More

    ಅಧಿಕೃತ ಶಾಲಾ ಪ್ರಮಾಣ ಪತ್ರಗಳನ್ನು ಕಳೆದು ಹಾಕಿದ ಬ್ಯಾಂಕ್​ಗೆ ತಕ್ಕ ಪಾಠ ಕಲಿಸಿದ ಮಹಿಳೆ..!

    ಹೈದರಾಬಾದ್​: ಕಡಿಮೆ ಅವಧಿಯವರೆಗೆ ಕೆಲಸ ಮಾಡಿ, ಉದ್ಯೋಗವನ್ನು ಬಿಟ್ಟ ಮಹಿಳೆಯೊಬ್ಬಳ ಅಧಿಕೃತ ಶಾಲಾ ಪ್ರಮಾಣ ಪತ್ರಗಳನ್ನು ನೀಡುವಲ್ಲಿ ವಿಫಲವಾದ ಐಸಿಐಸಿಐ ಬ್ಯಾಂಕ್​ ಮಹಿಳೆಗೆ ಪರಿಹಾರವಾಗಿ 1.15 ಲಕ್ಷ ರೂಪಾಯಿಗಳನ್ನು ನೀಡಿದೆ.

    ಶ್ರೀನಿಜಾ ಎಂಬುವರು ಹೈದರಾಬಾದ್​ನ ಐಸಿಐಸಿಐ ಬ್ಯಾಂಕ್​​ ಒಂದರಲ್ಲಿ ಕಡಿಮೆ ಅವಧಿಗೆ ಕೆಲಸ ಮಾಡಿ ಕೆಲ ಕಾರಣಗಳಿಂದಾಗಿ ಉದ್ಯೋಗ ಬಿಟ್ಟಿದ್ದರು. ಬಳಿಕ ತನ್ನ ಅಧಿಕೃತ ಶಾಲಾ ಪ್ರಮಾಣ ಪತ್ರಗಳು ಬೇಕೆಂದು ಬ್ಯಾಂಕ್​ನಲ್ಲಿ ಕೇಳಿದ್ದರು. ಆದರೆ, ಕಳೆದುಹೋಗಿವೆ ಎಂದು ಬ್ಯಾಂಕ್​ ಸಿಬ್ಬಂದಿ ಉಡಾಫೆ ಉತ್ತರ ನೀಡಿದ ಬೆನ್ನಲ್ಲೇ ಶ್ರೀನಿಜಾ ಲೋಕ್​ ಅದಾಲತ್​ ಮೆಟ್ಟಿಲು ಏರಿದ್ದರು.

    ಪ್ರಕರಣ ಸಂಬಂಧ ಶನಿವಾರ ಲೋಕ್​ ಅದಾಲತ್​ ವಿಚಾರಣೆ ನಡೆಸಿ ಶ್ರೀನಿಜಾ ಅವರಿಗೆ 1.15 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. ಅದರಂತೆ ಬ್ಯಾಂಕ್​ ಕೂಡ ಪರಿಹಾರವನ್ನು ನೀಡಿ ಪ್ರಕರಣಕ್ಕೆ ತೆರೆ ಎಳೆದಿದೆ.

    ಮತ್ತೊಂದು ಪ್ರಕರಣದಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್​ನಿಂದ ಅಪಘಾತಕ್ಕೆ ಒಳಗಾದ ಮಹಿಳೆ ಗಾಯಗೊಂಡು ಪರಿಹಾರಕ್ಕಾಗಿ ಸಿಕಂದರಾಬಾದ್ ಸಿವಿಲ್ ಕೋರ್ಟ್​ಗೆ ಅರ್ಜಿ ಹಾಕಿದ್ದಳು. ನ್ಯಾಯಾಲಯವು 30,000 ರೂ. ಪಾವತಿಸುವಂತೆ ಆದೇಶಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಡೆಲಿವರಿ ಬಾಯ್​, ನನ್ನ ಆರ್ಥಿಕ ಪರಿಸ್ಥಿತಿಯು ದೊಡ್ಡ ಮೊತ್ತವನ್ನು ಪಾವತಿಸುವಷ್ಟು ಉತ್ತಮವಾಗಿಲ್ಲ. ಹೀಗಾಗಿ ಕಂತುಗಳಲ್ಲಿ ಪಾವತಿಸುಸುತ್ತೇನೆಂದು ಕೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಪದವೀಧರರಿಗೆ ಗುಡ್‌ನ್ಯೂಸ್‌- 6100 ಮಂದಿ ಅಪ್ರೆಂಟಿಸ್‌ಗೆ ಆಹ್ವಾನಿಸಿದ ಎಸ್‌ಬಿಐ

    ಎಲ್ಲರ ಬಾಯಲ್ಲೂ ಇಡ್ಲಿ!; ಯಾಕೆ ಯಾಕೆ ಅನ್ನೋದೇ ಹಲವರ ಪ್ರಶ್ನೆ!

    ತಮ್ಮನ ಸ್ಕೂಟರ್ ರಗಳೆ ಕೇಳಲಾಗದೆ ಅಣ್ಣ ಮಾಡಿದ ಕೆಲಸಕ್ಕೆ ಪೂರ್ತಿ ದೇಶದ ಮೆಚ್ಚುಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts