More

    ಮಾಸ್ಕ್​ನಿಂದ ಮುಖ ಮುಚ್ಚಿಕೊಂಡು ಓಡಾಡ್ತಿರುವ ರಾಜ್​ ಕುಂದ್ರಾ: ಹೀಗ್ಯಾಕಾದ್ರು ಶಿಲ್ಪಾ ಪತಿ? ಇಲ್ಲಿದೆ ಕಾರಣ…

    ಮುಂಬೈ: ನಟಿ ಶಿಲ್ಪಾ ಶೆಟ್ಟಿ ಅವರ ಪಾಪರಾಜಿಗಳು ಫೇವರಿಟ್​ ಎಂಬುದು ಎಲ್ಲರಿಗು ತಿಳಿದಿದೆ. ಎಲ್ಲೇ ಹೋಗಲಿ ಅವರಿಗೆ ಎದುರಾಗುವ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ನಗುತ್ತಲೇ ಪೋಸ್​​ ನೀಡುತ್ತಾರೆ. ಆದರೆ, ಶಿಲ್ಪಾ ಅವರ ಪತಿ ರಾಜ್​ ಕುಂದ್ರಾ ಕೆಲವು ದಿನಗಳಿಂದ ಪಾಪರಾಜಿಗಳಿಗೆ ಮುಖ ತೋರಿಸದಂತೆ ಫೇಸ್​ ಮಾಸ್ಕ್​ನಿಂದ ಮುಚ್ಚಿಕೊಳ್ಳುತ್ತಿದ್ದಾರೆ.

    ವಿಚಿತ್ರ ಕಪ್ಪು ಮಾಸ್ಕ್​ ಮತ್ತು ಹೆಲ್ಮೆಟ್​ನಿಂದ ತಮ್ಮ ಮುಖವನ್ನು ರಾಜ್​ ಕುಂದ್ರಾ ಮರೆ ಮಾಚಿಕೊಳ್ಳುತ್ತಿದ್ದಾರೆ. ಸದ್ಯ ಪಾಪರಾಜಿಗಳು ಕೂಡ ಅದಕ್ಕೆ ಹೊಂದಿಕೊಂಡಿದ್ದಾರೆ. ಆದರೆ, ಎಷ್ಟು ದಿನ ಅಂತಾ ಮುಖ ಮುಚ್ಚಿಕೊಂಡು ಓಡಾಡಲು ಸಾಧ್ಯ ಅನ್ನೋದೇ ಎಲ್ಲರ ಪ್ರಶ್ನೆ.

    ಕಳೆದ ರಾತ್ರಿ ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ಅವರು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಮನೆಯಿಂದ ಹೊರ ಬಂದರು. ಶಿಲ್ಪಾ ಅವರು ನೀಲಿ ಬಣ್ಣದ ಚಿಫಾನ್​ ಉಡುಗಡೆಯಲ್ಲಿ ಮಿಂಚಿದರು ಮತ್ತು ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಪೋಸ್​ ನೀಡಿದರು. ಆದರೆ, ರಾಜ್​ ಕುಂದ್ರಾ ಕಪ್ಪು ಬಣ್ಣದ ಉಡುಗೆ ಧರಿಸುವ ಜೊತೆಗೆ ಅದೇ ಬಣ್ಣದ ಫೇಸ್​ ಮಾಸ್ಕ್​ ಧರಿಸಿಕೊಂಡು ಕಾರಿನಿಂದ ಕೆಳಗಿಳಿದರು. ಈ ವೇಳೆ ಬಹುತೇಕರಿಗ ಕುಂದ್ರಾ ಲುಕ್​ ನೋಡಿ ಗೊಂದಲ ಉಂಟಾಗಿದ್ದು ಉಂಟು.

    ವಯಸ್ಕರ ಸಿನಿಮಾ ದಂಧೆ ಪ್ರಕರಣದಲ್ಲಿ ಬಂಧನವಾದಾಗಿ ಜಾಮೀನಿನ ಮೇಲೆ ಬಿಡುಗಡೆಯಾದಾಗಿನಿಂದ ರಾಜ್​ ಕುಂದ್ರಾ ತಮ್ಮ ಮುಖವನ್ನು ಮಾಸ್ಕ್​ನಿಂದ ಮುಚ್ಚಿಕೊಂಡು ಓಡಾಡುತ್ತಿರುತ್ತಾರೆ. ಕಳೆದ ಫೆಬ್ರವರಿಯಲ್ಲಿ ಮುಂಬೈ ಪೊಲೀಸರು ಅವರನ್ನು ಬಂಧಿಸಿದರು. ವೆಬ್​ಸರಣಿಗಳಲ್ಲಿ ಅವಕಾಶ ನೀಡುವುದಾಗಿ ನಂಬಿಸಿ, ನೀಲಿ ಚಿತ್ರಗಳನ್ನು ಸೆರೆಹಿಡಿಯುತ್ತಿದ್ದರು ಎಂಬ ಆರೋಪ ಕುಂದ್ರಾ ಮೇಲಿದೆ.

    ಸದ್ಯ ಕುಂದ್ರಾ ಜಾಮೀನಿನ ಮೇಲೆ ಹೊರಗಿದ್ದಾರೆ. ಆದರೆ, ಹೊರಗಡೆ ಹೋಗುವಾಗ ಪಾಪರಾಜಿಗಳಿಗೆ ಮುಖ ತೋರಿಸಬೇಕಾಗುತ್ತದೆ ಅಂತ ತಮ್ಮ ಮುಖವನ್ನು ಕಪ್ಪು ಬಣ್ಣದ ಮಾಸ್ಕ್​ನಿಂದ ಮುಚ್ಚಿಕೊಂಡು ತಿರುಗಾಡುತ್ತಿದ್ದಾರೆ. (ಏಜೆನ್ಸೀಸ್​)

    ಪಾವಗಡದಲ್ಲಿ ತಪ್ಪಿದ ಮತ್ತೊಂದು ಬಸ್ ದುರಂತ: ರಭಸವಾಗಿ ಹರಿಯುವ ನೀರಿನಲ್ಲಿ ಸಿಲುಕಿದ ಖಾಸಗಿ ಬಸ್

    ಅನೈತಿಕ ಸಂಬಂಧಕ್ಕೆ ಶಿಕ್ಷಕಿ ಬಲಿ: 6 ತಿಂಗಳ ಬಳಿಕ ಆರೋಪಿಗಳ ಹೆಡೆಮುರಿ ಕಟ್ಟಿದ ನಂಜನಗೂಡು ಪೊಲೀಸರು

    ಜಾಲತಾಣದಲ್ಲಿ ವಿದ್ಯಾರ್ಥಿ ಹಾಕಿದ್ದ ಪೋಸ್ಟ್​ ಓದುತ್ತಾ ಕಾಲೇಜು ವೇದಿಕೆಯಲ್ಲೇ ಕಣ್ಣೀರಾಕಿದ ಶಾಸಕ ಸಾರಾ ಮಹೇಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts