More

    ಕೋಳಿಕ್ಕೋಡ್​ ವಿಮಾನ ದುರಂತ; ಲ್ಯಾಂಡಿಂಗ್​ಗೆ ಎರಡು ಬಾರಿ ಯತ್ನಿಸಿದ್ದ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಪೈಲಟ್​…!

    ನವದೆಹಲಿ: ಕೇರಳದ ಕೋಳಿಕ್ಕೋಡ್​ನಲ್ಲಿ ದುರಂತಕ್ಕೀಡಾದ ವಿಮಾನವನ್ನು ರನ್​ವೇಯಲ್ಲಿ ಇಳಿಸಲು ಎರಡು ಬಾರಿ ಪ್ರಯತ್ನಿಸಲಾಗಿತ್ತು…!
    ದುಬೈಯಿಂದ ಆಗಮಿಸಿದ್ದ ಏರ್​ ಇಂಡಿಯಾ ಏಕ್ಸ್​ಪ್ರೆಸ್​ ವಿಮಾನದಲ್ಲಿ ಒಟ್ಟು 174 ಪ್ರಯಾಣಿಕರು ಹಾಗೂ ಇಬ್ಬರು ಪೈಲಟ್​ಗಳು ಸೇರಿ 6 ಸಿಬ್ಬಂದಿ ಇದ್ದರು. ಸಂಜೆ 7.40 ಕ್ರ್ಯಾಷ್​ ಲ್ಯಾಂಡಿಂಗ್​ ಆದ ವಿಮಾನ ಕಮರಿಗೆ ಬಿದ್ದು ಎರಡು ತುಂಡಾಗಿದೆ.

    ಮಂಗಳೂರಿನಂತೆ ಟೇಬಲ್​ ಟಾಪ್​ ವಿಮಾನ ನಿಲ್ದಾಣವಾಗಿರುವ ಕೋಳಿಕ್ಕೋಡ್​ನ ನಿಲ್ದಾಣದ ರನ್​ವೇಯಲ್ಲಿ ವಿಮಾನವನ್ನು ಇಳಿಸಲು ಪೈಲಟ್​ ಎರಡು ಬಾರಿ ಪ್ರಯತ್ನಿಸಿದ್ದಾಗಿ ಗ್ಲೋಬಲ್​ ಫ್ಲೈಟ್​ ಟ್ರ್ಯಾಕರ್​ ವೆಬ್​ಸೈಟ್​ ವರದಿ ಮಾಡಿದೆ.

    ಇದನ್ನೂ ಓದಿ; ತಾಯ್ನೆಲ ಸ್ಪರ್ಶಿಸಲು ಹಾತೊರೆದವರಿಗೆ ಕಾಡಿತ್ತು ದುಃಸ್ವಪ್ನ; ‘ವಂದೇ ಭಾರತ’ ವಿಮಾನವದು; ಟೇಬಲ್​ ಟಾಪ್​ ನಿಲ್ದಾಣದಲ್ಲಿ ಮತ್ತೊಂದು ದುರಂತ

    ಫ್ಲೈಟ್​ ರಾಡಾರ್​ 24 ಎಂಬ ಸ್ವಿಡಿಷ್​ ಕಂಪನಿ ಈ ಮಾಹಿತಿ ನೀಡಿದೆ. ಇದು ವಾಣಿಜ್ಯ ವಿಮಾನಗಳ ರಿಯಲ್​ ಟೈಮ್​ ಮಾಹಿತಿಯನ್ನು ನೀಡುತ್ತದೆ.
    ವಿಮಾನ ಇಳಿಸುವ ಸಮಯದಲ್ಲಿ ಭಾರಿ ಮಳೆ ಸುರಿಯುತ್ತಿತ್ತು ಎನ್ನಲಾಗಿದೆ. ಅಲ್ಲದೇ, ವಿಸಿಬಿಲಿಟಿ ಕೂಡ ಕೂಡ ಕಡಿಮೆಯಿತ್ತು. ಈ ಎಲ್ಲ ಕಾರಣಗಳಿಂದಾಗಿ ಸೂಕ್ತವಾಗಿ ಲ್ಯಾಂಡಿಂಗ್​ ಮಾಡಲು ಸಾಧ್ಯವಾಗದೇ ದುರಂತ ಸಂಭವಿಸಿರಬಹುದು ಎಂದು ಹೇಳಲಾಗಿದೆ.

    ಪಾಕ್​ ವಿಮಾನದ ಕಥೆಯೂ ಇದೇ ಆಗಿತ್ತು; ಇಳಿಯುವ ಕೆಲ ಕ್ಷಣಗಳ ಮುನ್ನ ಸಂಭವಿಸಿದ್ದ ದುರಂತ; 98 ಮಂದಿ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts