More

    ತೆಲಂಗಾಣದಲ್ಲಿ ಮೀನಿನ ಮಳೆ ಕಂಡು ಹೌಹಾರಿದ ಜನರು! ಈ ಮೀನುಗಳು ತಿನ್ನಲು ಯೋಗ್ಯವೇ? ಇಲ್ಲಿದೆ ಉತ್ತರ…

    ಹೈದರಾಬಾದ್​: ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ತೆಲಂಗಾಣ ರಾಜ್ಯವು ಭಾರೀ ಮಳೆಯನ್ನು ಎದುರಿಸುತ್ತಿದೆ. ಇದರ ನಡುವೆ ಅಪರೂಪದ ವಿದ್ಯಾಮಾನಕ್ಕೆ ತೆಲಂಗಾಣದ ಜಗ್ಗಿತಲ ಪಟ್ಟವು ಸಾಕ್ಷಿಯಾಗಿದೆ.

    ಹೌದು, ಶುಕ್ರವಾರ ಹಾಗೂ ಶನಿವಾರ ಸುರಿದ ಭಾರೀ ಮಳೆಯ ಜತೆಗೆ ಜಗ್ಗಿತಲ ಪಟ್ಟಣದಲ್ಲಿ ಮೀನಿನ ಮಳೆಯು ಸುರಿದಿದೆ. ಆಕಾಶದಿಂದ ಮೀನುಗಳು ಧರೆಗೆ ಬೀಳುವುದನ್ನು ನೋಡಿ ತೆಲಂಗಾಣದ ಜನರು ಹುಬ್ಬೇರಿಸಿದ್ದಾರೆ. ಮೀನಿನ ಮಳೆಯಾಗುವ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್​​ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ವೈರಲ್​ ಆಗಿದೆ. ತುಂಬಾ ಎತ್ತರದಿಂದ ಮೀನುಗಳು ಕೆಳಗೆ ಬಿದ್ದರೂ ಅವುಗಳಿನ್ನೂ ಜೀವಂತವಾಗಿರುವುದನ್ನು ನೋಡಿ ಜನರ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಪ್ರಾಣಿಗಳ ಮಳೆ ಎಂದು ಕರೆಯಲ್ಪಡುವ ಅಪರೂಪದ ಹವಾಮಾನ ವಿದ್ಯಮಾನ ಇದಾಗಿದೆ. ವಿರಳಾತಿ ವಿರಳ ಪ್ರಕರಣಗಳಲ್ಲಿ ಏಡಿಗಳು, ಸಣ್ಣ ಮೀನುಗಳು ಮತ್ತು ಕಪ್ಪೆಗಳಂತಹ ಸಣ್ಣ ಜಲಚರ ಪ್ರಾಣಿಗಳನ್ನು ಸಮುದ್ರ ಅಥವಾ ಇತರ ನೀರಿನ ಭಾಗಗಳ ಮೇಲೆ ಸಂಭವಿಸುವ ಸುಂಟರಗಾಳಿಯು ಆಕಾಶದ ಮೇಲ್ಭಾಗಕ್ಕೆ ಸೆಳೆದುಕೊಳ್ಳುತ್ತದೆ. ಚಂಡಮಾರುತದ ಪ್ರಭಾವ ಕಡಿಮೆಯಾದಾಗ ನೀರಿನ ಜೊತೆಗೆ ಜಲಚರಗಳು ಸಹ ಭೂಮಿಯ ಮೇಲೆ ಮಳೆಯಾಗುತ್ತವೆ ಮತ್ತು ಜನರನ್ನು ದಿಗ್ಭ್ರಮೆಗೊಳಿಸುತ್ತವೆ.

    ಹವಾಮಾನದ ವಿದ್ಯಮಾನದಿಂದಾಗಿ ಮೀನುಗಳಂತಹ ಸಮುದ್ರ ಪ್ರಾಣಿಗಳು ತಮ್ಮ ನೈಸರ್ಗಿಕ ಆವಾಸಸ್ಥಾನದಿಂದ ದೂರ ಸಾಗಿಸಲ್ಪಡುತ್ತವೆ. ಈ ರೀತಿಯ ಘಟನೆ ಅಪರೂಪವಾಗಿದ್ದರೂ, ಜನರು ಪ್ರಾಣಿಗಳ ಮಳೆಗೆ ಸಾಕ್ಷಿಯಾಗಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ನಿವಾಸಿಗಳು ಆಕಾಶದಿಂದ ಮೀನುಗಳು ಬೀಳಲು ಪ್ರಾರಂಭಿಸಿದ ಇದೇ ವಿದ್ಯಮಾನಕ್ಕೆ ಸಾಕ್ಷಿಯಾದರು. ವಿದೇಶಗಳಲ್ಲಿಯೂ ಈ ರೀತಿಯ ಮೀನು ಮಳೆ ಸಾಮಾನ್ಯವಾಗಿರುತ್ತದೆ.

    ತಿನ್ನಲು ಯೋಗ್ಯವೇ?
    ಈ ಮೀನುಗಳನ್ನು ತಿಂದರೆ ಎಷ್ಟು ಅಪಾಯ ಗೊತ್ತಾ? ಕೆಲವೊಮ್ಮೆ ಪ್ರಾಣ ಕಳೆದುಕೊಳ್ಳುವ ಅಪಾಯವೂ ಇದೆ ಎಂದು ಪ್ರಾಣಿಶಾಸ್ತ್ರಜ್ಞರು ಹೇಳಿದ್ದಾರೆ. ಸಾಮಾನ್ಯವಾಗಿ ರಾಸಾಯನಿಕಗಳನ್ನು ಹೊರಹಾಕುವ ಕಾರ್ಖಾನೆಗಳ ಬಳಿ ಇರುವ ಕೆರೆಗಳು ಮತ್ತು ಕೊಳಗಳು ಮಲಿನಗೊಂಡಿರುತ್ತವೆ. ಆ ಪ್ರದೇಶಗಳಲ್ಲಿ ಕಪ್ಪು ಮೀನುಗಳು ಹೆಚ್ಚು ಸಾಮಾನ್ಯವಾಗಿರುತ್ತವೆ. ಆದರೆ, ಮಳೆಗಾಲದಲ್ಲಿ ರಾಸಾಯನಿಕಗಳ ಪ್ರಭಾವದಿಂದ ಮೀನುಗಳಿಗೆ ಕೆಲವೊಮ್ಮೆ ಆಮ್ಲಜನಕ ಸಿಗುವುದಿಲ್ಲ. ಆದ್ದರಿಂದ ಅವು ಗಾಳಿಯಲ್ಲಿ ಹಾರುತ್ತವೆ. ಗಾಳಿಗೆ ಸಿಲುಕಿದ ಮೀನುಗಳು ಮಳೆಗಾಲದಲ್ಲಿ ರಸ್ತೆಗಳ ಎದುರಿನ ಹೊಲಗಳಿಗೆ ಬೀಳುತ್ತವೆ. ಅವುಗಳನ್ನು ಅಡುಗೆ ಮಾಡಿ ತಿಂದರೆ ಪ್ರಾಣಕ್ಕೇ ಅಪಾಯ ಎಂದಿದ್ದಾರೆ. ಕೈಗಾರಿಕಾ ರಾಸಾಯನಿಕಗಳಿಂದ ನೀರು ಕಲುಷಿತಗೊಂಡಿರುವ ಪ್ರದೇಶಗಳಲ್ಲಿ ಹಿಡಿದ ಮೀನುಗಳನ್ನು ತಿನ್ನುವುದು ಒಳ್ಳೆಯದಲ್ಲ ಎಂದು ಪ್ರಾಣಿಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. (ಏಜೆನ್ಸೀಸ್​)

    ಕಳಂಕಿತರ ನೇಮಕ ಬೇಡ: ತನಿಖಾ ಸಂಸ್ಥೆಗಳಿಗೆ ನಿಯುಕ್ತಿ, ಸರ್ವೀಸ್ ರೆಕಾರ್ಡ್ ಪರಿಗಣಿಸಲು ಸೂಚನೆ..

    ಕಾಂಗ್ರೆಸ್​ನಿಂದ ನಿರುದ್ಯೋಗಿಗಳ ಸರ್ವೆ: ಯುವ, ಮಹಿಳಾ ಘಟಕಕ್ಕೆ ಹೊಣೆ..

    ಆಮಂತ್ರಣ ನೀಡುವ ಮುನ್ನ..; ಪರಿಚಯದ ಮುಗುಳುನಗೆ ಇರಲಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts