More

    ಜೀವನಪೂರ್ತಿ ನಾನು ತಪ್ಪಿತಸ್ಥಳೆಂಬ ಭಾವನೆ ಕಾಡುತ್ತಿರುತ್ತದೆ: ನಟಿ ಯಶಿಕಾ ಆನಂದ್​ ಕಣ್ಣೀರು..!

    ಚೆನ್ನೈ: ಕಾಲಿವುಡ್​ನ ವಯಸ್ಕರ ಕಾಮಿಡಿ ಚಿತ್ರ “ಇರುಟ್ಟು ಅರಯಿಲ್ ಮುರಟ್ಟು ಕುತ್ತು” ಚಿತ್ರ ಹಾಗೂ ಬಿಗ್​ಬಾಸ್​ ಶೋ ಮೂಲಕ ಖ್ಯಾತಿ ಪಡೆದಿರುವ ನಟಿ ಯಶಿಕಾ ಆನಂದ್ ಕಳೆದ ವಾರ ಕಾರು ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಭೀಕರ ಅಪಘಾತದಲ್ಲಿ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿಯನ್ನು ಯಶಿಕಾ ಕಳೆದುಕೊಂಡಿದ್ದಾರೆ.

    ಯಶಸ್ವಿ ಸರ್ಜರಿಯ ಬಳಿಕ ನಿನ್ನೆಯಷ್ಟೇ ಯಶಿಕಾ ಐಸಿಯುನಿಂದ ಸಾಮಾನ್ಯ ವಾರ್ಡ್​ ಸ್ಥಳಾಂತರ ಆಗಿದ್ದಾರೆ. ನಾಳೆ ಯಶಿಕಾ ಅವರ ಹುಟ್ಟುಹಬ್ಬವಾಗಿದ್ದು, ಕಾರು ಅಪಘಾತವು ಅವರ ಜೀವನದಲ್ಲಿ ಎಂದು ಮರೆಯದ ಕಹಿ ಘಟನೆಯಾಗಿಯೇ ಉಳಿದಿದೆ. ಕಣ್ಣ ಮುಂದೆಯೇ ಸ್ನೇಹಿತೆಯ ಸಾವನ್ನು ಮರೆಯದ ಯಶಿಕಾ, ಹುಟ್ಟುಹಬ್ಬಕ್ಕೂ ಮುಂಚೆ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಬಹಖ ದುಃಖದಿಂದ ಬರೆದುಕೊಂಡಿದ್ದಾರೆ.

    ಸ್ನೇಹಿತೆ ಭವಾನಿ ಸಾವಿಗೆ ಸಂತಾಪ ಸೂಚಿಸಿ ಅವರ ಕುಟುಂಬಕ್ಕೆ ಯಶಿಕಾ ಸಾಂತ್ವಾನ ಹೇಳಿದ್ದಾರೆ. ನಾನೀಗ ಏನನ್ನು ಅನುಭವಿಸುತ್ತಿದ್ದೇನೆ ಎಂದು ಹೇಳಲು ಸಾಧ್ಯವಿಲ್ಲ. ಜೀವಂತವಾಗಿರುವುದಕ್ಕೆ ನಾನು ಎಂದೆಂದಿಗೂ ತಪ್ಪಿತಸ್ಥನೆಂದು ಭಾವಿಸುತ್ತೇನೆ. ಭೀಕರ ಅಪಘಾತದಿಂದ ನನ್ನ ಉಳಿಸಿದ್ದಕ್ಕೆ ದೇವರಿಗೆ ಧನ್ಯವಾದ ಹೇಳಬೇಕೋ ಅಥವಾ ಒಳ್ಳೆಯ ಸ್ನೇಹಿತೆಯನ್ನು ನನ್ನಿಂದ ದೂರ ಮಾಡಿದ್ದಕ್ಕೆ ದೂಷಿಸಬೇಕೋ ತಿಳಿಯುತ್ತಿಲ್ಲ. ಭವಾನಿಯನ್ನು ನಿಜವಾಗಿಯೂ ನಾನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ನೀನು ನನ್ನ ಕ್ಷಮಿಸುತ್ತೀಯ ಎಂದು ತಿಳಿದಿದೆ. ಕ್ಷಮಿಸು ಭವಾನಿ, ನಾನು ನಿಮ್ಮ ಕುಟುಂಬವನ್ನು ದುಃಖಕರ ಪರಿಸ್ಥಿತಿಯಲ್ಲಿಟ್ಟಿದ್ದೇನೆ. ಪ್ರತಿಯೊಂದು ಕ್ಷಣವೂ ನಿನ್ನನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಜೀವನಪೂರ್ತಿ ನಾನು ತಪ್ಪಿತಸ್ಥಳಾಗಿ ಉಳಿಯುತ್ತೇನೆ. ನಿನ್ನ ಆತ್ಮಕ್ಕೆ ಶಾಂತಿ ಸಿಗಲೆಂದು ಬಯಸುತ್ತೇನೆ. ನಿನ್ನನ್ನು ಮರಳಿ ಪಡೆಯಲು ಪ್ರಾರ್ಥಿಸುತ್ತೇನೆ. ಒಂದು ದಿನ ನಿಮ್ಮ ಕುಟುಂಬ ನನ್ನನ್ನು ಕ್ಷಮಿಸುತ್ತದೆ ಎಂದು ಭಾವಿಸಿದ್ದೇನೆ. ನಿನ್ನ ನೆನಪುಗಳೊಂದಿಗೆ ಸದಾ ಜೀವಿಸುತ್ತೇನೆಂದು ಯಶಿಕಾ, ಭವಾನಿ ಕುರಿತು ಬರೆದುಕೊಂಡಿದ್ದಾರೆ.

    ಇದೇ ವೇಳೆ ಅಭಿಮಾನಿಗಳಿಗೆ ಸಂದೇಶ ರವಾನಿಸಿರುವ ಯಶಿಕಾ, ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಹಾಗೆಯೇ ಹುಟ್ಟುಹಬ್ಬ ಆಚರಿಸಿದಂತೆ ಅಭಿಮಾನಿಗಳ ಬಳಿಯೂ ಕೇಳಿದ್ದಾರೆ.

    ಪ್ರಸ್ತುತ ಯಶಿಕಾ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಯಶಿಕಾ ಚೇತರಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ. ಆದಷ್ಟು ಬೇಗ ಯಶಿಕಾ ಸಹಜ ಸ್ಥಿತಿಗೆ ಬರಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಯಶಿಕಾ ಕಾರು ಅಪಘಾತ ಪ್ರಕರಣ: ಮೃತ ಭವಾನಿ ಧರಿಸಿದ್ದ ಉಡುಗೆಯೇ ದುರಂತಕ್ಕೆ ಕಾರಣವಾಯ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts