More

    ಇತಿಹಾಸ ಬರೆದ ಎಜಾಜ್​ ಪಟೇಲ್​: ಒಂದೇ ಇನ್ನಿಂಗ್ಸ್​ನಲ್ಲಿ 10 ವಿಕೆಟ್​ ಪಡೆದ ವಿಶ್ವದ 3ನೇ ಬೌಲರ್​

    ಮುಂಬೈ: ನ್ಯೂಜಿಲೆಂಡ್​ ತಂಡದ ಬೌಲರ್​ ಎಜಾಜ್​​ ಪಟೇಲ್​ ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದಿದ್ದು, ಒಂದೇ ಇನ್ನಿಂಗ್ಸ್​ನಲ್ಲಿ 10 ವಿಕೆಟ್​ ಪಡೆದ ವಿಶ್ವದ ಮೂರನೇ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಜಿಮ್​ ಲೇಕರ್​ ಮತ್ತು ಅನಿಲ್​ ಕುಂಬ್ಳೆ ಬಳಿಕ ವಿಶ್ವದ ಮೂರನೇ ಆಟಗಾರನಾಗಿ ಎಜಾಜ್​ ಪಟೇಲ್​ ತಮ್ಮ ಹೆಸರನ್ನು ಇತಿಹಾಸದ ಪುಟಕ್ಕೆ ಸೇರಿಸಿಕೊಂಡಿದ್ದಾರೆ.

    ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಟೀಮ್​ ಇಂಡಿಯಾ 109.5 ಓವರ್​ಗಳಲ್ಲಿ 325 ರನ್​ಗಳಿಗೆ ಆಲೌಟ್​ ಆಗಿದೆ. ನ್ಯೂಜಿಲೆಂಡ್​ ಪರ ಕರಾರುವಾಕ್ ದಾಳಿ ನಡೆಸಿದ ಎಜಾಜ್​ ಪಟೇಲ್​, ಟೀಮ್​ ಇಂಡಿಯಾದ 10 ವಿಕೆಟ್​ಗಳನ್ನು ಉರುಳಿಸಿ ವಿಶ್ವದಾಖಲೆ ಬರೆದರು. 47.5 ಓವರ್​ ಎಸೆದ ಎಜಾಜ್​ ಪಟೇಲ್​ 119 ರನ್​ ನೀಡಿ 10 ವಿಕೆಟ್​ಗಳನ್ನು ಕಬಳಿಸಿದರು.

    ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಉತ್ತಮ ಆರಂಭದ ನಡುವೆಯೂ ಪ್ರವಾಸಿ ತಂಡದ ಎಡಗೈ ಸ್ಪಿನ್ನರ್ ಎಜಾಜ್ ಪಟೇಲ್ (73ಕ್ಕೆ 4) ಮಾರಕ ದಾಳಿಗೆ ತತ್ತರಿಸಿತು. ಬಳಿಕ ಮಯಾಂಕ್ ಏಕಾಂಗಿ ನಿರ್ವಹಣೆ ಫಲವಾಗಿ ಭಾರತ ತಂಡ ಮೊದಲ ದಿನದಂತ್ಯಕ್ಕೆ 70 ಓವರ್‌ಗಳಲ್ಲಿ 4 ವಿಕೆಟ್‌ಗೆ 221 ರನ್ ಕಲೆಹಾಕಿತ್ತು. ಎರಡನೇ ದಿನ ಬ್ಯಾಟಿಂಗ್​ ಆರಂಭಿಸಿದ ಭಾರತ ಮಧ್ಯಾಹ್ನದ ಹೊತ್ತಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡು 109.5 ಓವರ್​ಗಳಲ್ಲಿ 325 ರನ್​ ಕಲೆಹಾಕಿತು.

    ಸದ್ಯ ಭಾರತ ನೀಡಿರುವ 325 ರನ್​ ಗುರಿಯನ್ನು ನ್ಯೂಜಿಲೆಂಡ್​ ಬೆನ್ನತ್ತಿದೆ. ನಾಯಕ ಟಾಮ್​ ಲಾಥಮ್​ ಮತ್ತು ವಿಲ್​ ಯಂಗ್​ ಕ್ರೀಸ್​ನಲ್ಲಿದ್ದಾರೆ.

    ಈ ಒಂದು ಷರತ್ತಿಗೆ ಒಪ್ಪಿಗೆ ನೀಡಿದ್ರೆ ಮಾತ್ರ ಮದುವೆ ಆಗುತ್ತಾರಂತೆ ನಟಿ ಸಾರಾ ಅಲಿ ಖಾನ್​!

    ಹೊಟ್ಟೆ ಮತ್ತು ಸೊಂಟದ ಕೊಬ್ಬು ಕರಗಲು, ಜೀರ್ಣಶಕ್ತಿ ವೃದ್ಧಿಸಲು ಊರ್ಧ್ವ ಧನುರಾಸನ ಸಹಕಾರಿ

    VIDEO| ಮೈತೋರಿಸೋ ಬಟ್ಟೆ​ ಬಗ್ಗೆ ಟ್ರೋಲ್​ ಮಾಡೋರ್ಗೆ ಉರ್ಫಿ ನೀಡಿದ ಉತ್ತರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts