More

    ಹುಬ್ಬಳ್ಳಿ ಗಲಭೆ ಪ್ರಕರಣ: ಏ.20ರವರೆಗೆ ನಗರದಾದ್ಯಂತ 144 ಸೆಕ್ಷನ್​​ ಜಾರಿ, ವಾಣಿಜ್ಯ ನಗರದ ಪರಿಸ್ಥಿತಿ ಉದ್ವಿಗ್ನ

    ಹುಬ್ಬಳ್ಳಿ: ಏ.20ರವರೆಗೆ ನಗರದಾದ್ಯಂತ ಸಿಆರ್ ಪಿಸಿ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಲಾಭೂರಾಮ ಆದೇಶ ಹೊರಡಿಸಿದ್ದಾರೆ.

    ಗಲಭೆ ನಿಯಂತ್ರಿಸುವ ಉದ್ದೇಶದಿಂದ ನಗರದಾದ್ಯಂತ ನಾಲ್ಕು ದಿನ ಏ.16 ರಾತ್ರಿಯಿಂದ ಏ.20ರ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಗಲಭೆಕೋರರ ಬಂಧನಕ್ಕೆ ಪೊಲೀಸ್ ಆಯುಕ್ತರು 8 ತಂಡ ರಚಿಸಿದ್ದಾರೆ. ಸದ್ಯ ಗಲಭೆಗೆ ಕಾರಣರಾದ ಹತ್ತಕ್ಕೂ ಹೆಚ್ಚು ಜನರನ್ನು ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.

    ಠಾಣೆ ಎದುರು ಸುತ್ತಮುತ್ತ ಬಿದ್ದಿರುವ ಕಲ್ಲಿನ ರಾಶಿಗಳನ್ನು ಪಾಲಕೆಯ ಪೌರ ಕಾರ್ಮಿಕರು ಸ್ವಚ್ಛಗೊಳಿಸುತ್ತಿದ್ದಾರೆ. ಗಲಭೆಕೋರರು ಮೊದಲೇ ಸಂಚು ರೂಪಿಸಿ ರಾಶಿ ಕಲ್ಲು ತಂದಿದ್ದರು ಎಂಬ ಆರೋಪ ಕೇಳಿ ಬಂದಿದ್ದು, ಈ ನಿಟ್ಟಿನಲ್ಲೂ ತನಿಖೆ ಮುಂದುವರಿದಿದೆ.

    ನಗರದೆಲ್ಲೆಡೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಹೆಚ್ಚಿನ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

    ಆಗಿದ್ದೇನು?
    ಮಸೀದಿ ಮೇಲೆ ಭಗವಾಧ್ವಜ ಹಾರಿಸಿದಂಥ ವಿಡಿಯೋ ಸ್ಟೇಟಸ್​​ಗೆ ಹಾಕಿಕೊಂಡಿದ್ದರಿಂದ ಇಂಥದ್ದೊಂದು ಗಲಾಟೆಗೆ ಮೂಲಕಾರಣವಾಗಿದೆ. ಆನಂದ ನಗರ ಘೋಡಕೆ‌ ಫ್ಲ್ಯಾಟ್​ ನಿವಾಸಿಯೊಬ್ಬ ಹೀಗೊಂದು ಎಡಿಟೆಡ್ ವಿಡಿಯೋ ಸ್ಟೇಟಸ್​ಗೆ ಹಾಕಿಕೊಂಡಿದ್ದ. ಈ ವಿಷಯ ತಿಳಿದ ಕೂಡಲೇ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಆ ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ಯುವಕನನ್ನು ವಶಕ್ಕೆ ಪಡೆದ ವಿಷಯ ತಿಳಿಯುತ್ತಿದ್ದಂತೆ ನೂರಾರು ಜನ ಠಾಣೆ ಬಳಿ ಜಮಾಯಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿದೆ. ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಪೊಲೀಸರು ಯುವಕನ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಠಾಣೆ ಬಳಿ ಜಮಾಯಿಸಿದ ಒಂದು ಸಮುದಾಯದ ಜನರು ಕಲ್ಲುತೂರಾಟ ನಡೆಸಿದ್ದು, ಪೊಲೀಸ್ ಜೀಪ್ ಪಲ್ಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದು, ಅಶ್ರವಾಯು ಸಿಡಿಸುತ್ತಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

    ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಎದುರೇ ಕಲ್ಲು ತೂರಾಟ; ವಾಹನ ಪಲ್ಟಿ ಮಾಡಿ ಆಕ್ರೋಶ, ಪರಿಸ್ಥಿತಿ ಉದ್ವಿಗ್ನ..

    ಮತ್ತೊಮ್ಮೆ ಸಾಮಾನ್ಯರ ಪಾಲಿನ ದೇವರಾದ ಸೂರ್ಯ: ಇದಲ್ಲವೇ ನಟನಿಗೆ ಇರಬೇಕಾದ ಸಾಮಾಜಿಕ ಕಳಕಳಿ

    ಆಂಜನೇಯನ ಜನ್ಮ ಸ್ಥಳದಲ್ಲಿ ‌ಹಿಂದುಗಳಿಗೆ ಟಿಕೆಟ್ ನೀಡದಿದ್ರೆ ಸೋಲು ಫಿಕ್ಸ್​: ಕಾಂಗ್ರೆಸ್​ನಲ್ಲೇ ಗೊಂದಲ ಶುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts