುವುದಿಲ್ಲ ಎಂದಿದೆ.

    ಘಟನೆ ಹಿನ್ನೆಲೆ ಏನು?
    2020 ಆಗಸ್ಟ್​ 7ರಂದು ಸಂಜೆ 7.40ರ ಸುಮಾರಿಗೆ ದುಬೈನಿಂದ ಬಂದ ಏರ್​ಇಂಡಿಯಾ ಎಕ್ಸ್​ಪ್ರೆಸ್ ಬೋಯಿಂಗ್ 737 ವಿಮಾನ ಭಾರಿ ಮಳೆಯಿಂದಾಗಿ ರನ್​ವೇನಲ್ಲಿ ಜಾರಿ ಸುಮಾರು 35 ಅಡಿ ಆಳದ ತಗ್ಗಿಗೆ ಬಿದ್ದಿತ್ತು. ಬಿದ್ದ ರಭಸಕ್ಕೆ ವಿಮಾನ ಎರಡು ಭಾಗವಾಗಿತ್ತು. ಘಟನೆ ನಡೆದ ಗೇಟ್ ನಂಬರ್ 8ರಲ್ಲಿ ಇದ್ದ ಅಸಿಸ್ಟಂಟ್ ಸಬ್ ಇನ್​ಸ್ಪೆಕ್ಟರ್ ಅಜಿತ್ ಸಿಂಗ್ ತಕ್ಷಣ ವಾಕಿಟಾಕಿ ಮೂಲಕ ಸಿಐಎಸ್​ಎಫ್ ಕಂಟ್ರೋಲ್ ರೂಮ್​ಗೆ ಮಾಹಿತಿ ನೀಡಿದರು. 7.41ಕ್ಕೆ ಸಿಐಎಸ್​ಎಫ್ ಕಂಟ್ರೋಲ್ ರೂಮ್ಂದ ಏರ್ ಟ್ರಾಫಿಕ್ ಕಂಟ್ರೋಲ್ ಮತ್ತು ಸಿಐಎಸ್​ಎಫ್​ನ ಕ್ವಿಕ್ ರೆಸ್ಪಾನ್ಸ್ ಟೀಮ್​ಗೆ ಮಾಹಿತಿ ರವಾನೆಯಾಯಿತು. 7.42ಕ್ಕೆ ವಿಮಾನ ನಿಲ್ದಾಣದ ಅಗ್ನಿ ಶಾಮಕ ದಳಕ್ಕೆ ಹಾಗೂ ವೈದ್ಯಕೀಯ ತಂಡಕ್ಕೆ ಮಾಹಿತಿ ನೀಡಲಾಯಿತು. ತಕ್ಷಣ ಸ್ಥಳಕ್ಕೆ ದೌಡಾಯಿಸಿ ವಿಮಾನ ನಿಲ್ದಾಣದ ಎಲ್ಲ ರಕ್ಷಣಾ ಸಿಬ್ಬಂದಿ ಪ್ರಯಾಣಿಕರ ರಕ್ಷಣೆಗೆ ಮುಂದಾದರು. ಆದರೂ ದುರಂತದಲ್ಲಿ 21 ಮಂದಿ ಅಸುನೀಗಿದರು. ವಿಮಾನ ಕಾಂಪೌಂಡ್​ಗೆ ಗುದ್ದಿದ್ದರಿಂದ ಕಾಕ್​ಪಿಟ್ ಭಾಗ ನಜ್ಜುಗುಜ್ಜಾಗಿ ಇಬ್ಬರು ಪೈಲಟ್ ಅಲ್ಲೇ ಸಾವನ್ನಪ್ಪಿದ್ದರು. 35 ಅಡಿ ಕೆಳಕ್ಕೆ ಜಾರಿ ಬಿದ್ದಿದ್ದರಿಂದ ವಿಮಾನ ಎರಡು ಭಾಗವಾಗಿ ತುಂಡಾಗಿತ್ತು. ಮೊದಲ 7 ಸಾಲಿನಲ್ಲಿ ಕೂತಿದ್ದ ಪ್ರಯಾಣಿಕರು ಸಾವನ್ನಪ್ಪಿದ್ದರು.

    ವರದಿಯಲ್ಲೇನಿದೆ?
    257 ಪುಟಗಳ ವರದಿಯನ್ನು ಬಿಡುಗಡೆ ಮಾಡಿರುವ ಎಎಐಬಿ, ಪೈಲಟ್ ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನವನ್ನು ಅನುಸರಿಸದಿರುವುದು ದುರಂತಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ. ಎಸ್​ಒಪಿ ನಿಯಮಗಳನ್ನು ಪೈಲಟ್​ಗಳು ಗಾಳಿಗೆ ತೂರಿರುವುದು ಸ್ಪಷ್ಟವಾಗಿದೆ. ಅಸ್ಥಿರಗೊಳಿಸದ ವಿಧಾನವನ್ನು ಅನುಸರಿಸಿದ ಪೈಲಟ್ ಟಚ್‌ಡೌನ್ ವಲಯವನ್ನು ಮೀರಿ, ರನ್​ ವೇ ಕೆಳಗೆ ಅರ್ಧದಾರಿಯಲ್ಲೇ ವಿಮಾನವನ್ನು ಇಳಿಸಿದ್ದಾರೆ. ಪೈಲಟ್ ಮಾನಿಟರಿಂಗ್ ಕರೆ ಮಾಡಿದ ಹೊರತಾಗಿಯೂ, ಸುತ್ತಲೂ ಹೋಗಿ ಮತ್ತು ಪೈಲಟ್​ ಮಾನಿಟರಿಂಗ್​ ನಿಯಂತ್ರಣವನ್ನು ತೆಗೆದುಕೊಳ್ಳುವಲ್ಲಿ ವಿಫಲರಾದರು ಎಂದು ವರದಿ ಹೇಳಿದೆ.

    ಇದೊಂದು ವ್ಯವಸ್ಥಿತವಾದ ವೈಫಲ್ಯವಾಗಿದೆ. ಕಮಾಂಡ್​ ನೀಡುತ್ತಿದ್ದ ಪೈಲಟ್​ ಕ್ಯಾಪ್ಟನ್​ ಡಿ ವಿ ಸಥೆ ಅವರು ಲ್ಯಾಂಡಿಂಗ್​ ಅಂತರವನ್ನು ವಿವರಿಸುವುದಾಗಲಿ ಅಥವಾ ಚರ್ಚಿಸುವುದಾಗಲಿ ಮಾಡಲಿಲ್ಲ. ಎಸ್‌ಒಪಿ ನಿಯಮಗಳನ್ನು ಉಲ್ಲಂಘಿಸಿ ಲ್ಯಾಂಡಿಂಗ್​ ವೇಳೆ ಗಮನಿಸಬೇಕಾದ ಪ್ರಮುಖ ಅಂಶವನ್ನು ಪರಿಗಣಿಸದೆ ಲ್ಯಾಂಡಿಂಗ್ ಫ್ಲಾಪ್‌ಗಳು ಮತ್ತು ಸ್ವಯಂ-ಬ್ರೇಕ್ ಆಯ್ಕೆ ಮಾಡಿಕೊಂಡಿದ್ದಾರೆ. ರನ್​ವೇ 10ಕ್ಕೆ ಇಳಿಯುವ ಮುನ್ನ ಪಿಐಸಿ ಟೈಲ್‌ವಿಂಡ್‌ಗಳೊಂದಿಗೆ ಇಳಿಯಲು ಸಾಕಷ್ಟು ತಯಾರಿಯನ್ನು ಅವರು ಕೈಗೊಳ್ಳಲಿಲ್ಲ. ಖಚಿತವಾಗಿ ಮಾಡಬೇಕಾದ ಲ್ಯಾಂಡಿಂಗ್​ ಅಂತರದ ಲೆಕ್ಕಾಚಾರವನ್ನು ನಿರ್ಲಕ್ಷಿಸಿದ್ದಾರೆ. ಅಲ್ಲದೆ, ಪ್ರತಿಕೂಲಕರ ಹವಾಮಾನವೂ ಅಪಘಾತಕ್ಕೆ ಕಾರಣವಾಗಿದೆ. ಏಕೆಂದರೆ ಈ ಸಮಯದಲ್ಲಿ ಸೂಕ್ತ ಸಂಪರ್ಕವೂ ಸಾಧ್ಯವಾಗಲಿಲ್ಲ. ಆದರೂ, ಇಂತಹ ಸಂದರ್ಭದಲ್ಲಿ ಪರ್ಯಾಯ ವಾಯುನೆಲೆಯ ಕಡೆಗೆ ವಿಮಾನವನ್ನು ತಿರುಗಿಸುವ ಅವಕಾಶವಿತ್ತು ಎಂದು ವರಿಯಲ್ಲಿ ಉಲ್ಲೇಖವಾಗಿದೆ. (ಏಜೆನ್ಸೀಸ್​)

    ಕೋಯಿಕ್ಕೋಡ್​ ವಿಮಾನ ದುರಂತ ಬಳಿಕ ಮೊದಲ 15 ನಿಮಿಷ ನಡೆದಿದ್ದೇನು?

    ಇಷ್ಟೊಂದು ಮಿಸ್ಟೇಕ್​ ಮಾಡಿದ್ರಾ ನಟ ಸಾಯಿ ಧರಮ್​ ತೇಜ್? ತನಿಖೆಯಲ್ಲಿ ಬೈಕ್​ ಕುರಿತ ಸ್ಫೋಟಕ ಮಾಹಿತಿ ಬಯಲು! ​​

    ಅಮೆರಿಕ ಅವಳಿ ಗೋಪುರ ದಾಳಿಗೆ 20 ವರ್ಷ! ಯುಎಸ್​ ಟಾರ್ಗೆಟ್ ಮಾಡಿದ್ದೇಕೆ ಲಾಡೆನ್? ಹೇಗಿತ್ತು ದಾಳಿಯ ಪ್ಲಾನ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts