More

    ಪ್ರಶ್ನೆ ಪತ್ರಿಕೆ ಬದಲು ವಿದ್ಯಾರ್ಥಿಗೆ ಕೀ ಉತ್ತರವನ್ನೇ ಕೊಟ್ಟ ಕೇರಳ ವಿಶ್ವವಿದ್ಯಾಲಯ: ಮುಂದೇನಾಯ್ತು?

    ತಿರುವನಂತಪುರ: ಕೇರಳ ವಿಶ್ವವಿದ್ಯಾಲಯ ಮತ್ತೊಮ್ಮೆ ಭಾರೀ ಎಡವಟ್ಟು ಮಾಡಿಕೊಂಡಿದೆ. ಮರುಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಯೋರ್ವನಿಗೆ ಪ್ರಶ್ನೆ ಪತ್ರಿಕೆಯ ಬದಲಾಗಿ ಕೀ ಉತ್ತರ ಪತ್ರಿಕೆಯನ್ನೇ ನೀಡಿದ್ದು, ಇದೀಗ ಪರೀಕ್ಷೆ ರದ್ದಾಗಿದೆ.

    ಅಧಿಕಾರಿಗಳೊಂದಿಗೆ ಸಮಸ್ಯೆಯನ್ನು ಸರಿಪಡಿಸುವ ಬದಲು ವಿದ್ಯಾರ್ಥಿಯು ಉತ್ತರ ಪುಸ್ತಕವನ್ನು ಭರ್ತಿ ಮಾಡಿ ಸಲ್ಲಿಸಿದ್ದಾನೆ. ಆದರೆ, ಮೌಲ್ಯಮಾಪಕರು ವಿಶ್ವವಿದ್ಯಾಲಯದ ಎಡವಟ್ಟನ್ನು ಗುರುತಿಸಿದ ನಂತರವೇ ಈ ದೊಡ್ಡ ಲೋಪ ಬೆಳಕಿಗೆ ಬಂದಿದೆ. ಸದ್ಯ ಮರುಪರೀಕ್ಷೆ ರದ್ದಾಗಿದ್ದು, ಮೇ 3ರಂದು ಮತ್ತೆ ಮರುಪರೀಕ್ಷೆಯನ್ನು ನಿಗದಿ ಮಾಡಲಾಗಿದೆ.

    ಕೋವಿಡ್ -19 ಸೋಂಕಿನಿಂದಾಗಿ ನಾಲ್ಕನೇ ಸೆಮಿಸ್ಟರ್ ಬಿಎಸ್ಸಿ ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಯು ನಿಗದಿತ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದಾಗ, ಫೆಬ್ರವರಿಯಲ್ಲಿ ಮರುಪರೀಕ್ಷೆಯನ್ನು ನಡೆಸಲಾಯಿತು. ಆದರೆ, ಪರೀಕ್ಷಾ ನಿಯಂತ್ರಕರ ಕಚೇರಿಯು ಪರೀಕ್ಷೆಯ ಕೀ ಉತ್ತರಗಳನ್ನು ಪ್ರಶ್ನೆ ಪತ್ರಿಕೆ ಮೇಲೆಯೇ ಮುದ್ರಿಸಿತ್ತು. ಅದನ್ನು ಪರೀಕ್ಷಾ ಮೇಲ್ವಿಚಾರಕರು ವಿದ್ಯಾರ್ಥಿಗೆ ನೀಡಿದ್ದರು. ಮೊದಲೇ ಕೀ ಉತ್ತರ ಇದ್ದ ಪ್ರಶ್ನೆ ಪತ್ರಿಕೆಯನ್ನು ನೋಡಿಕೊಂಡು ವಿದ್ಯಾರ್ಥಿ ಪರೀಕ್ಷೆ ಬರೆದಿದ್ದ. ಯಾವಾಗ ಮೌಲ್ಯಮಾಪಕರು ವಿದ್ಯಾರ್ಥಿಯ ಉತ್ತರ ಪುಸ್ತಕ ಮತ್ತು ಅವರು ಪಡೆದ ಕೀ ಉತ್ತರದ ಜತೆಗೆ ಪ್ರಶ್ನೆ ಪತ್ರಿಕೆಯನ್ನು ಕೇಳಿದಾಗ ಈ ಸಂಗತಿ ವಿಶ್ವವಿದ್ಯಾಲಯದ ಗಮನಕ್ಕೆ ಬಂದಿದೆ.

    ಈ ಎಡವಟ್ಟಿನ ಬಗ್ಗೆ ಪರೀಕ್ಷಾ ಮೇಲ್ವಿಚಾರಕರಾಗಲಿ ಅಥವಾ ವಿದ್ಯಾರ್ಥಿಯಾಗಲಿ ಗಮನಕ್ಕೆ ತಂದಿಲ್ಲ. ಈ ಎಡವಟ್ಟಿನ ಬಗ್ಗೆ ಮೇಲ್ವಿಚಾರಕರಿಗೆ ತಿಳಿದಿತ್ತಾ ಎಂಬುದು ಸ್ಪಷ್ಟವಾಗಿಲ್ಲ. ಇದೀಗ ಪರೀಕ್ಷೆಯನ್ನು ರದ್ದುಗೊಳಿಸಿರವ ವಿಶ್ವವಿದ್ಯಾಲಯದ ಕುಲಪತಿ ತನಿಖೆಗೆ ಆದೇಶಿಸಿದ್ದಾರೆ. (ಏಜೆನ್ಸೀಸ್​)

    ಹೆಣ್ಣು ಮಗು ಹುಟ್ಟಿದ ಖುಷಿ… ಹೆಲಿಕಾಪ್ಟರ್​ ಮೂಲಕ ಮೊಮ್ಮಗಳಿಗೆ ಅದ್ಧೂರಿ ಸ್ವಾಗತ ಕೋರಿದ ರೈತ!

    ಕರಾಚಿಯಲ್ಲಿ ಸೂಸೈಡ್​ ಬಾಂಬ್​ ದಾಳಿ ನಡೆಸಿದ ಮಹಿಳೆ ಎಂಎಸ್ಸಿ ಪದವೀಧರೆ, ಗಂಡ ಡಾಕ್ಟರ್​

    ಸ್ಯಾಂಡಲ್​ವುಡ್​ಗೆ ದೊಡ್ಮನೆಯ ಮತ್ತೊಂದು ಕುಡಿ ಎಂಟ್ರಿ: ಹೊಂಬಾಳೆ ಸಂಸ್ಥೆಯಿಂದಲೇ ಯುವರಾಜ್​ ಪದಾರ್ಪಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts