More

    ಕರೊನಾ ನೆಗಿಟಿವ್​ ಬಂದ್ರೂ ಯುವ ವೈದ್ಯೆ ಮಂಗಳೂರು ಆಸ್ಪತ್ರೆಯಲ್ಲಿ ಸಾವು: ಮದ್ವೆಯಾದ 8 ತಿಂಗಳಲ್ಲೇ ದುರಂತ ಅಂತ್ಯ!

    ಕೋಯಿಕ್ಕೋಡ್​: ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೇರಳ ಮೂಲದ 25 ವರ್ಷದ ಯುವ ವೈದ್ಯೆ ಮಹಾಮಾರಿ ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ.

    ಮೃತಳನ್ನು ಡಾ. ಸಿಸಿ ಮಹಾ ಬಶೀರ್​ ಎಂದು ಗುರುತಿಸಲಾಗಿದೆ. ಈಕೆ ಕೇರಳದ ಥಲಸ್ಸೆರಿ ಮೂಲದವಳು. ಮಂಗಳೂರು ನಗರದ ಪಂಪ್ ವೆಲ್ ಬಳಿಯಿರುವ ಇಂಡಿಯಾನ ಆಸ್ಪತ್ರೆ ಹಾಗೂ ದೇರಳಕಟ್ಟೆಯಲ್ಲಿರುವ ಕಣಚೂರು ಆಸ್ಪತ್ರೆಯಲ್ಲಿಯೂ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಗೆ ಇತ್ತೀಚೆಗಷ್ಟೇ ಕೊರೊನಾ ಸೋಂಕು ತಗುಲಿತ್ತು‌.

    ಸೋಂಕು ಹಿನ್ನೆಲೆಯಲ್ಲಿ ಇಂಡಿಯಾನಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಬೆಳಗ್ಗೆ (ಏಪ್ರಿಲ್​ 27) ಮೃತಪಟ್ಟಿದ್ದಾರೆ. ಅಲ್ಲದೆ, ಸಿಸಿ ಮಹಾ ಬಶೀರ್ ಅವರು 6 ತಿಂಗಳ ಗರ್ಭಿಣಿಯು ಆಗಿದ್ದರು. ಹೊರಗಿನ ಪ್ರಪಂಚಕ್ಕೆ ಬರುವ ಮುನ್ನವೇ ಕರೊನಾ ಅಟ್ಟಹಾಸಕ್ಕೆ ಮಗು ಸಹ ತಾಯಿಯೊಂದಿಗೆ ಮೃತಪಟ್ಟಿದೆ.

    ಇನ್ನು ಮಹಾ ಬಶೀರ್​ ಅವರಿಗೆ ಎರಡು ದಿನಗಳ ಹಿಂದೆ ಟೆಸ್ಟ್​ ಮಾಡಿದಾಗ ಕರೊನಾ ನೆಗಿಟಿವ್ ವರದಿ ಸಹ ಬಂದಿತ್ತು. ಆದರೆ, ಉಸಿರಾಟದ ತೊಂದರೆ ಮಾತ್ರ ಹಾಗೇ ಇತ್ತು. ಹೀಗಾಗಿ ನಿಧನರಾಗಿದ್ದಾರೆ. ವೈದ್ಯೆಗೆ ಕೇವಲ 8 ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಪತಿ-ಪತ್ನಿ ಇಬ್ಬರೂ ಇಂಡಿಯಾನ ಆಸ್ಪತ್ರೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು‌.

    ಮಹಾ ಬಶೀರ್​ ಮಂಗಳೂರಿನ ದೇರಳಕಟ್ಟೆಯಲ್ಲಿರುವ ಕಣಚೂರು ಮೆಡಿಕಲ್​ ಕಾಲೇಜಿನಲ್ಲಿ ಎಂಡಿ ಅಧ್ಯಯನ ನಡೆಸುತ್ತಿದ್ದರು. ಮಹಾ ಅವರು ಕಾಸರಗೂಡಿನ ಡಾ. ಸಾವಫಾರ್​ ಎಂಬುವರ ಪತ್ನಿ. ಇಂದು ಹುಟ್ಟುರಾದ ಥಲಸ್ಸೆರಿಯ ಜುಮಾ ಮಸೀದಿ ಸ್ಟೇಡಿಯಂನಲ್ಲಿ ಶವಸಸ್ಕಾರ ನೆರವೇರಿದೆ. (ಏಜೆನ್ಸೀಸ್​)

    18ರಿಂದ 45 ವರ್ಷದವರಿಗಿಲ್ಲ ಫ್ರೀ ಕರೊನಾ ಲಸಿಕೆ; ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯುವಂತೆ ಸೂಚಿಸಿದ ಸರ್ಕಾರ

    PHOTOS| ಜನತಾ ಕರ್ಫ್ಯೂ: ಇಡೀ ಬೆಂಗಳೂರು ಸ್ತಬ್ಧ, ಲಾಕ್​ ಆದರೂ ಗುಳೇ ತಪ್ಪಿಲ್ಲ

    ಇನ್ಮುಂದೆ ಇಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧ- ರಾಷ್ಟ್ರೀಯ ಭದ್ರತೆಗೆ ಮಾರಕ ಎಂದ ಸಚಿವ ಸಂಪುಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts