ಹೈದರಾಬಾದ್: ಇಲಿಯಾನಾ ಡಿ ಕ್ರೂಸ್ ಭಾರತೀಯ ಸಿನಿರಂಗದ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ನಟಿ. ತಮ್ಮ ಮಾದಕ ನೋಟದಿಂದಲೇ ಇಲಿಯಾನಾ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಹಿಂದೆ ಗರ್ಭಿಣಿಯಾಗಿರುವ ವಿಚಾರದಲ್ಲಿ ಇಲಿಯಾನಾ ಭಾರಿ ಸುದ್ದಿಯಾಗಿದ್ದರು. ಈ ಬಗ್ಗೆ ಭಾರಿ ಚರ್ಚೆಯು ಆಗಿತ್ತು. ಆದರೆ, ಇಲಿಯಾನಾ ಮಾತ್ರ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಆದರೆ, ಇದೀಗ ಗರ್ಭಿಣಿ, ಗರ್ಭಪಾತ ಮತ್ತು ಆತ್ಮಹತ್ಯೆ ಕುರಿತು ಇಲಿಯಾನಾ ಮಾತನಾಡಿದ್ದಾರೆ.
ಕೆಲವು ವರ್ಷಗಳ ಹಿಂದೆ ಆ್ಯಂಡ್ರಿವ್ ಎಂಬುವರ ಜತೆ ನಾನು ಸಂಬಂಧದಲ್ಲಿದ್ದಿದ್ದು ನಿಮಗೆಲ್ಲ ತಿಳಿದೇ ಇದೆ. ಪರಸ್ಪರ ಒಪ್ಪಿಗೆ ಮೇರೆಗೆ 2019ರಲ್ಲಿ ಇಬ್ಬರು ವೈಯಕ್ತಿಕ ಕಾರಣಗಳಿಂದಾಗಿ ಬೇರೆ ಆಗಿದ್ದೇವೆ. ಆದಾಗ್ಯೂ ನಾನು ಸಂಬಂಧದಲ್ಲಿದ್ದಾಗ ನಾನು ಗರ್ಭಿಣಿ ಮತ್ತು ನನಗೆ ಗರ್ಭಪಾತ ಆಗಿದೆ ಎಂದು ಸಾಕಷ್ಟು ಸುದ್ದಿಯಾಗಿತ್ತು. ಇದೆಲ್ಲವು ಸುಳ್ಳು ಎಂದು ಇಲಿಯಾನಾ ಸ್ಪಷ್ಟನೆ ನೀಡಿದ್ದಾರೆ.
ಆ್ಯಂಡ್ರೀವ್ ಜತೆ ಸಂಬಂಧ ಕಡಿದುಕೊಂಡಾಗ ಎಲ್ಲರಂತೆಯೇ ನಾನು ಸಹ ಮಾನಸಿಕವಾಗಿ ಕುಸಿದಿದ್ದೆ. ಅದೇ ಸಮಯದಲ್ಲಿ ನಾನು ಆತ್ಮಹತ್ಯೆಗೆ ಯತ್ನಿಸಿದ್ದೇ ಎಂದು ಎಲ್ಲರು ಹೇಳಿದ್ದರು. ನಾನು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಮನೆಗೆಲಸದವಳು ತಡೆದಿದ್ದಾಳೆ ಎಂಬ ವದಂತಿಗಳು ಆ ಸಮಯದಲ್ಲಿ ಹರಿದಾಡುತ್ತಿದ್ದವು. ನಿಜ ಹೇಳಬೇಕೆಂದರೆ ನಾನು ಎಂದಿಗೂ ಆತ್ಮಹತ್ಯೆಯಂತಹ ಪ್ರಯತ್ನಗಳನ್ನು ಮಾಡಿಲ್ಲ. ನಿಜವಾಗಿ ನನ್ನನ್ನು ಸೇವಕಿ ಎಂದು ಕರೆಯುವವರು ಯಾರೂ ಇಲ್ಲ. ಅಂತಹ ಸುದ್ದಿಗಳಿಂದ ನಾನು ಹೊರಬರುವುದು ಕಷ್ಟವಾಗಿತ್ತು ಎಂದು ಇಲಿಯಾನಾ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.
ಟಾಲಿವುಡ್ನಲ್ಲಿ ರವಿತೇಜ ನಟನೆಯ ಅಮರ್ ಅಕ್ಬರ್ ಆಂಟೋನಿ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿರುವ ಇಲಿಯಾನಾ, ಇತ್ತೀಚೆಗೆ ಬಾಡಿ ಶೇಮಿಂಗ್ (ದೇಹದ ಆಕಾರದ ಬಗ್ಗೆ ಅವಮಾನ ಮಾಡುವುದು) ಬಗ್ಗೆಯು ಮಾತನಾಡಿದ್ದರು.
ಕೇವಲ 12ರ ವಯಸ್ಸಿನಲ್ಲಿಯೇ ಇಲಿಯಾನಾ ಬಾಡಿ ಶೇಮಿಂಗ್ ಅನುಭವಿಸಿದ್ದರಂತೆ. ನನ್ನ ಮುಂದೆ ನಡೆದ ಎಲ್ಲ ಘಟನೆಗಳು ನಿನ್ನೆಯಷ್ಟೇ ನಡೆದಿದೆ ಎನ್ನುವಷ್ಟು ನೆನಪಿದೆ. 12ನೇ ವಯಸ್ಸಿನಲ್ಲಿ ನಾನು ಬಾಡಿ ಶೇಮಿಂಗ್ ಅನುಭವಿಸಿದ್ದೆ. ಆಗ ತಾನೇ ನಾನು ವಯಸ್ಸಿಗೆ ಬಂದಿದ್ದೆ. ನಾನು ಬೆಳೆದಂತೆ ನನ್ನ ದೇಹವನ್ನು ನೋಡಿ ಕೆಲವು ಕಾಮೆಂಟ್ಗಳನ್ನು ಮಾಡುತ್ತಿದ್ದರು. ಓ ಮೈ ಗಾಡ್ ನಿನ್ನ ನಿತಂಬ ಯಾಕಿಷ್ಟ ದಪ್ಪಗಾಗಿದೆ ಎಂದು ಕೇಳುತ್ತಿದ್ದರು. ನೀವು ಏನು ಹೇಳುತ್ತಿದ್ದೀರಿ ಎಂದು ಕೇಳುತ್ತಿದೆ ಎಂದು ಇಲಿಯಾನಾ ಕಹಿ ಘಟನೆಯನ್ನು ಮೆಲಕು ಹಾಕಿದ್ದರು.
ಇದೇ ವಿಚಾರವಾಗಿ ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಅತಿ ಕೆಟ್ಟ ಕಾಮೆಂಟ್ಗಳನ್ನು ಸ್ವೀಕರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಕೆಲ ಜನರ ಇಂತಹ ಕೆಲಸಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಕಲಿತಿರುವ ಇಲಿಯಾನಾ, ತನ್ನ ದೇಹದ ಬಗ್ಗೆ ತಾನೇ ಸಕಾರಾತ್ಮಕ ಮನೋಭಾವವನ್ನು ಹೊಂದಿದ್ದಾರೆ.
ಬಾಲಿವುಡ್ನಲ್ಲಿ ಇಲಿಯಾನಾ ಕೊನೆಯದಾಗಿ ಅಭಿಷೇಕ್ ಬಚ್ಚನ್ ಅಭಿನಯದ ದಿ ಬಿಗ್ ಬುಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿರುವ ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ. (ಏಜೆನ್ಸೀಸ್)
ಶ್ವಾನಗಳ ಮಾಲೀಕರೇ ಹುಷಾರ್- ಬೀದಿಗೆ ಹೋದ ನಿಮ್ಮ ನಾಯಿಯೂ ಆಗಬಹುದು ಅರೆಸ್ಟ್!
ನುಡಿದಂತೆ ನಡೆದ ಸಂಸದೆ ಸುಮಲತಾ ಅಂಬರೀಶ್ಗೆ ಸಾರ್ವಜನಿಕರಿಂದ ಪ್ರಶಂಸೆ
ತಾಯಿಯ ಬೆನ್ನಲ್ಲೇ ಕರೊನಾದಿಂದಾಗಿ ಸಹೋದರಿಯನ್ನೂ ಕಳೆದುಕೊಂಡ ಕ್ರಿಕೆಟರ್ ವೇದಾಕೃಷ್ಣಮೂರ್ತಿ