More

    ಜೈಲಿಗೋದ್ರೆ ವಾರಕ್ಕೆ ಒಮ್ಮೆಯಾದ್ರು ಬಾಡೂಟ ಸಿಗುತ್ತೆ: ಕುಟುಂಬಕ್ಕೆ ಬೆಂಕಿಯಿಟ್ಟವನ ಭಯಾನಕ ಕತೆ ಇದು

    ತೊಡುಪುಳ: ನಾನು ಜೈಲಿಗೋದರೆ ವಾರಕ್ಕೆ ಒಮ್ಮೆಯಾದರೂ ಮಟನ್​ ಸಿಗುತ್ತದೆ. ಮನೆಯಲ್ಲಿ ಈ ರೀತಿ ಸಿಗುವುದಿಲ್ಲ ಎಂದು ಕೊಲೆ ಪ್ರಕರಣದ ಆರೋಪಿಯೊಬ್ಬ ನೀಡಿರುವ ಹೇಳಿಕೆ ಕಾನೂನು ಸುವ್ಯವಸ್ಥೆಗೆ ಬೆದರಿಕೆ ಹಾಕಿದಂತಿದೆ.

    ಮಗ ಮತ್ತು ಆತನ ಕುಟುಂಬಕ್ಕೆ ಬೆಂಕಿಯಿಟ್ಟು ಹತ್ಯೆ ಮಾಡಿದ ಆರೋಪದಲ್ಲಿ ಆರೋಪಿ ಹಮೀದ್​ನನ್ನು ಬಂಧಿಸಲಾಗಿದೆ. ಇದಕ್ಕೂ ಕೆಲವು ದಿನಗಳಿಗೂ ಮುಂಚೆ ಆರೋಪಿ ಹಮೀದ್​ ಟೀ ಶಾಪ್​ ಒಂದರಲ್ಲಿ ಮಾತನಾಡಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಕೊಲೆ ಮಾಡಿ ಜೈಲಿಗೆ ಹೋದರೆ ಅಲ್ಲಿಯೇ ಆರಾಮಾಗಿ ಇರಬಹುದು. ವಾರಕ್ಕೆ ಒಮ್ಮೆ ಮಟನ್​ ಊಟ ದೊರೆಯುತ್ತದೆ. ಮನೆಯಲ್ಲೂ ಕೂಡ ಇದು ಸಿಗುವುದಿಲ್ಲ ಎಂದು ಹೇಳಿದ್ದನಂತೆ.

    ಪ್ರತಿದಿನ ಮೂರು ಬಾರಿಯೂ ನನಗೆ ಮೀನು ಮತ್ತು ಮಾಂಸವನ್ನು ನೀಡುತ್ತಿಲ್ಲ ಎಂದು ಈ ಹಿಂದೆ ಹಲವಾರು ಬಾರಿ ಕುಟುಂಬದ ಜತೆ ವಾಗ್ವಾದಕ್ಕೆ ಇಳಿದಿದ್ದನಂತೆ. ತನ್ನ ಆಸ್ತಿಯನ್ನು ಮರಳಿಸುವಂತೆ ಮಗನ ವಿರುದ್ಧವೇ ತೊಡಪುಳ ಮುನ್ಸಿಫ್​ ಕೋರ್ಟ್​ನಲ್ಲಿ ಹಮೀದ್​ ದೂರು ದಾಖಲಿಸಿದ್ದ. ಅಲ್ಲದೆ, ತನ್ನ ಜೀವನ ವೆಚ್ಚಕ್ಕಾಗಿಯೂ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದ ಎಂದು ತಿಳಿದುಬಂದಿದೆ.

    ಇದರ ನಡುವೆ ಫೆ. 25ರಂದು ಮಗ ಫೈಜಲ್​ ತಂದೆ ಹಮೀದ್​ ವಿರುದ್ಧ ಕರಿಮನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಜಮೀನನ್ನು ಮರಳಿಸದೇ ಹೋದರೆ, ಪೆಟ್ರೋಲ್​ ಸುರಿದು ಕೊಲೆ ಮಾಡುವುದಾಗಿ ತಂದೆಯಿಂದ ಬೆದರಿಕೆ ಕರೆ ಬರುತ್ತಿದ್ದೆ ಎಂದು ಉಲ್ಲೇಖಿಸಿದ್ದ.

    ಇದೆಲ್ಲ ನಡೆದ ಬಳಿಕ ಫೈಜಲ್​, ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಒಂದು ಕೋಣೆಯಲ್ಲಿ ಮಲಗಲು ಆರಂಭಿಸಿದರು. ಇದು ಹಮೀದ್​ ಅಂದುಕೊಂಡ ಕೆಲಸಕ್ಕೆ ಸುಲಭವಾಯಿತು. ತುಂಬಾ ಕೋಪಗೊಂಡಿದ್ದ ಹಮೀದ್​ ಪೆಟ್ರೋಲ್​ ಸುರಿದು ಮಗ ಮತ್ತು ಆತನ ಕುಟುಂಬವನ್ನೇ ಕೊಲೆ ಮಾಡಿದ್ದು, ಇದನ್ನು ಪೊಲೀಸರ ಮುಂದೆಯೂ ಒಪ್ಪಿಕೊಂಡಿದ್ದಾನೆ. ನನಗೆ ಜಮೀನು ಹಿಂತಿರುಗಿಸಲು ನಿರಾಕರಿಸಿದ್ದಲ್ಲದೆ, ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ಇದು ಕೊಲೆಗೆ ಕಾರಣವಾಯಿತು ಎಂದು ತಪ್ಪೊಪ್ಪಿಕೊಂಡಿದ್ದಾನೆ.

    ಘಟನೆ ನಡೆದ ದಿನ ಫೈಜಲ್​ ನನ್ನ ಮೇಲೆ ಹಲ್ಲೆ ಮಾಡಿದ್ದ. ಈ ಕೋಪವೂ ಇತ್ತು ಎಂದು ಹೇಳಿದ್ದಾನೆ. ಆರೋಪಿಯನ್ನು ಬಂಧಿಸಿದ ಬಳಿಕ ಸಾಕ್ಷಿ ಕಲೆಹಾಕಲು ಘಟನಾ ಸ್ಥಳಕ್ಕೆ ತೆರಳಿದ್ದಾಗ ಸ್ಥಳೀಯರು ಆರೋಪಿ ಹಮೀದ್​ ವಿರುದ್ಧ ಇದೇ ಸಂದರ್ಭದಲ್ಲಿ ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದರು.

    ಇದು ಯೋಜಿತ ಕೊಲೆ ಎಂದು ಅಪರಾಧ ಸ್ಥಳಕ್ಕೆ ಭೇಟಿ ನೀಡಿದ ಎರ್ನಾಕುಲಂ ರೇಂಜ್ ಡಿಐಜಿ ನೀರಜ್ ಕುಮಾರ್ ಗುಪ್ತಾ ಹೇಳಿದ್ದಾರೆ. ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಆಸ್ತಿ ವಿವಾದ ನಡೆಯುತ್ತಿತ್ತು. ತನಿಖೆಯನ್ನು ತೊಡುಪುಳ ಡಿವೈಎಸ್ಪಿಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಭಿಕ್ಷುಕನ ಜತೆ ಜಿಮ್​ ಟ್ರೈನರ್​ ಪತ್ನಿಯ ಸರಸ: ಆಕೆ ಹೇಳಿದ್ದನ್ನು ಕೇಳಿ ಗಂಡನೇ ಶಾಕ್, ಸಿಸಿಟಿವಿಯಲ್ಲಿ ಕಳ್ಳಾಟ ಸೆರೆ!​

    ಕಣ್ಣೆದುರೇ ಹಿಂದೂಗಳ ಶವಗಳ ರಾಶಿ, ಇಸ್ಲಾಂ ಒಪ್ಪಿಕೊಳ್ಳಲು ಬೆದರಿಕೆ… ಆಗಲೇ ಸರ್ಕಾರ ಮನಸ್ಸು ಮಾಡಿದ್ದರೆ…

    ಹೋಳಿ ಹಬ್ಬದಂದು ಪಬ್​ನಲ್ಲಿ ಯುವಕರು ಮಾಡಿದ ಎಡವಟ್ಟು ಇಂಟರ್ನೆಟ್​ ಸೆಲೆಬ್ರಿಟಿಯ ಪ್ರಾಣ ಕಸಿಯಿತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts