More

    ಅನ್ಯಜಾತಿಯ ಯುವತಿಯನ್ನು ಪ್ರೀತಿಸಿ ಮದ್ವೆಯಾದ 21 ವರ್ಷದ ಯುವಕನ ಬರ್ಬರ ಹತ್ಯೆ

    ಹೈದರಾಬಾದ್​: ಅನ್ಯ ಜಾತಿಯ ಯುವತಿಯನ್ನು ಮದುವೆ ಆಗಿದ್ದಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್​ನ ಬೇಗುಂ ಬಜಾರ್​ನಲ್ಲಿ ನಡೆದಿದೆ. ಐದು ಮಂದಿಯ ಗ್ಯಾಂಗ್​ ಯುವನನ್ನು ನಡುರಸ್ತೆಯಲ್ಲೇ ಕುಟುಂಬದ ಎದುರಲ್ಲೇ ಮಾರಕಾಸ್ತ್ರಗಳಿಂದ ಇರಿದು ಕೊಂದಿದ್ದಾರೆ.

    ಈ ಘಟನೆ ಶುಕ್ರವಾರ ರಾತ್ರಿ 7.30ರ ಸುಮಾರಿಗೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಶಾಹಿನಾಯತ್‌ಗುಂಜ್ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈವರೆಗೂ ಕೊಲೆಗಾರರ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ದೊರೆತಿಲ್ಲ. ಮಾಹಿತಿ ಕಲೆಹಾಕುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

    ಮೃತ ಯುವಕನನ್ನು ನೀರಜ್​ ಪನ್ವಾರ್ (21)​ ಎಂದು ಗುರುತಿಸಲಾಗಿದೆ. ಈತ ಬೇರೊಂದು ಜಾತಿಯ ಯುವತಿಯನ್ನು ಮದುವೆ ಆಗಿದ್ದ. ಇಬ್ಬರ ಮದುವೆ ಯುವತಿ ಮನೆಯವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ವಿರೋಧದ ನಡುವೆಯೂ ಮದುವೆಯಾಗಿದ್ದರು. ದಂಪತಿಗೆ ಎರಡೂವರೆ ತಿಂಗಳ ಹಸಿಗೂಸಿದೆ. ನೀರಜ್​ ಪನ್ವಾರ್​ ಬೇಗುಂ ಬಜಾರ್​ನಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದನು.

    ಯುವತಿಯ ಕುಟುಂಬದವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ನೀರಜ್​ಗೆ ತಲೆ, ಎದೆ ಹಾಗೂ ಇನ್ನಿತರ ಭಾಗಗಳಿಗೆ ಇರಿದು ಕೊಂದಿದ್ದಾರೆ. ನೀರಜ್​ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.

    ನೀರಜ್​ ಸಾವಿನ ಬಗ್ಗೆ ಆತನ ತಂದೆ ಮಾತನಾಡಿದ್ದು, ಪ್ರೇಮ ವಿವಾಹವಾಗಿದ್ದಕ್ಕೆ ನನ್ನ ಮಗನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಹಿಂದಿನಿಂದ ಆತನಿಗೆ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್​)

    ಧಾರವಾಡದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಕ್ರೂಸರ್​ ಮರಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ 7 ಮಂದಿ ದುರ್ಮರಣ

    ಕಾಣೆಯಾದವರ ಸುತ್ತ ಕಣ್ಣಾಮುಚ್ಚಾಲೆ; ವಿಜಯವಾಣಿ ಸಿನಿಮಾ ವಿಮರ್ಶೆ

    ಡಿಂಗರ್ ಬಿಲ್ಲಿ ಬೇಬಿ ಡಾಲ್!; 7 ವರ್ಷಗಳ ಬಳಿಕ ಕನ್ನಡಕ್ಕೆ ಸನ್ನಿ ವಾಪಸ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts