More

    200 ಯುವತಿಯರು, 100 ವಿವಾಹಿತೆಯರು: 23 ವರ್ಷದ ಯುವಕನ ಮೊಬೈಲ್​ನಲ್ಲಿತ್ತು ಸ್ಫೋಟಕ ರಹಸ್ಯ!

    ವಿಜಯವಾಡ: ನೋಡಲು ಹ್ಯಾಂಡ್ಸಮ್​ ಆಗಿರುವ ಈತನ ವಯಸ್ಸು ಕೇವಲ 23 ವರ್ಷ. ಆದರೆ, ಈತ ಮಾಡಿರುವ ದುಷ್ಕೃತ್ಯದ ಬಗ್ಗೆ ನೀವೇನಾದ್ರೂ ತಿಳಿದ್ರೆ ಒಮ್ಮೆ ಬಾಯಿ ಮೇಲೆ ಬೆರಳಿಡುವುದು ಖಂಡಿತ. ಒಂದಲ್ಲ ಎರಡಲ್ಲ ಬರೋಬ್ಬರಿ 200 ಯುವತಿಯರು 100 ವಿವಾಹಿತ ಮಹಿಳೆಯರಿಗೆ ವಂಚಿಸಿದ್ದಾನೆ ಅಂದ್ರೆ ನಂಬುವುದು ಕಷ್ಟವೇ ಆದರೂ, ಇದು ಸತ್ಯ.

    ವಿವರಣೆಗೆ ಬರುವುದಾದರೆ, ಚೆನ್ನುಪಲ್ಲಿ ಪ್ರಸನ್ನಕುಮಾರ್​ ಅಲಿಯಾಸ್​ ಪ್ರಶಾಂತಿ ರೆಡ್ಡಿ ಅಲಿಯಾಸ್​ ರಾಜರೆಡ್ಡಿ ಅಲಿಯಾಸ್​ ಟೋನಿ (23) ಇಷ್ಟೂ ಹೆಸರಿನಿಂದ ಕೆಲವರಿಗೆ ಪರಿಚಿತನಾಗಿರುವ ಈ ಖತರ್ನಾಕ್​ ಯುವಕನ ಮೂಲ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಪ್ರೊದ್ದತುರ್​ ಗೀತಾಶ್ರಮ್ ಸ್ಟ್ರೀಟ್​. ಪ್ರಥಮ ವರ್ಷದ ಬಿ.ಟೆಕ್ ಅನ್ನು ಅರ್ಧಕ್ಕೆ ಮೊಟಕುಗೊಳಿಸಿರುವ ಪ್ರಸನ್ನ, 2017ರಿಂದ ಐಷಾರಾಮಿ ಪಾರ್ಟಿಗಳು ಸರಗಳ್ಳತನವನ್ನು ಆರಂಭಿಸಿದ. ಅನೇಕ ಪ್ರಕರಣಗಳಲ್ಲಿ ಈಗಾಗಲೇ ಜೈಲು ಶಿಕ್ಷೆ ಅನುಭವಿಸಿರುವ ಪ್ರಸನ್ನ ಜಾಮೀನಿನ ಮೇಲೆ ಹೊರಗಿದ್ದಾನೆ. ​​

    ಪ್ರಸನ್ನಗೆ 2020ರಲ್ಲಿ ಶೇರ್​ಚಾಟ್​ ಮೂಲಕ ನಬಿಕೊಟಾ ಎಂಬ ವ್ಯಕ್ತಿಯಿಂದ ಶ್ರೀನಿವಾಸ್ ಎಂಬಾತನ ಪರಿಚಯವಾಗುತ್ತದೆ. ಶ್ರೀನಿವಾಸ್​ಗೆ ಪ್ರಶಾಂತ್​ ರೆಡ್ಡಿ ಅಲಿಯಾಸ್​ ರಾಜರೆಡ್ಡಿ ಎಂಬ ಹೆಸರಿನಿಂದ ಪ್ರಸನ್ನ ಪರಿಚಿತನಾಗುತ್ತಾನೆ. ಹೈದರಬಾದ್​ನ ಸೆಕ್ರೆಟರಿಯಟ್​ನಲ್ಲಿ ಕೆಲಸ ಮಾಡುತ್ತಿರುವುದಾಗಿ ಮತ್ತು ತನಗೆ ಅನೇಕ ಗಣ್ಯರ ಪರಿಚಯ ಇರುವುದಾಗಿ ಹೇಳಿಕೊಳ್ಳುತ್ತಾನೆ. ಸೆಕ್ರೆಟರಿಯಟ್​ನಲ್ಲಿ ಕ್ಲರ್ಕ್​ ಹುದ್ದೆ ಕೊಡಿಸುವುದಾಗಿ ನಂಬಿಸುತ್ತಾನೆ. ಇದನ್ನು ನಂಬಿದ ಶ್ರೀನಿವಾಸ್​ ತನ್ನ ತಾಯಿಗೆ ಈ ಮಾತನ್ನು ತಿಳಿಸುತ್ತಾನೆ.

    ಇದರ ನಡುವೆ ನನ್ನ ತಾಯಿ ಆರೋಗ್ಯ ಸರಿಯಿಲ್ಲ. ಚಿಕಿತ್ಸೆಗೆ ಹಣ ಬೇಕಿದೆ ಎಂದು ಶ್ರೀನಿವಾಸ್​ ಬಳಿ ಕೇಳುತ್ತಾನೆ. ಬಳಿಕ ಶ್ರೀನಿವಾಸ್​ ತಾಯಿಯ ಬಳಿ ಹೇಳಿದಾಗ. ಹೇಗಿದ್ರೂ ಮಗನಿಗೆ ಕೆಲಸ ಸಿಗುತ್ತದೆ ಎಂದು ನಂಬಿದ್ದ ಶ್ರೀನಿವಾಸ್​ ತಾಯಿ ತನ್ನ ಬಳಿಯಿದ್ದ ಚಿನ್ನದ ಸರ ಮತ್ತು ತಾಳಿಯನ್ನು ಮಾರಿ ಹಣ ಕೊಡುತ್ತಾಳೆ. ಹಣವನ್ನು ಸ್ವೀಕರಿಸುವ ಪ್ರಸನ್ನ ಅಂದಿನಿಂದ ಯಾವುದೇ ಕರೆಯನ್ನು ಸ್ವೀಕರಿಸುವುದೇ ಇಲ್ಲ. ಇದರ ನಡುವೆ ಜುಲೈ 29ರಂದು ಕಡಪ ಜಿಲ್ಲೆಯ ಅಕ್ಕಯಪಲ್ಲೆಯಲ್ಲಿರುವ ಮನೆಯೊಳಗೆ ನುಗ್ಗಿ, ಲಾಕರ್​ ಹೊಡೆದು ಅದರಲ್ಲಿದ್ದ 30 ಗ್ರಾಂ ಚಿನ್ನದ ಗ್ಲಾಸಸ್​, ಕಿವಿಯೋಲೆಗಳು, ಎರಡು ಉಂಗುರಗಳನ್ನು ಪ್ರಸನ್ನ ಕಳ್ಳತನ ಮಾಡಿರುತ್ತಾನೆ. ಇದೇ ಸಂದರ್ಭದಲ್ಲಿ ತಾವು ಮೋಸ ಹೋಗಿರುವುದು ಶ್ರೀನಿವಾಸ್​ಗೆ ತಿಳಿದು ತಡಮಾಡದೇ ದೂರು ನೀಡುತ್ತಾರೆ. ಬಳಿಕ ಪ್ರಸನ್ನಕುಮಾರ್​ ರೆಡ್ಡಿಯನ್ನು ಪೊಲೀಸರು ಬಂಧಿಸುತ್ತಾರೆ.

    ಇದಾದ ಬಳಿಕ ಪ್ರಸನ್ನ ಕುಮಾರ್​ ವಿಚಾರಣೆಗೆ ಕೈಗೆತ್ತಿಕೊಳ್ಳುವ ಪೊಲೀಸರಿಗೆ ಆತನ ಸ್ಮಾರ್ಟ್​ಫೋನ್​ ನೋಡಿ ಶಾಕ್​ ಆಗುತ್ತದೆ. ಬಳಿಕ ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸುತ್ತಾರೆ. ಬಿ.ಟೆಕ್​ ಅರ್ಧಕ್ಕೆ ಮೊಟಕುಗೊಳಿರುವ ಪ್ರಸನ್ನ ಇನ್​ಸ್ಟಾಗ್ರಾಂ, ಫೇಸ್​ಬುಕ್​ ಮತ್ತು ಶೇರ್​ಚಾಟ್​ನಂತಹ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಮಧ್ಯಮ ವಯಸ್ಸಿನ ಮಹಿಳೆಯರಿಗೆ ವಂಚಿಸಿರುವುದು ಬೆಳಕಿಗೆ ಬರುತ್ತದೆ. ಮರುಳು ಮಾಡುವ ಅಥವಾ ಆಕರ್ಷನೆಯ ಮಾತುಗಳನ್ನಾಡಿ ವಿವಾಹಿತ ಮಹಿಳೆಯರು ಮತ್ತು ಯುವತಿಯರನ್ನು ಪ್ರೀತಿಯ ಬಲೆಗೆ ಕೆಡವಿ ಅವರೊಂದಿಗೆ ಕೆಟ್ಟದಾಗಿ ಮತ್ತು ಡಬ್ಬಲ್​ ಮೀನಿಂಗ್​ ಡೈಲಾಗ್​ಗಳನ್ನು ಮಾತನಾಡುತ್ತಿದ್ದ ಎಂಬ ಅಂಶ ಬಯಲಾಗುತ್ತದೆ.

    ಮಹಿಳೆಯರೊಂದಿಗೆ ಸುಳ್ಳುಗಳನ್ನಾಡಿ ಅವರನ್ನು ನಿಯಂತ್ರಿಸುತ್ತಿದ್ದ. ಅವಕಾಶ ಇರುವವರೊಂದಿಗೆ ನಿಕಟ ಸಂಪರ್ಕದಲ್ಲಿ ಸಮಯ ಕಳೆಯುತ್ತಿದ್ದ. ಅಲ್ಲದೆ, ಅರೆಬೆತ್ತಲೆ ಮತ್ತು ಬೆತ್ತಲೆ ಫೋಟೋ ಹಾಗೂ ವಿಡಿಯೋಗಳನ್ನು ತೆಗೆದುಕೊಳ್ಳುತ್ತಿದ್ದ. ಮಹಿಳೆಯರೊಂದಿಗೆ ಸಲುಗೆಯಿಂದ ಇರುವ ಫೋಟೋ ಮತ್ತು ವಿಡಿಯೋಗಳನ್ನು ಸಹ ಪ್ರಸನ್ನ ತೆಗೆದುಕೊಂಡಿದ್ದಾನೆ. ಎಲ್ಲ ಚಿತ್ರಗಳನ್ನು ಸೇವ್​ ಮಾಡಿಟ್ಟುಕೊಂಡಿದ್ದ ಆರೋಪಿ ಮಹಿಳೆಯರನ್ನು ಬ್ಲಾಕ್​ಮೇಲ್​ ಮಾಡಲು ಆರಂಭಿಸಿದ್ದಾನೆ. ಬೆದರಿಸಿ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿ ಚಿನ್ನಾಭರಣವನ್ನು ಸುಲಿಗೆ ಮಾಡಿ, ಮಾರಾಟ ಮಾಡಿದ ಹಣ ಪಡೆದುಕೊಂಡಿದ್ದಾನೆ. ಅನೇಕರು ಮರ್ಯಾದೆಗೆ ಅಂಜಿ ಆತನ ವಿರುದ್ಧ ದೂರು ನೀಡಲು ಯಾರೂ ಮುಂದೆ ಬಂದಿಲ್ಲ. ಇದು ಒಂದು ರೀತಿಯಲ್ಲಿ ಆತನಿಗೆ ವರವಾಗಿತ್ತು.

    ಕೆಟ್ಟ ಕೆಲಸ ಮಾಡಿದವರು ಯಾರೇ ಆಗಲಿ ಎಷ್ಟು ದಿನ ಅಂತಾ ಆರಾಮಾಗಿ ಇರಲು ಸಾಧ್ಯ. ಒಂದಲ್ಲ ಒಂದು ದಿನ ಸಿಕ್ಕಿಬೀಳಲೇ ಬೇಕು ಎಂಬಂತೆ ಕೊನೆಗೂ ಉದ್ಯೋಗ ಕೊಡಿಸುವ ನೆಪದಲ್ಲಿ ಹಣ ಪಡೆದ ಶ್ರೀನಿವಾಸ್​ಗೆ ವಂಚನೆ ಮಾಡಿದ​ ಪ್ರಕರಣದಲ್ಲಿ ಪ್ರಸನ್ನ ಸಿಕ್ಕಿಬಿದ್ದಿದ್ದಾನೆ. ಬಳಿಕ ಪೊಲೀಸ್​ ವಿಚಾರಣೆಯಲ್ಲಿ ಸುಮಾರು 100 ಮಹಿಳೆಯರು ಮತ್ತು 200 ಯುವತಿಯರಿಗೆ ಪ್ರಸನ್ನ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಆತನಿಂದ 1.26 ಲಕ್ಷ ರೂ. ನಗದು ಮತ್ತು 30 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. (ಏಜೆನ್ಸೀಸ್​)

    ಬದುಕಿನ ಕಹಿ ಅನುಭವಗಳನ್ನು ಬಿಚ್ಚಿಟ್ಟ ಶ್ರೀರಾಮಚಂದ್ರನ ಬೆಡಗಿ: ಆತ್ಮಹತ್ಯೆಗೆ ಯತ್ನಿಸಿದ್ದರಂತೆ ನಟಿ ಮೋಹಿನಿ!

    ಜೆಡಿಎಸ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ ವಿಜೇತಾ!

    ಯಾರ್ಯಾರಿಗೆ ಎಷ್ಟೆಷ್ಟು?: ಬಿಗ್ ಬಾಸ್ ಸ್ಪರ್ಧಿಗಳ ಸಂಭಾವನೆ ಲೆಕ್ಕಾಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts