More

    2021ನೇ ಸಾಲಿನ ಇನ್​ಸ್ಟಾಗ್ರಾಂ ಶ್ರೀಮಂತರ ಪಟ್ಟಿ ಬಿಡುಗಡೆ: ಪ್ರತಿ ಪೋಸ್ಟ್​ಗೆ ಕೊಹ್ಲಿಗೆ ಸಿಗುವ ಹಣ ಇಷ್ಟೊಂದಾ?

    ನವದೆಹಲಿ: 2021ನೇ ಸಾಲಿನ ಇನ್​ಸ್ಟಾಗ್ರಾಂ ಶ್ರೀಮಂತರ ಪಟ್ಟಿಯನ್ನು Hopperhq.com ಶುಕ್ರವಾರ (ಜುಲೈ 2) ಬಿಡುಗಡೆ ಮಾಡಿದೆ. ಫುಟ್​ಬಾಲ್​ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ, ನಟ ಹಾಗೂ ಮಾಜಿ ಡಬ್ಲ್ಯುಡಬ್ಲ್ಯುಇ ಕುಸ್ತಿಪಟು ಡ್ವೈನ್​ ಜಾನ್ಸನ್​ ಮತ್ತು ಅಮೆರಿಕನ್​ ಸಿಂಗರ್​ ಅರಿಯನಾ ಗ್ರ್ಯಾಂಡೆ ಪಟ್ಟಿಯಲ್ಲಿ ಟಾಪ್​ ಸ್ಥಾನವನ್ನು ಅಲಂಕರಿಸಿದ್ದಾರೆ.

    ಇನ್‌ಸ್ಟಾಗ್ರಾಂ ಶ್ರೀಮಂತರ ಪಟ್ಟಿಯನ್ನು ವಾರ್ಷಿಕವಾಗಿ ಬಿಡುಗಡೆ ಮಾಡಲಾಗುತ್ತದೆ. ಸೆಲೆಬ್ರಿಟಿಗಳು, ಕ್ರೀಡಾ ವ್ಯಕ್ತಿಗಳು ಮತ್ತು ಇನ್‌ಸ್ಟಾಗ್ರಾಂ ಪ್ರಭಾವಶಾಲಿಗಳು, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುವ ಪ್ರತಿ ಪೋಸ್ಟ್‌ಗೆ ಇನ್​ಸ್ಟಾಗ್ರಾಂ ಪಾವತಿಸುವ ಆಧಾರದ ಮೇಲೆ ಸ್ಥಾನ ನೀಡಲಾಗುತ್ತದೆ.

    ಇನ್​ಸ್ಟಾಗ್ರಾಂ ಶ್ರೀಮಂತ ಪಟ್ಟಿಯಲ್ಲಿ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ 308 ಮಿಲಿಯನ್ ಫಾಲೋವರ್ಸ್ ಹೊಂದಿರುವ ರೊನಾಲ್ಡೊ ಪ್ರತಿ ಪ್ರಾಯೋಜಿತ ಪೋಸ್ಟ್​ಗೆ ಸುಮಾರು 1,604,000 ಯುಎಸ್ ಡಾಲರ್ ಅಥವಾ 11.9 ಕೋಟಿ ರೂಪಾಯಿ ಸಂಪಾದಿಸುತ್ತಾರೆ.

    ರೊನಾಲ್ಡೊ ಬಳಿಕ ಡ್ವೈನ್​ ಜಾನ್ಸನ್ ಮತ್ತು ಅರಿಯಾನಾ ಗ್ರಾಂಡೆ ಕ್ರಮವಾಗಿ 11.3 ಕೋಟಿ ರೂ. (1,523,000 ಯುಎಸ್​ ಡಾಲರ್)ಮತ್ತು 11.2 ಕೋಟಿ ರೂ. (1,510,000 ಯುಎಸ್​ ಡಾಲರ್​) ಗಳಿಸಿದ್ದಾರೆ. ರಿಯಾಲಿಟಿ ಟೆಲಿವಿಷನ್ ತಾರೆ ಕೈಲಿ ಜೆನ್ನರ್ 4 ನೇ ಸ್ಥಾನದಲ್ಲಿದ್ದರೆ, ಸೆಲೆನಾ ಗೊಮೆಜ್, ಕಿಮ್ ಕಾರ್ಡಶಿಯಾನ್, ಲಿಯೋನೆಲ್ ಮೆಸ್ಸಿ ಮತ್ತು ಬೆಯೋನ್ಸ್ ಕ್ರಮವಾಗಿ ಸ್ಥಾನ ಪಡೆದಿದ್ದಾರೆ.

    ಇನ್​ಸ್ಟಾಗ್ರಾಂ ಶ್ರೀಮಂತರ ಪಟ್ಟಿಯ 30ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಸೆಲೆಬ್ರಿಟಿಗಳೆಂದರೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಪ್ರಿಯಾಂಕಾ ಚೋಪ್ರಾ. ಪ್ರಿಯಾಂಕಾ 27 ನೇ ಸ್ಥಾನದಲ್ಲಿದ್ದು, ಇನ್ಸ್​ಗ್ರಾಂನಲ್ಲಿ ಪ್ರಚಾರ ಮಾಡುವ ಪ್ರತಿ ಪೋಸ್ಟ್​ಗೆ 403,000 ಯುಎಸ್​ ಡಾಲರ್​ (ಅಂದಾಜು 3 ಕೋಟಿ ರೂ.) ಗಳಿಸುತ್ತಾರೆ. ಪ್ರಿಯಾಂಕಾ 65 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

    2020 ರಲ್ಲಿ 23 ನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಈ ವರ್ಷ 19 ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಇನ್​ಸ್ಟಾಗ್ರಾಂನಲ್ಲಿ 132 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ ಮತ್ತು ಪ್ರತಿ ಪ್ರಾಯೋಜಿತ ಪೋಸ್ಟ್​ಗೆ 680,000 ಯುಎಸ್​ ಡಾಲರ್​ (ಅಂದಾಜು 5 ಕೋಟಿ ರೂ.) ಗಳಿಸುತ್ತಾರೆ. (ಏಜೆನ್ಸೀಸ್​)

    ಯಾರು ಇಲ್ಲದ ವೇಳೆ ಯುವತಿ ಮನೆಗೆ ಎಂಟ್ರಿ ಕೊಟ್ಟ ಪಾಗಲ್​ ಪ್ರೇಮಿ! ಮುಂದೆ ನಡೆದಿದ್ದೆಲ್ಲ ಬೆಚ್ಚಿಬೀಳಿಸೋ ಘಟನೆ

    ವರನ ಮುಂದೆಯೇ ವಧುವಿಗೆ ಕಿಸ್​ ಮಾಡಿದ ಯುವಕ! ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು ಏನಿರಬಹುದು?

    ಒಂದೇ ಸೀರೆಗೆ ಕೊರಳೊಡ್ಡಿದ ಪ್ರೇಮಿಗಳು: ವಾಟ್ಸ್​ಆ್ಯಪ್​ ಸ್ಟೇಟಸ್​ ನೋಡಿ ಬೆಚ್ಚಿಬಿದ್ದ ಸ್ನೇಹಿತರು, ಪಾಲಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts