More

    ಸೋಲಿನ ಬೆನ್ನಲ್ಲೇ ಸಿಎಸ್​ಕೆ ತಂಡಕ್ಕೆ ಮತ್ತೊಂದು ಶಾಕ್​: ನಾಯಕ ಧೋನಿಗೆ 12 ಲಕ್ಷ ರೂ. ದಂಡ

    ಚೆನ್ನೈ: ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ನಡೆದ ಐಪಿಎಲ್​ ಟೂರ್ನಿಯ ಎರಡನೇ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್​ ಮಾಡಿದ್ದಕ್ಕೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

    ಮೂರು ಬಾರಿ ಐಪಿಎಲ್​ ಚಾಂಪಿಯನ್ ಆಗಿರುವ ಸಿಎಸ್​ಕೆ​ ತಂಡವೂ ನಿನ್ನೆ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಸೋತಿತು. ವಿಪರ್ಯಾಸವೆಂದರೆ ಧೋನಿ ಪ್ರಸಕ್ತ ಟೂರ್ನಿಯ ಮೊದಲ ಪಂದ್ಯದಲ್ಲೇ ಡಕ್​ ಔಟ್​ ಆದರು.

    ಡೆಲ್ಲಿ ಕ್ಯಾಪಿಟಲ್ಸ್ ತಂಡವು​ ಗುರಿ ಬೆನ್ನತ್ತುವಾಗ ಎದುರಾಳಿ ಸಿಎಸ್​ಕೆ ತಂಡವು ನಿಧಾನಗತಿಯಲ್ಲಿ ಬೌಲಿಂಗ್​ ಮಾಡಿದ್ದಕ್ಕಾಗಿ ಧೋನಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಮೊದಲ ಪಂದ್ಯದಲ್ಲೇ ಸಿಎಸ್​ಕೆ ಈ ಪ್ರಮಾದವನ್ನು ಎಸಗಿದೆ.

    ನಿಗದಿತ ಸಮಯಕ್ಕೆ ಪಂದ್ಯವನ್ನು ಮುಗಿಸದಿದ್ದಕ್ಕೆ ಐಪಿಎಲ್​ ಆಯೋಜಕರು ತಂಡಕ್ಕೆ ದಂಡ ವಿಧಿಸಿ ನೋಟಿಸ್​ ನೀಡಿದೆ. ಐಪಿಎಲ್-2021 ನೀತಿ ಸಂಹಿತೆಯ ಪ್ರಕಾರ 14 ನೇ ಆವೃತ್ತಿಯ ಕನಿಷ್ಠ ಓವರ್ ದರ ಗಂಟೆಗೆ 14.1 ಓವರ್‌ಗಳು. ಸ್ಟ್ರಾಟೆಜಿಕ್​ ಟೈಮ್​​ ಔಟ್​ ಬಿಟ್ಟು ಈ ಅವಧಿಯಲ್ಲಿ 14.1 ಓವರ್​ ಮುಗಿಸಲೇಬೇಕು. ಒಟ್ಟು 90 ನಿಮಿಷಗಳಲ್ಲಿ 20 ಓವರ್​ ಮುಗಿಸಲೇಬೇಕು.

    ಇದನ್ನೂ ಓದಿರಿ: Web Exclusive | ಯುವ ಸಮುದಾಯವನ್ನು ಕಾಡುತ್ತಿರುವ ಪಾರ್ಕಿನ್ಸನ್ಸ್; ಇಂದು ವಿಶ್ವ ಪಾರ್ಕಿನ್ಸನ್ಸ್ ಜಾಗೃತಿ ದಿನ

    ಆದರೆ, ಟೂರ್ನಿಯಲ್ಲಿ ಸಿಎಸ್​ಕೆ ಕೇವಲ 18.4 ಓವರ್​ ಮಾತ್ರ ಎಸೆಯಿತು. ಏಕೆಂದರೆ, ಅಷ್ಟರಲ್ಲೇ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಗುರಿಯನ್ನು ತಲುಪಿತು. ಆದರೆ, ಸಿಎಸ್​ಕೆ ಬೌಲಿಂಗ್​ ತುಂಬಾ ನಿಧಾನಗತಿಯಲ್ಲಿತ್ತು. ಹೀಗಾಗಿ ದಂಡ ವಿಧಿಸಲಾಗಿದೆ.

    ಇನ್ನು ಪಂದ್ಯದ ಗೆಲುವಿನ ವಿಚಾರಕ್ಕೆ ಬಂದರೆ, ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ರಿಷಭ್ ಪಂತ್, ಸಿಎಸ್‌ಕೆ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ (54 ರನ್, 36 ಎಸೆತ, 3 ಬೌಂಡರಿ, 4 ಸಿಕ್ಸರ್) ಆಕರ್ಷಕ ಅರ್ಧಶತಕ, ಡೆತ್ ಓವರ್‌ಗಳಲ್ಲಿ ರವೀಂದ್ರ ಜಡೇಜಾ-ಸ್ಯಾಮ್ ಕರ‌್ರನ್ ಜೋಡಿಯ ಅಬ್ಬರದ ಫಲವಾಗಿ ಸಿಎಸ್‌ಕೆ ತಂಡ 7 ವಿಕೆಟ್‌ಗೆ 188 ರನ್ ಕಲೆಹಾಕಿತು. ಪ್ರತಿಯಾಗಿ ಈ ಬೃಹತ್ ಮೊತ್ತ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 18.4 ಓವರ್‌ಗಳಲ್ಲಿ 3 ವಿಕೆಟ್‌ಗೆ 190 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

    ಪೃಥ್ವಿ ಷಾ-ಶಿಖರ್ ಧವನ್ ಅಬ್ಬರ; ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸಿಎಸ್‌ಕೆ ಎದುರು 7 ವಿಕೆಟ್ ಜಯ

    ನಿಮ್ಮ ಬದುಕಿನ ನಾಯಕ ನೀವೇ ಆಗಿರಿ…: ಸೆಲೆಬ್ರಿಟಿ ಕಾರ್ನರ್​ನಲ್ಲಿ ರವಿ ಡಿ. ಚನ್ನಣ್ಣನವರ್​

    ದೇವರ ಜಮೀನಿಗೆ ಕನ್ನ: ದೇಗುಲಗಳಿಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಭೂಮಿ ಒತ್ತುವರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts