More

    ಮೂರು ಬಾರಿ PSI ಪರೀಕ್ಷೆ ಬರೆದು ಪಾಸ್​ ಆಗದೇ 4ನೇ ಬಾರಿ ಅಕ್ರಮ ದಾರಿ ಹಿಡಿದು ಸಿಕ್ಕಿಬಿದ್ದ ಕಾನ್ಸ್​ಟೇಬಲ್​ ಪುತ್ರ

    ಕಲಬುರಗಿ: ಪಿಎಸ್​ಐ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಎಫ್​ಐಆರ್​ ದಾಖಲಿಸಿ, ವಿರೇಶ್ ಎಂಬ ಅಭ್ಯರ್ಥಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

    ವಿರೇಶ್ ಬರೆದಿದ್ದ ಒಎಂಆರ್​ ಶೀಟ್​ನಿಂದಲೇ ಈ ಅಕ್ರಮ ಬಯಲಾಗಿದೆ. ವಿರೇಶ್ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ನಿವಾಸಿ. ವಿರೇಶ್ ತಂದೆ ಸೇಡಂ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂರು ಬಾರಿ ಪಿಎಸ್ಐ ಪರೀಕ್ಷೆ ಬರೆದಿದ್ದ ವಿರೇಶ್, ಮೂರರಲ್ಲಿಯೂ ಫೇಲ್​ ಪಾಸ್​ ಆಗಿರಲಿಲ್ಲ. ಹೀಗಾಗಿ ವಯಸ್ಸು ಮೀರಿ ಹೋಗುತ್ತೆ ಅಂತಾ ಅಕ್ರಮವಾಗಿ ನೇಮಕಾತಿ ಪಡೆಯಲು ಮುಂದಾಗಿದ್ದ.

    ಕಳೆದ ವರ್ಷ ಕಲಬುರಗಿಯ ಜ್ಞಾನ ಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯ ಕೇಂದ್ರದಲ್ಲಿ ವೀರೇಶ್​ ಪರೀಕ್ಷೆ ಬರೆದಿದ್ದ. 20 ಪ್ರಶ್ನೆಗಳಿಗೆ ಉತ್ತರ ಬರೆದಿದ್ದ ವಿರೇಶ್​ಗೆ 121 ಮಾರ್ಕ್ಸ್​ ಬಂದಿದ್ದರಿಂದ ಅನುಮಾನ ಹುಟ್ಟುಕೊಂಡಿತು. ಜ್ಞಾನ ಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆ ಬಿಜೆಪಿ ಮುಖಂಡರಿಗೆ ಸೇರಿದ ಶಾಲೆಯಾಗಿದ್ದು, ವಿರೇಶ್ ಜೊತೆಗೆ ಇನ್ನೂ ಹಲವು ವಿದ್ಯಾರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

    ಸಿಐಡಿ ಅಧಿಕಾರಿಗಳಿಂದ ಅಕ್ರಮದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳ ಶೋಧ ಕಾರ್ಯ ನಡೆಯುತ್ತಿದೆ. ಈ ಕೃತ್ಯದಲ್ಲಿ ಮಹಿಳಾ, ಪುರುಷ ಅಭ್ಯರ್ಥಿಗಳು, ಹಲವು ಪೊಲೀಸ್ ಅಧಿಕಾರಿಗಳು, ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು ಸೇರಿದಂತೆ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

    ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಅಧಿಕಾರಿಗಳು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಒಟ್ಟು 545 ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು. (ದಿಗ್ವಿಜಯ ನ್ಯೂಸ್​)

    ಪಿಎಸ್​ಐ ಪರೀಕ್ಷೆಯಲ್ಲಿ ಬರೆದಿದ್ದು 21 ಪ್ರಶ್ನೆಗೆ ಉತ್ತರ ಓಎಂಆರ್ ಶೀಟ್​ನಲ್ಲಿ ತೋರಿಸಿದ್ದೆಷ್ಟು?

    16ರ ಹುಡುಗಿಗೆ ಅರಿವಿತ್ತು, ಆರೋಪಿಯು ಕಾಂಡೋಮ್​ ಬಳಸಿದ್ದ ಎಂದು ಬಾಂಬೈ ಹೈಕೋರ್ಟ್​ನಿಂದ ಜಾಮೀನು!

    ಕಲ್ಲಂಗಡಿ ಹಣ್ಣಿನಂಗಡಿ ಧ್ವಂಸ ಮಾಡಿದ ಪ್ರಕರಣ: ಶ್ರೀರಾಮ ಸೇನೆ ಸಂಘಟನೆಯ ನಾಲ್ವರು ಕಾರ್ಯಕರ್ತರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts