More

    ಇದು ಅದೃಷ್ಟ ಅಂದ್ರೆ! ಕಸದ ಬುಟ್ಟಿಗೆ ಎಸೆದಿದ್ದ ವಸ್ತುವಿನಿಂದಲೇ ಪಾನ್​ ಶಾಪ್​ ಓನರ್​ಗೆ 75 ಲಕ್ಷ ರೂ. ಜಾಕ್​ಪಾಟ್​

    ಕೊಟ್ಟಾಯಂ​: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಲಕ್ಷಾಧಿಪತಿ ಅಥವಾ ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಕೇರಳದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.

    ಸಾಮನ್ಯಾವಾಗಿ ಭರವಸೆ ಇಟ್ಟುಕೊಂಡೆ ಪ್ರತಿಯೊಬ್ಬರು ಲಾಟರಿಯನ್ನು ಖರೀದಿಸುತ್ತಾರೆ. ಕೆಲವರಿಗೆ ಅದೃಷ್ಟ ಲಕ್ಷ್ಮೀ ಕೈಕೊಟ್ಟರೆ, ಇನ್ನು ಕೆಲವರಿಗೆ ಒಂದೇ ದಿನದಲ್ಲಿ ಭಾಗ್ಯದ ಲಕ್ಷ್ಮೀ ಮನೆಯನ್ನು ಪ್ರವೇಶಿಸುತ್ತಾಳೆ. ಅನೇಕರು ಬೇಸರದಿಂದ ಲಾಟರಿ ಟಿಕೆಟ್​ ಅನ್ನು ಬೀಸಾಡುತ್ತಾರೆ.

    ಕೇರಳದಲ್ಲಿ ಇತ್ತೀಚೆಗೆ ಅಪರೂಪದ ಘಟನೆ ನಡೆದಿದೆ. ಚಂದ್ರಬಾಬು ಎಂಬುವರು ಕೊಟ್ಟಾಯಂ ಮೆಡಿಕಲ್​ ಕಾಲೇಜಿನ ಸಮೀಪದಲ್ಲಿ ಪಾನ್​ ಶಾಪ್​ ಒಂದನ್ನು ಇಟ್ಟುಕೊಂಡಿದ್ದಾರೆ. ಇದೀಗ ಅವರ ಬಾಳಿಗೆ ಅದೃಷ್ಟದ ಲಕ್ಷ್ಮೀ ಆಗಮಿಸಿದ್ದಾಳೆ. ಸೋಮವಾರ ಘೋಷಣೆಯಾದ ಲಾಟರಿ ಫಲಿತಾಂಶದಲ್ಲಿ ಮೊದಲ ಬಹುಮಾನ ಗೆದ್ದಿರುವ ಚಂದ್ರಬಾಬು ಬರೋಬ್ಬರಿ 75 ಲಕ್ಷ ರೂಪಾಯಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಚಂದ್ರಬಾಬು ಮಂಗಳವಾರ ಫಲಿತಾಂಶ ಪರಿಶೀಲಿಸಿದ್ದರು. ಸಣ್ಣ ಮೊತ್ತದ ಬಹುಮಾನವನ್ನು ನೋಡಿ ಬೇಸರಗೊಂಡು ಕಸದ ಬುಟ್ಟಿಗೆ ಲಾಟರಿ ಟಿಕೆಟ್​ ಅನ್ನು ಎಸೆದಿದ್ದರು. ಆದರೆ, ಅವರ ಟಿಕೆಟ್‌ನ ಸಂಖ್ಯೆಯು ಮೊದಲ ಬಹುಮಾನಕ್ಕೆ ಸ್ವಲ್ಪ ಹತ್ತಿರದಲ್ಲಿದೆ ಎಂದು ಅವರ ಸ್ನೇಹಿತ ತಂಕಚನ್ ಹೇಳಿದಾಗ, ಅನುಮಾನಗೊಂಡ ಚಂದ್ರಬಾಬು ಕಸದ ಬುಟ್ಟಿಯಲ್ಲಿದ್ದ ಲಾಟರಿ ಟಿಕೆಟ್​ ಅನ್ನು ತೆಗೆದುಕೊಂಡು ಮತ್ತೆ ಫಲಿತಾಂಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ತನಗೆ ಮೊದಲ ಬಹುಮಾನವಾಗಿ 75 ಲಕ್ಷ ರೂಪಾಯಿ ಬಂದಿರುವುದನ್ನು ನೋಡಿ ಚಂದ್ರ ಬಾಬು ಖುಷಿಗೆ ಪಾರವೇ ಇಲ್ಲದಂತಾಗಿದೆ.

    ಪಾನ್​ ಶಾಪ್​ನಿಂದ ಜೀವನ ಸಾಗಿಸುತ್ತಿದ್ದ ಚಂದ್ರಬಾಬುವಿಗೆ ಇದೀಗ ಅದೃಷ್ಟ ಲಕ್ಷ್ಮೀ ಬಾಗಿಲು ತೆರೆದಿದ್ದು, ಇಡೀ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅಂದಹಾಗೆ ಚಂದ್ರಬಾಬು ಕಳೆದ 40 ವರ್ಷದಿಂದ ಮೆಡಿಕಲ್​ ಕಾಲೇಜು ಬಳಿ ಪಾನ್​ ಶಾಪ್​ ತೆರೆದಿದ್ದಾರೆ. ಸ್ವಂತ ಮನೆ ಹಾಗೂ ಜಮೀನು ಹೊಂದಬೇಕೆಂಬುದು ಚಂದ್ರಬಾಬು ಅವರ ಕನಸಾಗಿದೆ. (ಏಜೆನ್ಸೀಸ್​)

    ಬಾಹ್ಯಾಕಾಶಕ್ಕೆ ಮಾನವನ ಬೆತ್ತಲೆ ಚಿತ್ರ ಕಳುಹಿಸಲಿದೆ NASA: ಕಾರಣ ಕೇಳಿದ್ರೆ ನಿಮ್ಮ ಹುಬ್ಬೇರುವುದು ಖಂಡಿತ!

    ಪ್ರಸಿದ್ಧ GIFನ ನಗುವ ಹುಡುಗಿ, ಖ್ಯಾತ ರಿಯಾಲಿಟಿ ಸ್ಟಾರ್ ಕೈಲಿಯಾ ಪೋಸಿ 16ನೇ ವಯಸ್ಸಿಗೆ ಆತ್ಮಹತ್ಯೆ​

    ಜೈಭೀಮ್​ ಸಿನಿಮಾ ವಿವಾದ: ನಟ ಸೂರ್ಯ, ಜ್ಯೋತಿಕಾ, ನಿರ್ದೇಶಕ ಜ್ಞಾನವೇಲುಗೆ ಶಾಕ್​ ಕೊಟ್ಟ ಚೆನ್ನೈ ಕೋರ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts