More

    ಇನ್ನೊಂದಿಷ್ಟು ಇಲ್ಲಿವೆ…ಮತ್ತಷ್ಟು ಹಾಟ್​ ಫೋಟೋಗಳನ್ನು ಹರಿಬಿಟ್ಟು ಟ್ರೋಲಿಗರಿಗೆ ಸವಾಲೆಸೆದ ಇರಾ ಖಾನ್​!

    ಮುಂಬೈ: ಬಾಲಿವುಡ್​ನ ನಟ ಆಮಿರ್​ ಖಾನ್​ ಪುತ್ರಿ ಇರಾ ಖಾನ್‌ ಕಳೆದ ಭಾನುವಾರ (ಮೇ8) 25ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರ ಜೊತೆ ಬರ್ತ್​ ಡೇ ಆಚರಿಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಯಿತು. ಅಲ್ಲದೆ, ಬಿಕಿನಿ ಧರಿಸಿ ಕೇಕ್​ ಕತ್ತಿರಿಸಿದ ಕಾರಣಕ್ಕೆ ಇರಾ ಖಾನ್​ ಫೋಟೋಗಳು ಸಿಕ್ಕಾಪಟ್ಟೆ ಟ್ರೋಲ್​ ಕೂಡ ಆಯಿತು. ಇದೀಗ ಮತ್ತಷ್ಟು ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ಇರಾ ಖಾನ್​ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.

    ನಿನ್ನೆ (ಮೇ.14) ಇನ್​ಸ್ಟಾಗ್ರಾಂನಲ್ಲಿ ಬರ್ತಡೇ ಫೋಟೋಗಳನ್ನು ಶೇರ್​ ಮಾಡಿಕೊಂಡಿರುವ ಇರಾ, ನನ್ನ ಹಿಂದಿನ ಬರ್ತಡೇ ಆಚರಣೆಯ ಫೋಟೋ ಬಗ್ಗೆ ಎಲ್ಲರ ಟ್ರೋಲ್​ಗಳು ಹಾಗೂ ದ್ವೇಷ ಮುಗಿದ್ದಿದ್ದರೆ, ಬರ್ತಡೇ ಆಚರಣೆಯ ಇನ್ನೊಂದಿಷ್ಟು ಫೋಟೋಗಳು ಇಲ್ಲಿವೆ ನೋಡಿ ಎಂದು ಅಡಿ ಬರಹ ನೀಡಿದ್ದಾರೆ. ಈ ಮೂಲಕ ಮತ್ತೆ ಟ್ರೋಲ್​ ಮಾಡಿ ಖುಷಿ ಪಡಿ ಮತ್ತು ದ್ವೇಷ ಮಾಡಿ ಎನ್ನುವ ರೀತಿಯಲ್ಲಿ ಪರೋಕ್ಷವಾಗಿ ಹೇಳಿಕೆ ನೀಡಿ ತಿರುಗೇಟು ನೀಡಿದ್ದಾರೆ.

    View this post on Instagram

    A post shared by Ira Khan (@khan.ira)

    ಇನ್ನು ಇರಾ ಖಾನ್​ ಪ್ರಿಯಕರ ಹಾಗೂ ಫಿಟ್ನೆಸ್​ ಕೋಚ್​ ನೂಪುರ್​ ಶಿಖರೆ ಕೂಡ ಟ್ರೋಲ್​​ ಮಾಡುವವರಿಗೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ಇರಾ ಬೆನ್ನಿಗ ನಿಂತಿದ್ದಾರೆ. ನಿಮ್ಮ ಎಲ್ಲಾ ಟ್ರೋಲ್​ಗಳಿಗೆ ನಮ್ಮ ಪ್ರತಿಕ್ರಿಯೆ ಇದಾಗಿರಲಿದೆ ಎಂದು ನಗುವ ಎಮೋಜಿಯನ್ನು ಶೇರ್​ ಮಾಡಿಕೊಂಡಿದ್ದಾರೆ. ನೀವು ಎಷ್ಟೇ ಟ್ರೋಲ್​ ಮಾಡಿದರೂ ನಾವೇನು ತಲೆಕಡೆಸಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ನೂಪುರ್​ ಶಿಖರೆ ರವಾನಿಸಿದ್ದಾರೆ.

    ಇನ್ನೊಂದಿಷ್ಟು ಇಲ್ಲಿವೆ...ಮತ್ತಷ್ಟು ಹಾಟ್​ ಫೋಟೋಗಳನ್ನು ಹರಿಬಿಟ್ಟು ಟ್ರೋಲಿಗರಿಗೆ ಸವಾಲೆಸೆದ ಇರಾ ಖಾನ್​!

    ಇರಾ ಖಾನ್​ ಇನ್ನೂ ಬಾಲಿವುಡ್​ಗೆ ಎಂಟ್ರಿ ಆಗಿಲ್ಲವಾದರೂ ಸ್ಟಾರ್​ ನಟನ ಪುತ್ರಿ ಎಂಬ ಕಾರಣಕ್ಕೆ ಅವರಾಗಲೇ ಅಸಂಖ್ಯಾತ ಅಭಿಮಾನಿಗಳ ಪಾಲಿಗೆ ಸೆಲೆಬ್ರಿಟಿಯಂತೆ ಕಾಣುತ್ತಿದ್ದಾರೆ. ಆಮಿರ್​ ಖಾನ್​ನ ಮಾಜಿ ಪತ್ನಿ ರೀನಾ ದತ್ತಾ, ಮಗ ಆಜಾದ್‌, ಆಮಿರ್​ ಖಾನ್​, ಬರ್ತ್​ ಡೇ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆಗ ತಾನೇ ಸ್ವಿಮಿಂಗ್​ ಪೂಲ್​ನಿಂದ ಎದ್ದು ಬಂದ ಇರಾ, ಬಿಕಿನಿಯಲ್ಲೇ ಕೇಕ್​ ಕತ್ತರಿಸುತ್ತಿದ್ದರೆ, ಅತ್ತ ಕುಟುಂಬಸ್ಥರು ಇರಾಳ ಸುತ್ತುವರಿದು ಶುಭ ಕೋರುತ್ತಾ ಸಂಭ್ರಮಿಸಿದ್ದರು. ಬಹುವರ್ಣದ ಬಿಕಿನಿ, ಕಿವಿಯೋಲೆ ಧರಿಸಿರುವ ಇರಾ ಎಂದಿನಂತೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ರೀನಾ ಕಪ್ಪು ಮತ್ತು ಬಿಳಿ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಆಮಿರ್​ ಮತ್ತು ಪುತ್ರ ಕೂಡ ಆಗಷ್ಟೇ ಸ್ವಿಮ್ಮಿಂಗ್​ ಪೂಲ್‌ನಿಂದ ಹೊರಬಂದಂತೆ ಚಿತ್ರದಲ್ಲಿ ಕಾಣುತ್ತಿದ್ದರು. ಈ ಫೋಟೋಗಳು ಜಾಲತಾಣದಲ್ಲಿ ವೈರಲ್​ ಆಗಿ ಸಿಕ್ಕಾಪಟ್ಟೆ ಟ್ರೋಲ್​ ಆಗಿತ್ತು. ಇದೀಗ ಟ್ರೋಲಿಗರಿಗೆ ಇರಾ ತಿರುಗೇಟು ನೀಡಿ, ಮತ್ತೆ ಕೆಣಕಿದ್ದಾರೆ. ಇದು ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಅಂತಾ ಕಾದು ನೋಡಬೇಕಿದೆ. (ಏಜೆನ್ಸೀಸ್​)

    View this post on Instagram

    A post shared by Ira Khan (@khan.ira)

    ಬಿಕಿನಿ ಧರಿಸಿಕೊಂಡೇ ಬರ್ತ್​ ಡೇ ಕೇಕ್​ ಕತ್ತರಿಸಿದ ಆಮಿರ್​ ಖಾನ್​ ಪುತ್ರಿ ಇರಾ! ಫೋಟೋ ವೈರಲ್​, ನೆಟ್ಟಿಗರಿಂದ ಬಗೆಬಗೆಯ ಕಮೆಂಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts