More

    ಕೋಯಿಕ್ಕೋಡ್​ ವಿಮಾನ ದುರಂತ ಬಳಿಕ ಮೊದಲ 15 ನಿಮಿಷ ನಡೆದಿದ್ದೇನು?

    ತಿರುವನಂತಪುರ: ಕೇರಳದ ಕೋಯಿಕ್ಕೋಡಿನ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ದುರಂತ ಬಳಿಕ ಮೊದಲ 15 ನಿಮಿಷಗಳಲ್ಲಿ ಏನೇನು ನಡೆಯಿತು ಎಂಬ ವಿವರ ಲಭ್ಯವಾಗಿದೆ. ಸಂಜೆ 7.40ರ ಸುಮಾರಿಗೆ ದುಬೈನಿಂದ ಬಂದ ಏರ್​ಇಂಡಿಯಾ ಎಕ್ಸ್​ಪ್ರೆಸ್ ಬೋಯಿಂಗ್ 737 ವಿಮಾನ ಭಾರಿ ಮಳೆಯಿಂದಾಗಿ ರನ್​ವೇನಲ್ಲಿ ಜಾರಿ ಸುಮಾರು 35 ಅಡಿ ಆಳದ ತಗ್ಗಿಗೆ ಬಿದ್ದಿತ್ತು.

    ಘಟನೆ ನಡೆದ ಗೇಟ್ ನಂಬರ್ 8ರಲ್ಲಿ ಇದ್ದ ಅಸಿಸ್ಟಂಟ್ ಸಬ್ ಇನ್​ಸ್ಪೆಕ್ಟರ್ ಅಜಿತ್ ಸಿಂಗ್ ತಕ್ಷಣ ವಾಕಿಟಾಕಿ ಮೂಲಕ ಸಿಐಎಸ್​ಎಫ್ ಕಂಟ್ರೋಲ್ ರೂಮ್ೆ ಮಾಹಿತಿ ನೀಡಿದರು. 7.41ಕ್ಕೆ ಸಿಐಎಸ್​ಎಫ್ ಕಂಟ್ರೋಲ್ ರೂಮ್ಂದ ಏರ್ ಟ್ರಾಫಿಕ್ ಕಂಟ್ರೋಲ್ ಮತ್ತು ಸಿಐಎಸ್​ಎಫ್​ನ ಕ್ವಿಕ್ ರೆಸ್ಪಾನ್ಸ್ ಟೀಮ್ೆ ಮಾಹಿತಿ ರವಾನೆಯಾಯಿತು. 7.42ಕ್ಕೆ ವಿಮಾನ ನಿಲ್ದಾಣದ ಅಗ್ನಿ ಶಾಮಕ ದಳಕ್ಕೆ ಹಾಗೂ ವೈದ್ಯಕೀಯ ತಂಡಕ್ಕೆ ಮಾಹಿತಿ ನೀಡಲಾಯಿತು. ತಕ್ಷಣ ಸ್ಥಳಕ್ಕೆ ದೌಡಾಯಿಸಿ ವಿಮಾನ ನಿಲ್ದಾಣದ ಎಲ್ಲ ರಕ್ಷಣಾ ಸಿಬ್ಬಂದಿ ಪ್ರಯಾಣಿಕರ ರಕ್ಷಣೆಗೆ ಮುಂದಾದರು.

    ವಿಮಾನ ಕಾಂಪೌಂಡ್​ಗೆ ಗುದ್ದಿದ್ದರಿಂದ ಕಾಕ್​ಪಿಟ್ ಭಾಗ ನಜ್ಜುಗುಜ್ಜಾಗಿ ಇಬ್ಬರು ಪೈಲಟ್ ಅಲ್ಲೇ ಸಾವನ್ನಪ್ಪಿದ್ದರು. 35 ಅಡಿ ಕೆಳಕ್ಕೆ ಜಾರಿ ಬಿದ್ದಿದ್ದರಿಂದ ವಿಮಾನ ಎರಡು ಭಾಗವಾಗಿ ತುಂಡಾಗಿತ್ತು. ಮೊದಲ 7 ಸಾಲಿನಲ್ಲಿ ಕೂತಿದ್ದ ಪ್ರಯಾಣಿಕರು ಸಾವನ್ನಪ್ಪಿದ್ದರು. ಘಟನೆ ನಡೆದ ತಕ್ಷಣ ಏರ್​ಪೋರ್ಟ್ ಸಮೀಪದ ಜನರೆಲ್ಲ ಗೇಟ್ ನಂಬರ್ 8ರ ಬಳಿ ಜಮಾಯಿಸಿದ್ದರು. ವಿಮಾನದಲ್ಲಿ ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದರಿಂದ ತುರ್ತು ರಕ್ಷಣೆಗಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ಸೀಮಿತ ಸಂಖ್ಯೆಯಲ್ಲಿ ಸ್ಥಳೀಯರನ್ನು ಗೇಟ್​ನ ಒಳಬಿಟ್ಟು ರಕ್ಷಣಾ ಕಾರ್ಯಾಚರಣೆ ನಡೆಸಿದರು. 2 ರಿಂದ 11 ವರ್ಷದೊಳಗಿನ ಒಟ್ಟು 6 ಮಕ್ಕಳನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ರವಾನಿಸುವಲ್ಲಿ ನೆರವಾದರು.

    ಕೋಳಿಕ್ಕೋಡ್​ ವಿಮಾನ ದುರಂತ; ಲ್ಯಾಂಡಿಂಗ್​ಗೆ ಎರಡು ಬಾರಿ ಯತ್ನಿಸಿದ್ದ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಪೈಲಟ್​…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts