ಹೈದರಾಬಾದ್: ಹಿರಿಯ ನಟ ಕೋಟಾ ಶ್ರೀನಿವಾಸ್ ರಾವ್ ಅವರು ತಪ್ಪು ಕಾರಣದಿಂದಾಗಿ ಸುದ್ದಿಯಾಗಿದೆ. ತೆಲುಗಿನ ಖ್ಯಾತ ಪತ್ರಕರ್ತನ ಜತೆ ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನದಲ್ಲಿ ಸಿನಿಮಾ ಮತ್ತು MAA ಚುನಾವಣೆ ಸೇರಿದಂತೆ ತಮ್ಮ ಜೀವನದ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಮಾ ಚುನಾವಣೆ ಸಂದರ್ಭದಲ್ಲಿ ಜಾತಿಯ ಬಗ್ಗೆ ಕಾಮೆಂಟ್ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಶ್ರೀನಿವಾಸ್ ರಾವ್, ಇದೀಗ ಟಾಲಿವುಡ್ ಖ್ಯಾತ ನಿರೂಪಕಿ ಹಾಗು ನಟಿ ಅನುಸೂಯ ಭಾರದ್ವಜ್ ಬಗ್ಗೆ ಮಾತನಾಡಿ ಹೆಂಗಸರ ಕೋಪಕ್ಕೆ ಗುರಿಯಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ಕಾಮಿಡಿ ಬಳಸುತ್ತಿರುವ ಬಗ್ಗೆ ಮಾತನಾಡಿದ ಶ್ರೀನಿವಾಸ್ ರಾಮ್, ಇಂದು ಮಾಡುತ್ತಿರುವುದು ಕಾಮಿಡಿಯಲ್ಲ, ಅದೊಂದು ಸರ್ಕಸ್ ಆಗಿದೆ. ಇದೇ ವೇಳೆ ಜಬರ್ದಸ್ತ್ನಂತಹ ಕಾಮಿಡಿ ಶೋಗಳ ಬಗ್ಗೆ ಮಾತನಾಡಿದ ಶ್ರೀನಿವಾಸ್ ರಾವ್ ಅಸಮಾಧಾನ ಹೊರಹಾಕಿದರು.
ಅದು ನಿಜವಾಗಿಯು ಕಾಮಿಡಿಯಲ್ಲ. ಬಹುಶಃ ಜನರು ವೀಕ್ಷಿಸುತ್ತಾರೆ. ಆದರೆ, ಹೆಚ್ಚು ಕಾಲ ಅವರ ಮನಸ್ಸಿನಲ್ಲಿ ಉಳಿಯುವುದಿಲ್ಲ. ಅನುಸೂಯ ಓರ್ವ ಪ್ರತಿಭಾವಂತ ನಟಿ. ನೋಡಲು ತುಂಬಾ ಸುಂದರವಾಗಿ ಕಾಣುತ್ತಾರೆ ಮತ್ತು ಅವರು ಅಭಿವ್ಯಕ್ತಿಶೀಲರು. ಅವರೊಬ್ಬ ಒಳ್ಳೆಯ ಕಲಾವಿದೆ. ಆದರೆ, ವೈಯಕ್ತಿಕವಾಗಿ ಅವರ ಬಟ್ಟೆ ಧರಿಸುವ ರೀತಿ ನನಗೆ ಇಷ್ಟವಾಗುವುದಿಲ್ಲ. ಇದನ್ನು ಹೊರತುಪಡಿಸಿದರೆ, ಓರ್ವ ನಟಿಯಾಗಿ ಆಕೆಯನ್ನು ಮೆಚ್ಚುತ್ತೇನೆ ಎಂದಿದ್ದಾರೆ.
ಅದೇ ಶೋನಲ್ಲಿ ಭಾಗವಹಿಸುವ ರೋಜಾ ಅವರು ತುಂಬಾ ಚೆನ್ನಾಗಿ ಧರಿಸುತ್ತಾರೆ. ಆದರೆ, ಅನುಸೂಯ ಧರಿಸುವ ರೀತಿ ನನಗೆ ಇಷ್ಟವಾಗುತ್ತಿಲ್ಲ. ಬಟ್ಟೆ ಧರಿಸುವುದು ಅವರ ವೈಯಕ್ತಿಕ ವಿಚಾರವಲ್ಲವೇ ಎಂಬ ಮಾತಿಗೆ ಕೋಟಾ ಅವರು ಒಪ್ಪಲಿಲ್ಲ.
ಶ್ರೀನಿವಾಸ್ ಅವರ ಹೇಳಿಕೆ ಅನುಸೂಯ ಅವರ ಗಮನಕ್ಕೆ ಬಂದಿದ್ದು, ಹೆಸರನ್ನು ಉಲ್ಲೇಖಿಸದೇ ಸಾಮಾಜಿಕ ಜಾಲತಾಣ ಮೂಲಕ ತಿರುಗೇಟು ನೀಡಿದ್ದಾರೆ. ಹಿರಿಯ ಕಲಾವಿದರೊಬ್ಬರ ಕೆಲವು ಕಾಮೆಂಟ್‌ಗಳನ್ನು ನಾನು ಗಮನಿಸಿದ್ದೇನೆ. ಈ ಮಟ್ಟಿಗೆ ನನ್ನ ಡ್ರೆಸ್ಸಿಂಗ್ ಆಯ್ಕೆಯು ಹೇಗೆ ಕಾಳಜಿಯ ವಿಷಯವಾಗಿದೆ ಎಂದು ನನಗೆ ಆಶ್ಚರ್ಯವಾಗುತ್ತದೆ. ಒಬ್ಬರು ಧರಿಸುವುದನ್ನು ಸಂಪೂರ್ಣವಾಗಿ ವೈಯಕ್ತಿಕ ಎಂದು ತಿಳಿಯಬೇಕು. ಇಂದಿನ ಸಾಮಾಜಿಕ ಮಾಧ್ಯಮವು ಇಂತಹ ವಿಷಯವನ್ನು ಹೇಗೆ ಎತ್ತಿ ತೋರಿಸುತ್ತದೆ ಎಂಬುದು ವಿಪರ್ಯಾಸವಾಗಿದೆ. ಹಿರಿಯ ನಟರು ಮದುವೆ ಆಗಿ ಮಕ್ಕಳಾಗಿದ್ದರು ತೆರೆಯ ಮೇಲೆ ನಾಯಕಿಯರ ಜತೆ ಏಕೆ ರೊಮ್ಯಾನ್ಸ್ ಮಾಡಬೇಕು ಮತ್ತು ತಮ್ಮೆ ಬಟ್ಟೆಯನ್ನು ಕಳಚಿ ಸಿಕ್ಸ್ಪ್ಯಾಕ್ ಏಕೆ ಪ್ರದರ್ಶಿಸಬೇಕು. ಮದುವೆ ಆಗಿ ಮಕ್ಕಳಾದ ನಾಯಕಿಯರು ಇದೇ ರೀತಿ ಮಾಡುತ್ತಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್)
ಆತ ಸಲಿಂಗಕಾಮಿ, ಅವನ ಜತೆ ಸಮಂತಾ ಸಂಬಂಧ ಬೆಳೆಸಲು ಸಾಧ್ಯವಿಲ್ಲ: ನಟಿ ಶ್ರೀರೆಡ್ಡಿ ಸ್ಫೋಟಕ ಹೇಳಿಕೆ
ಮೊದಲ ದಿನವೇ 12.5 ಕೋಟಿ ರೂ.! ಬಾಕ್ಸ್ ಆಫೀಸ್ನಲ್ಲಿ ಕೋಟಿಗೊಬ್ಬನ ಹವಾ