More

    ಪತ್ನಿ ಜತೆಗಿನ ಸಂಭೋಗದ ಬೆನ್ನಲ್ಲೇ ಮೊಬೈಲ್ ನೋಡಿದ ವ್ಯಕ್ತಿಗೆ ಬಿಗ್​ ಶಾಕ್​: ಮೆಮೊರಿ ಲಾಸ್​, ಇದು ಭಯಾನಕ ಕೇಸ್!​

    ಡಬ್ಲಿನ್​: ಪತ್ನಿಯೊಂದಿಗೆ ಲೈಂಗಿಕ ಸಂಭೋಗ ನಡೆಸಿದ ಬೆನ್ನಲ್ಲೇ 66 ವರ್ಷದ ವ್ಯಕ್ತಿಯೊಬ್ಬ ಅಲ್ಪಾವಧಿಯವರೆಗೆ ಜ್ಞಾಪಕ ಶಕ್ತಿ ಕಳೆದುಕೊಂಡಿದ್ದ ವಿಚಿತ್ರ ಘಟನೆ ಐರ್ಲೆಂಡ್​ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.

    ಈ ಅಸಹಜ ಪ್ರಕರಣವನ್ನು ಐರಿಷ್​ ಮೆಡಿಕಲ್ ಜರ್ನಲ್‌ನ ಮೇ ಸಂಚಿಕೆಯಲ್ಲಿ ವಿಶ್ಲೇಷಿಸಲಾಗಿದ್ದು, ಕಳೆದ ಬುಧವಾರ ಪ್ರಕಟವಾಗಿದೆ. ವ್ಯಕ್ತಿಯ ಅಲ್ಪಾವಧಿಯ ಮರೆವಿಗೆ ಲೈಂಗಿಕ ಸಂಭೋಗ ಪ್ರಚೋದಕವಾಗಿದ್ದು, ಇದನ್ನು ಔಪಚಾರಿಕವಾಗಿ ಟ್ರಾನ್ಸಿಯೆಂಟ್ ಗ್ಲೋಬಲ್ ವಿಸ್ಮೃತಿ (ಟಿಜಿಎ) ಎಂದು ಕರೆಯಲಾಗುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ.

    ಟಿಜಿಎ, ಮೂರ್ಛೆರೋಗ ಅಥವಾ ಸ್ಟ್ರೋಕ್‌ನಂತಹ ಹೆಚ್ಚು ಸಾಮಾನ್ಯವಾದ ನರರೋಗದಿಂದ ಉಂಟಾಗದ ಹಠಾತ್ ಅಸ್ಥಿರ ಜಾಗತಿಕ ವಿಸ್ಮೃತಿಯ ಮುಂದುವರಿದ ಭಾಗವಾಗಿದೆ ಎಂದು ಮಯೋ ಕ್ಲೀನಿಕ್​ ವ್ಯಾಖ್ಯಾನಿಸಿದೆ. ಐರ್ಲೆಂಡ್​ನಲ್ಲಿ ನಡೆದ ವಿಚಿತ್ರ ಪ್ರಕರಣದಲ್ಲಿ ವ್ಯಕ್ತಿಯು ತನ್ನ ಪತ್ನಿಯ ಜತೆ ಸಂಭೋಗ ನಡೆಸಿದ ಬೆನ್ನಲ್ಲೇ 10 ನಿಮಿಷಗಳ ಕಾಲ ವಿಸ್ಮೃತಿಗೆ ಜಾರಿದ್ದ ಅಥವಾ ಜ್ಞಾಪಕ ಶಕ್ತಿ ಕಳೆದುಕೊಂಡಿದ್ದ ಎಂದು ಮೆಡಿಕಲ್​​ ಜರ್ನಲ್​ನಲ್ಲಿ ಪ್ರಕಟವಾಗಿದೆ.

    ಪತ್ನಿಯ ಜತೆ ಲೈಂಗಿಕ ಸಂಭೋಗ ನಡೆಸಿದ ಕೂಡಲೇ ಐರಿಷ್​ ವ್ಯಕ್ತಿ ತನ್ನ ಮೊಬೈಲ್​ ಫೋನಿನ ದಿನಾಂಕವನ್ನು ಗಮನಿಸಿದ್ದಾನೆ. ಹಿಂದಿನ ದಿನ ತನ್ನ ವಿವಾಹ ವಾರ್ಷಿಕೋತ್ಸವವನ್ನು ಮರೆತುಬಿಟ್ಟಿದ್ದಕ್ಕಾಗಿ ಇದ್ದಕ್ಕಿದ್ದಂತೆ ದುಃಖಿತನಾಗಿದ್ದಾನೆ. ಆದರೆ, ಹಿಂದಿನ ದಿನ ಆತ ತುಂಬಾ ಸಂತೋಷದಿಂದಲೇ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದ. ಅದರ ಬಗ್ಗೆ ಆತನಿಗೆ ಯಾವುದೇ ಸುಳಿವು ಇರಲಿಲ್ಲ. ಹತ್ತು ನಿಮಿಷ ಎಲ್ಲವನ್ನು ಮರೆತ ಐರಿಷ್​ ವ್ಯಕ್ತಿ ತನ್ನ ಹೆಂಡತಿ ಮತ್ತು ಮಗಳನ್ನು ಬೆಳಗ್ಗೆ ಮತ್ತು ಅದರ ಹಿಂದಿನ ದಿನ ಏನೆಲ್ಲ ಘಟನೆಗಳು ನಡೆದವು ಎಂಬುದರ ಬಗ್ಗೆ ಪದೇ ಪದೇ ಪ್ರಶ್ನಿಸಿದರು ಎಂದು ಜರ್ನಲ್​ನಲ್ಲಿ ಪ್ರಕಟವಾಗಿದೆ.

    ಇದು ವಿರಾಳಾತಿ ವಿರಳ ಆರೋಗ್ಯ ಸ್ಥಿತಿಯಾಗಿದೆ. 50 ರಿಂದ 70ರ ನಡುವಿನ ವಯೋಮಾನದವರಿಗೆ ಇದು ಸಂಭವಿಸುತ್ತದೆ. ಈ ಪರಿಸ್ಥಿತಿ ಎದುರಾದ ವ್ಯಕ್ತಿಯು ತನ್ನ ಸುತ್ತಮುತ್ತ ನಡೆದ ಇತ್ತೀಚಿನ ಘಟನೆಗಳನ್ನು ಮರೆತುಬಿಡುತ್ತಾರೆ. ಟಿಜಿಎ ಅನುಭವ ಎದುರಿಸಿದ ಕೆಲವರು ವರ್ಷಗಳ ಹಿಂದೆ ಏನು ನಡೆಯಿತು ಎಂಬುದನ್ನೇ ಮರೆತುಬಿಡುತ್ತಾರೆ. ಈ ಸಮಸ್ಯೆ ಬಾಧಿತ ಜನರು ಸಾಮಾನ್ಯವಾಗಿ ಕೆಲವೇ ಗಂಟೆಗಳಲ್ಲಿ ತಮ್ಮ ಸ್ಮರಣೆಯನ್ನು ಮರಳಿ ಪಡೆಯುತ್ತಾರೆ.

    ಈ ಪ್ರಕರಣದಲ್ಲಿ ದೀರ್ಘಕಾಲಿಕ ಸ್ಮೃತಿಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಏಕೆಂದರೆ, ವ್ಯಕ್ತಿಯು ತನ್ನ ಹೆಸರು, ವಯಸ್ಸು ಸೇರಿದಂತೆ ಇನ್ನಿತರ ಮೂಲ ಮಾಹಿತಿಗಳನ್ನು ನೀಡಿದರು. ಇದೇ ವ್ಯಕ್ತಿ ಈ ಹಿಂದೆ 2015 ರಲ್ಲಿಯೂ ಟಿಜಿಎ ಅನುಭವಿಸಿದ್ದರು. ಅದು ಕೂಡ ಲೈಂಗಿಕ ಕ್ರಿಯೆ ನಡೆಸಿದ ಸ್ವಲ್ಪ ಸಮಯದ ನಂತರವೇ ಸಂಭವಿಸಿತ್ತು. ಆಗಲೂ ಅದೃಷ್ಟವಶಾತ್ ತಮ್ಮ ಅಲ್ಪಾವಧಿಯಲ್ಲೇ ತಮ್ಮ ಸ್ಮರಣೆಯನ್ನು ಮರಳಿ ಪಡೆದರು.

    ಮತ್ತೊಮ್ಮೆ ಟಿಜಿಎ ಸಮಸ್ಯೆ ಎದುರಾಗಬಹುದು ಎಂದು ಹೆದರಿದ ಐರಿಷ್​ ವ್ಯಕ್ತಿ, ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಾದರು. ನರವೈಜ್ಞಾನಿಕ ಪರೀಕ್ಷೆ ಮಾಡಿಸಿದ ಬಳಿಕ ಆತನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಕಂಡುಬಂದಿದೆ.

    ಯೂನಿವರ್ಸಿಟಿ ಹಾಸ್ಪಿಟಲ್ ಲೈಮೆರಿಕ್‌ನ ನರವಿಜ್ಞಾನ ವಿಭಾಗದಲ್ಲಿ ಕೆಲಸ ಮಾಡುವ ಐರಿಷ್​ ಮೆಡಿಕಲ್ ಜರ್ನಲ್‌ನ ಲೇಖನದ ಲೇಖಕರು ಟಿಜಿಎ ಬಗ್ಗೆ ಮಾತನಾಡಿದ್ದು, ಅವರ ಪ್ರಕರಾ ಟಿಜಿಎ ಹೊಂದಿರುವ 10 ಪ್ರತಿಶತದಷ್ಟು ಜನರು ಮತ್ತೊಂದು ಟಿಜಿಎ ಸಂಚಿಕೆಯನ್ನು ಹೊಂದಿರುತ್ತಾರಂತೆ. ಈ ಟಜಿಎ ಶೀತ ಅಥವಾ ಬಿಸಿ ನೀರಿನಲ್ಲಿ ಮುಳುಗುವಿಕೆ, ಭಾವನಾತ್ಮಕ ಒತ್ತಡ, ನೋವು ಮತ್ತು ಲೈಂಗಿಕ ಸಂಭೋಗ ಸೇರಿದಂತೆ ಹಲವಾರು ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಮೆಸ್ಕಾಂ ಕೇಂದ್ರದಲ್ಲೇ ನಿತ್ಯ ಮಸಾಲೆ ರುಬ್ಬುವ ಭೂಪ! ಬಾಯಿತಪ್ಪಿ ಅಧಿಕಾರಿ ಆಡಿದ ಆ ಒಂದು ಮಾತನ್ನ ಉಗುಳುವಂತಿಲ್ಲ, ನುಂಗುವಂತಿಲ್ಲ….

    ಉತ್ತರ ಹೇಳಿ ಅಕ್ರಮಕ್ಕೆ ಸಹಕರಿಸಿದ ಜಾಣರಿಗೆ ನಡುಕ: ಪಿಎಸ್​ಐ ನೇಮಕ ಪರೀಕ್ಷೆಯಲ್ಲಿ ಡಿವೈಸ್ ಬಳಕೆ..

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಭಾಮಾ ಹರೀಶ್ ಆಯ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts