More

    ಯಾರಾಗಲಿದ್ದಾರೆ ಆರ್​ಸಿಬಿ ಕ್ಯಾಪ್ಟನ್​? ಇಲ್ಲಿದೆ ನೋಡಿ ಅಭಿಮಾನಿಗಳು ಹಾಗೂ ವಿಶ್ಲೇಷಕರ ಲೆಕ್ಕಾಚಾರ!

    ಬೆಂಗಳೂರು: ಇಂಡಿಯನ್​ ಪ್ರೀಮಿಯರ್​ ಲೀಗ್​ನ 8 ತಂಡಗಳು ತನ್ನಲ್ಲೇ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಉಳಿದ ಆಟಗಾರರನ್ನು ಖರೀದಿಸುವ ಇಡೀ ತಂಡಗಳ ಬಹುದೊಡ್ಡ ಹರಾಜು ಪ್ರಕ್ರಿಯೆಯನ್ನು ಕ್ರೀಡಾಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈ ಬಾರಿ ಐಪಿಎಲ್​ಗೆ ಹೊಸದಾಗಿ ಎರಡು ತಂಡಗಳು ಸೇರಿಕೊಂಡಿದ್ದು, 2022ರ 15ನೇ ಆವೃತ್ತಿಯ ಐಪಿಎಲ್​ಗೆ ಉತ್ಸಾಹ ಇಮ್ಮಡಿಯಾಗಿದೆ.

    ಕೆಲವು ಆಟಗಾರರನ್ನು ಆಯಾ ತಂಡಗಳು ಉಳಿಸಿಕೊಂಡ ನಂತರ ಆಟಗಾರರು ಆಯಾ ಫ್ರಾಂಚೈಸಿ ಜತೆ ಇರುವ ತಮ್ಮ ಒಡೆನಾಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶಿಖರ್​ ಧವನ್​, ರಶೀದ್​ ಖಾನ್​ ಮತ್ತು ಡೇವಿಡ್​ ವಾರ್ನರ್​ ಸಾಮಾಜಿಕ ಜಾಲತಾಣದಲ್ಲಿ ಇಮೇಜ್​ ಪೋಸ್ಟ್​ ಮಾಡಿದ್ದಾರೆ.

    ಇದೀಗ ಮುಂದಿನ ಹರಾಜು ಪ್ರಕ್ರಿಯೆ ಮೇಲೆ ಕ್ರೀಡಾಭಿಮಾನಿಗಳ ದೃಷ್ಟಿ ನೆಟ್ಟಿದ್ದು, ಅದಕ್ಕೂ ಮುನ್ನ ಬೆಂಗಳೂರು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಚರ್ಚೆಗಳು ಸಹ ಆರಂಭವಾಗಿದೆ. ಆರ್​ಸಿಬಿ ತಂಡವು ವಿರಾಟ್​ ಕೊಹ್ಲಿ, ಗ್ಲೇನ್​ ಮ್ಯಾಕ್ಸ್​ವೆಲ್​ ಮತ್ತು ಮಹಮ್ಮದ್​ ಸಿರಾಜ್​ನನ್ನು ಉಳಿಸಿಕೊಂಡಿದೆ.

    ಈಗಾಗಲೇ ಕೊಹ್ಲಿ ಆರ್​ಸಿಬಿ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಂದಿನ ಆವೃತ್ತಿಯಲ್ಲಿ ನಾಯಕ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಕಾರಣವಾಗಿದೆ. ಇದರ ನಡುವೆ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಆರ್‌ಸಿಬಿ ನಾಯಕರಾಗುತ್ತಾರೆ ಎಂದು ಅಭಿಮಾನಿಗಳು ಮತ್ತು ವಿಶ್ಲೇಷಕರು ನಿರೀಕ್ಷಿಸುತ್ತಿದ್ದಾರೆ. ಎಬಿ ಡಿವಿಲಿಯರ್ಸ್​ ಈಗಾಗಲೇ ಎಲ್ಲ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇರುವವರಲ್ಲಿ ಒಳ್ಳೆಯ ಅನುಭವಿ ಅಂದರೆ ಅದು ಮ್ಯಾಕ್ಸ್​ವೆಲ್​ ಮಾತ್ರ. ಹೀಗಾಗಿ ಮ್ಯಾಕ್ಸಿ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.

    ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಡೇನಿಯಲ್ ವೆಟ್ಟೋರಿಯು ಕೂಡ ಮ್ಯಾಕ್ಸಿ ಪರ ಬ್ಯಾಟ್​ ಬೀಸಿದ್ದಾರೆ. “ಗ್ಲೆನ್ ಮ್ಯಾಕ್ಸ್‌ವೆಲ್ ಆರ್​ಸಿಬಿಗೆ ಹೊಸ ನಾಯಕನಾಗಲಿದ್ದಾರೆ. ಅವರು ಕಳೆದ ವರ್ಷ ಅತ್ಯುತ್ತಮ ಪ್ರದರ್ಶನ ನೀಡಿದರು ಮತ್ತು ಅವರು ಉತ್ತಮ ಸ್ಕೋರ್‌ಗಳನ್ನು ನೀಡಿದರು. ಅವರು ಈ ಹಿಂದೆ ಮೆಲ್ಬೋರ್ನ್ ಸ್ಟಾರ್ಸ್‌ಗೆ ನಾಯಕರಾಗಿದ್ದರಿಂದ ನಾಯಕತ್ವ ಅನುಭವವಿದೆ ಎಂದು ಹೇಳಿದ್ದಾರೆ.

    ಮ್ಯಾಕ್ಸ್​ವೆಲ್​ ಅವರು ಕಳೆದ ಆವೃತ್ತಿಯಲ್ಲಿ 15 ಪಂದ್ಯಗಳಿಂದ 513 ರನ್​ ಕಲೆಹಾಕಿದ್ದರು. ಆರ್​ಸಿಬಿಯಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರನೆಂಬ ಹೆಗ್ಗಳಿಕೆ ಹೊಂದಿದ್ದಾರೆ. (ಏಜೆನ್ಸೀಸ್​)

    ಜಾಲತಾಣದಲ್ಲಿ ತಮ್ಮ ಫೋಟೋ ನೋಡಿ ನಟಿಗೆ ಬಿಗ್​ ಶಾಕ್​: ದೂರಿನ ಬೆನ್ನಲ್ಲೇ ಆರೋಪಿಗಳ ಬಂಧನ

    ಒಂದು ರೂಪಾಯಿ ಕೊಟ್ರೆ ಸಾಕು… ವಕೀಲರು, ಸರ್ಕಾರಿ ನೌಕರರಿಗೆ ಇಲ್ಲಿ ಸಿಗಲಿದೆ ಮನೆ! ಏನಿದು ಯೋಜನೆ?

    ನನ್ನ ಮಗ ಸತ್ತಾಗ ನಮ್ಮನ್ನು ತಬ್ಬಿಕೊಂಡು ನಾನಿದ್ದೀನಿ ಅಂತ ಚೆಕ್​ ಕೊಟ್ಟಿದ್ಯಲ್ಲಪ್ಪಾ.. ಅಪ್ಪು ಸಮಾಧಿ ಬಳಿ ಗೌರಮ್ಮ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts