More

    ತಕ್ಷಣ ಕರ್ತವ್ಯಕ್ಕೆ ಹಾಜರಾಗಿ: ರಜೆಯಲ್ಲಿರುವ ಏಮ್ಸ್​ ಸಿಬ್ಬಂದಿಗೆ ಸೂಚನೆ

    ನವದೆಹಲಿ: ಮಹಾಮಾರಿ ಕರೊನಾ ರೂಪಾಂತರಿ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಜೆಯಲ್ಲಿರುವ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಥವಾ ಏಮ್ಸ್​ ಸಿಬ್ಬಂದಿ ತಕ್ಷಣ ಕೆಲಸಕ್ಕೆ ಹಾಜರಾಗುವಂತೆ ಆದೇಶ ಹೊರಡಿಸಲಾಗಿದೆ.

    ಏಮ್ಸ್​ ಸಿಬ್ಬಂದಿಗೆ ಚಳಿಗಾಲದ ರಜೆ ಸೌಲಭ್ಯವನ್ನು ರದ್ದುಪಡಿಸಲಾಗಿದೆ. ಸದ್ಯ ಕಳೆದ ಮೂರು ದಿನಗಳಿಂದ ಏಮ್ಸ್​ಗೆ 50ಕ್ಕೂ ಹೆಚ್ಚು ಕರೊನಾ ರೋಗಿಗಳು ದಾಖಲಾಗಿದ್ದು, ಇದು ಒಳ್ಳೆಯ ಸಂಕೇತವಲ್ಲ. ದೇಶವೂ ಮೂರನೇ ಅಲೆಯನ್ನು ಲಘುವಾಗಿ ತೆಗೆದುಕೊಳ್ಳಬಾರದು. ಒಮಿಕ್ರಾನ್​ ಜತೆಯಲ್ಲಿ ಡೆಲ್ಟಾ ರೂಪಾಂತರಿ ಕೂಡ ಹರಡುತ್ತಿದ್ದು, ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಏಮ್ಸ್​ನ ಉನ್ನತ ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

    ರಜೆಯಲ್ಲಿರುವ ಸಿಬ್ಬಂದಿ ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಏಮ್ಸ್​ ಸೂಚನೆ ನೀಡಿದೆ. ಇತ್ತ ದೆಹಲಿ ಸರ್ಕಾರ ಕರೊನಾ ಹೆಚ್ಚಳ ಹಿನ್ನೆಲೆಯಲ್ಲಿ ವಾರಾಂತ್ಯದ ಕರ್ಫ್ಯೂ ವಿಧಿಸಿದೆ. ಸರ್ಕಾರಿ ನೌಕರರಿಗೆ ವರ್ಕ್​ ಫ್ರಮ್​ ಹೋಮ್​ ನೀಡಲಾಗಿದೆ. ಖಾಸಗಿ ಕಂಪನಿಗಳಿಗೆ ಶೇ. 50 ರಷ್ಟು ಉದ್ಯೋಗಿಗಳಿಗೆ ಅನುಮತಿ ನೀಡಲಾಗಿದೆ.

    ದೆಹಲಿಯಲ್ಲಿ ಸೋಮವಾರ 4,099 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿವೆ ಮತ್ತು ಪಾಸಿಟಿವ್​ ದರ ಶೇ. 6.46 ಕ್ಕೆ ಏರಿದೆ. ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರಿಗೆ ಕರೊನಾ ಪಾಸಿಟಿವ್​ ಆಗಿದ್ದು, ರೋಗ ಲಕ್ಷಣಗಳು ಲಘುವಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ಶಾಲೆ-ಕಾಲೇಜುಗಳನ್ನು ಬಂದ್​ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಮ ತೆಗೆದುಕೊಳ್ಳುವ ಲಕ್ಷಣಗಳು ಕಾಣುತ್ತಿವೆ. (ಏಜೆನ್ಸೀಸ್​)

    ಗ್ರಾಮೀಣ ಭಾಗದ ಪತ್ರಕರ್ತರಿಗೆ ಹೆಲ್ತ್​ ಕಾರ್ಡ್​, ಬಸ್ ಪಾಸ್ ಸೌಲಭ್ಯ: ಪತ್ರಕರ್ತರ ಸಮ್ಮೇಳನದಲ್ಲಿ ಸಿಎಂ ಭರವಸೆ

    ನೀನೇನ್​ ದೊಡ್ಡ ಡಾನಾ​? ನಾನಾ-ನೀನಾ ನೋಡೇ ಬಿಡೋಣ್ವಾ? ರಾಜ್ ಬಿ ಶೆಟ್ಟಿಗೆ ಚಮಕ್ ಕೊಟ್ಟ ಶಿವಣ್ಣ

    ಇದು ಆರ್​ಆರ್​ಆರ್​ ಚಿತ್ರದ ಅತ್ಯಂತ ಕಳಪೆ ಸಾಧನೆಯಂತೆ! ಜಕ್ಕಣನ ಮೇಲೆ ಅಸಮಾಧಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts